ಉಕ್ರೇನ್‌ನೊಂದಿಗೆ ಮಾತುಕತೆ ನಡೆಸಲು ರಷ್ಯಾ ಸಿದ್ಧ
ಮಾಸ್ಕೋ, ಫೆಬ್ರವರಿ 25: ಉಕ್ರೇನ್‌ನೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಲು ರಷ್ಯಾ ಸಿದ್ಧವಾಗಿದೆ ಎಂದು ವ್ಲಾಡಿಮಿರ್ ಪುಟಿನ್ ಅವರು ಇಂದು ದೂರವಾಣಿ ಸಂಭಾಷಣೆಯಲ್ಲಿ ಕ್ಸಿ ಜಿನ್‌ಪಿಂಗ್‌ಗೆ ತಿಳಿಸಿದರು ಎಂದು ಚೀನಾದ ವಿದೇಶಾಂಗ ಸಚಿವಾಲಯ ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಿದೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಮಧ್ಯೆ ಉಭಯ ನಾಯಕರ ದೂರವಾಣಿ ಸಂಭಾಷಣೆ ನಡೆದಿದೆ.
ಉಕ್ರೇನ್ ಜತಗೆ ಮಾತುಕತೆ ನಡೆಸಲು ಬೆಲಾರಸ್ ರಾಜಧಾನಿ ಮಿನಿಸ್ಕ್ (Minsk)ಗೆ ನಿಯೋಗ ಕಳಿಸಲು ರಷ್ಯಾ ಸಿದ್ಧವಿದೆ ಎಂದು ರಷ್ಯಾ ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಶುಕ್ರವಾರ ತಿಳಿಸಿದ್ದಾರೆ. ರಷ್ಯಾ ಕಳುಹಿಸಲಿರುವ ನಿಯೋಗವು ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡಿರಲಿದೆ. ಉಕ್ರೇನ್ ಜತೆಗೆ ಮಾತುಕತೆಗೆ ರಷ್ಯಾ ಸಿದ್ಧವಿದೆ ಎಂದು ಪೆಸ್ಕೋವ್ ಅವರು ರಷ್ಯಾದ ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ. ಉಕ್ರೇನ್ ಬಿಕ್ಕಟ್ಟಿನ ನಡುವೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪುಟಿನ್ ಜತೆ ಮಾತುಕತೆ ನಡೆಸಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಸಂಪತ್ತು ಎಷ್ಟಿದೆ?
"ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ತಮ್ಮ ರಷ್ಯಾದ ಅಧ್ಯಕ್ಷರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಉಕ್ರೇನ್‌ನೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಲು ರಷ್ಯಾ ಸಿದ್ಧವಾಗಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ" ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ಟ್ವೀಟ್ ಮಾಡಿದ್ದಾರೆ.

ಹಿಂದೆ ರಷ್ಯಾ ತನ್ನ ನೆರೆಯ ರಾಷ್ಟ್ರವಾದ ಉಕ್ರೇನ್ ಮೇಲೆ ದಾಳಿ ಮಾಡಿತ್ತು. ವಾರಗಳ ರಾಜತಾಂತ್ರಿಕ ಮಾತುಕತೆಗಳು ಮತ್ತು ನಿರ್ಬಂಧಗಳ ಬೆದರಿಕೆಗಳು ರಷ್ಯಾವನ್ನು ತಡೆಯಲು ವಿಫಲವಾದ ನಂತರ ಗುರುವಾರ ಸೈನ್ಯವನ್ನು ಕಳುಹಿಸಿ ವಿಧ್ವಂಸಕ ವಾಯುದಾಳಿಗಳನ್ನು ಪ್ರಾರಂಭಿಸಿತು.
ಅವರು ಉಕ್ರೇನ್ ಮೇಲೆ ಏಕೆ ದಾಳಿ ಮಾಡಿದರು ಎಂದು ಸೂಚಿಸಿದ ಪುಟಿನ್ ಕರೆ ಸಮಯದಲ್ಲಿ, "ಯುನೈಟೆಡ್ ಸ್ಟೇಟ್ಸ್ ಮತ್ತು ನ್ಯಾಟೋ ರಷ್ಯಾದ ಸಮಂಜಸವಾದ ಭದ್ರತಾ ಕಾಳಜಿಗಳನ್ನು ನಿರ್ಲಕ್ಷಿಸಿವೆ. ಪದೇ ಪದೇ ತಮ್ಮ ಬದ್ಧತೆಗಳನ್ನು ಹಿಂತೆಗೆದುಕೊಂಡಿವೆ ಮತ್ತು ರಷ್ಯಾದ ಕಾರ್ಯತಂತ್ರದ ತಳಹದಿಯನ್ನು ಸವಾಲು ಮಾಡುತ್ತಾ ಪೂರ್ವಕ್ಕೆ ಮಿಲಿಟರಿ ನಿಯೋಜನೆಯನ್ನು ಮುಂದುವರೆಸಿದೆ" ಎಂದು ಹೇಳಿದ್ದಾರೆ.
ನ್ಯಾಟೋ ಎಂದರೇನು? ಯುದ್ಧಕಾಲದಲ್ಲಿ ಏನಿದರ ಮಹತ್ವ?
ಉಕ್ರೇನ್‌ನ ಕೀವ್‌ನಲ್ಲಿ ರಷ್ಯಾ ಪಡೆಯೊಂದಿಗೆ ನಡೆದ ಘರ್ಷಣೆಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ರಷ್ಯಾ ಫೆಬ್ರವರಿ 24 ರಂದು ಉಕ್ರೇನ್ ಮೇಲೆ ಆಕ್ರಮ ಆರಂಭಿಸಿದ್ದು, ಇಂದು ಶುಕ್ರವಾರ ತೀವ್ರಗೊಳಿಸಿದೆ. ಎರಡೂ ಕಡೆ ನೂರಾರು ಸಾವುನೋವುಗಳು ಸಂಭವಿಸಿವೆ. ಕೀವ್‌ನಲ್ಲಿ ರಷ್ಯಾ ಮತ್ತು ಉಕ್ರೇನಿಯನ್ ಪಡೆಗಳ ನಡುವೆ ಭಾರೀ ಘರ್ಷಣೆ ನಡೆದಿರುವುದಾಗಿ ಇತ್ತೀಚಿನ ವರದಿಗಳು ತಿಳಿಸಿವೆ. ಉಕ್ರೇನಿಯನ್ ರಾಜಧಾನಿಯ ಮೇಲೆ ಆಕಾಶದಲ್ಲಿ ಭಾರೀ ಸ್ಫೋಟಗಳು ಕಂಡುಬಂದಿವೆ.

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಕ್ಕೆ ವಿಮಾನಗಳನ್ನು ಆಯೋಜನೆ ಮಾಡಲಾಗುತ್ತಿದೆ. ಇದರ ವೆಚ್ಚವನ್ನು ಸರ್ಕಾರವೇ ಸಂಪೂರ್ಣವಾಗಿ ಭರಿಸಲಿದೆ ಎಂದು ಮೂಲಗಳು ತಿಳಿಸಿವೆ. ಉಕ್ರೇನ್‌ನಿಂದ ಹೊರಬಂದು ಜೀವ ಉಳಿಸಿಕೊಳ್ಳಬೇಕಿರುವ ಭಾರತೀಯರು ದುಬಾರಿ ಟಿಕೆಟ್ ದರ ತೆರುವಂತಾಗಿದೆ ಎಂದು ಅನೇಕರು ಆರೋಪಿಸಿದ್ದರು.












Click it and Unblock the Notifications