ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾವು ಉಕ್ರೇನ್‌ನಲ್ಲಿ ನಿಷೇಧಿತ ಶಸ್ತ್ರಾಸ್ತ್ರ ಬಳಕೆ ಮಾಡುತ್ತಿದೆಯೇ?

|
Google Oneindia Kannada News

ಕೀವ್, ಮಾರ್ಚ್ 3: ರಷ್ಯಾವು ಉಕ್ರೇನ್‌ನಲ್ಲಿ ನಿಷೇಧಿತ ಶಸ್ತ್ರಾಸ್ತ್ರ ಬಳಕೆ ಮಾಡುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ಇವುಗಳನ್ನು ಥರ್ಮೋಬ್ಯಾರಿಕ್ ಶಸ್ತ್ರಗಳು ಎಂದು ಕರೆಯಲಾಗುತ್ತದೆ. ಥರ್ಮೋಬ್ಯಾರಿಕ್ ಎಂಬ ಪದ ಗ್ರೀಕ್ ಭಾಷೆಯ ಥರ್ಮೋ ಮತ್ತು ಬ್ಯಾರಿಕ್ ಎಂಬ ಎರಡು ಪದಗಳಿಂದ ಬಂದಿದೆ. ಥರ್ಮೋ ಎಂದರೆ ಉಷ್ಣ ಮತ್ತು ಬ್ಯಾರಿಕ್ ಎಂದರೆ ಒತ್ತಡ ಎಂದು ಅರ್ಥ. ಈ ಶಸ್ತ್ರಗಳು ಬಾಂಬ್​​ಗಳ ಮಾದರಿಯಲ್ಲಿದ್ದು, ಒತ್ತಡದ ಮೂಲಕ ಮತ್ತಷ್ಟು ಉಷ್ಣವನ್ನು ಬಿಡುಗಡೆ ಮಾಡುತ್ತವೆ. ಈ ಶಸ್ತ್ರಗಳು ವಾತಾವರಣದಲ್ಲಿನ ಆಮ್ಲಜನಕವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತವೆ.

ಬೆಲಾರಸ್ ಪ್ರದೇಶದಲ್ಲಿ ರಷ್ಯಾ-ಉಕ್ರೇನ್ 2ನೇ ಸುತ್ತಿನ ಸಂಧಾನ ಸಭೆಬೆಲಾರಸ್ ಪ್ರದೇಶದಲ್ಲಿ ರಷ್ಯಾ-ಉಕ್ರೇನ್ 2ನೇ ಸುತ್ತಿನ ಸಂಧಾನ ಸಭೆ

ಅತ್ಯಂತ ಅಪಾಯಕಾರಿಯಾದ ನಿಷೇಧಿಸಲ್ಪಟ್ಟ ಶಸ್ತ್ರಗಳನ್ನು ರಷ್ಯಾ ಬಳಸುತ್ತಿದೆ ಎಂದು ಮಾನವ ಹಕ್ಕುಗಳ ಗುಂಪುಗಳು ಮತ್ತು ಉಕ್ರೇನ್ ಸರ್ಕಾರ ಆರೋಪ ಮಾಡುತ್ತಿವೆ. ವಿಷಕಾರಕ ಲೋಹದ ಪುಡಿಯನ್ನು ಹೊಂದಿರುವ ಈ ಶಸ್ತ್ರಗಳು ಬಾಂಬ್ ರೀತಿಯಲ್ಲೇ ಇರುತ್ತವೆಯಾದರೂ, ಅತ್ಯಧಿಕ ಪ್ರಮಾಣದಲ್ಲಿ ಬೆಂಕಿ ಉಗುಳುವ ಸಾಮರ್ಥ್ಯ ಹೊಂದಿವೆ.

Russia-Ukraine War: What Are Thermobaric Weapons? And Why Should They Be Banned

ಬೆಂಕಿ ಉರಿಯಬೇಕಾದರೆ, ಆಮ್ಲಜನಕ ಅತ್ಯಂತ ಮುಖ್ಯ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಆಮ್ಲಜನಕ ಇಲ್ಲದೇ ಯಾವುದೇ ಬಾಂಬ್ ಸ್ಫೋಟಗೊಂಡರೂ, ಅಲ್ಲಿ ಬೆಂಕಿ ಉಂಟಾಗುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಬೆಂಕಿ ಉಂಟಾದರೂ, ಅದರು ಸ್ವಲ್ಪ ಸಮಯದವರೆಗೆ ಮಾತ್ರ ಇರುತ್ತದೆ. ಹೆಚ್ಚಿನ ಅವಘಡವೇನೂ ಸಂಭವಿಸುವುದಿಲ್ಲ. ಆದ್ದರಿಂದ ಸಾಮಾನ್ಯ ಬಾಂಬ್​ಗಳಲ್ಲಿ 25ರಷ್ಟು ಪೆಟ್ರೋಲ್, ಡೀಸೆಲ್ ಅಥವಾ ಇನ್ನಾವುದೇ ಇಂಧನದಂಥ ವಸ್ತು ಮತ್ತು 75ರಷ್ಟು ಆಕ್ಸಿಡೈಸರ್​ ಇರುತ್ತದೆ. ಇದರಿಂದ ಬಾಂಬ್​ಗಳು ಸ್ಫೋಟಗೊಂಡು ಬೆಂಕಿ ಹೊತ್ತಿ ಉರಿಯುತ್ತದೆ.

ಇದರಲ್ಲಿ ಅನೇಕ ವಿಷಕಾರಿ ಲೋಹಗಳ ಪುಡಿಗಳನ್ನು ಬಳಕೆ ಮಾಡಲಾಗುತ್ತದೆ. ಸ್ಫೋಟದ ಸ್ಥಳದಲ್ಲಿರುವವರು ಸುಟ್ಟು ಹೋಗುತ್ತಾರೆ, ಸ್ಫೋಟದ ಸ್ಥಳದ ಸಮೀಪದಲ್ಲಿರುವವರು, ಸ್ಫೋಟದಿಂದ ಗಾಯಕ್ಕೆ ಒಳಗಾದವರೂ, ವಿವಿಧ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಒಮ್ಮೊಮ್ಮೆ ಸಣ್ಣಪುಟ್ಟ ಗಾಯಗಳಿಗೆ ಒಳಗಾದವರ ದೇಹದೊಳಗಿನ ಅಂಗಗಳು ಕೆಲಸ ಮಾಡದಿರುವ ಸಾಧ್ಯತೆ ಇರುತ್ತದೆ.

ಇನ್ನೂ ಕೆಲವೊಮ್ಮೆ ಕಿವುಡುತನ, ಕುರುಡುತನಕ್ಕೂ ಕಾರಣವಾಗಬಹುದು. ಈಗ ರಷ್ಯಾ ಬಳಸುತ್ತಿದೆ ಎನ್ನಲಾದ ಥರ್ಮೋಬ್ಯಾರಿಕ್ ಶಸ್ತ್ರಗಳು ಸಾಮಾನ್ಯ ಬಾಂಬ್​ಗಳಂತೆ ಅಲ್ಲ. ಅವುಗಳಲ್ಲಿ ಆಮ್ಲಜನಕ ಇರುವುದಿಲ್ಲ. ಈ ಬಾಂಬ್​ಗಳಲ್ಲಿ ಶೇಕಡಾ 100ರಷ್ಟು ಇಂಧನ ಇರುತ್ತದೆ.

ಸೋವಿಯತ್ ಯೂನಿಯನ್ 1969ರ ಸಿನೋ-ಸೋವಿಯತ್ ಯುದ್ಧದಲ್ಲಿ ಚೀನಾದ ವಿರುದ್ಧ ಥರ್ಮೋಬ್ಯಾರಿಕ್ ಅಸ್ತ್ರಗಳನ್ನು ಬಳಸಿದೆ ಎಂದು ಹೇಳಲಾಗುತ್ತಿದೆ. 1979ರಲ್ಲಿ ಅಫ್ಘಾನಿಸ್ತಾನದಲ್ಲಿಯೂ ಪ್ರತ್ಯೇಕತಾವಾದಿಗಳಿಗೆ ಈ ಅಸ್ತ್ರಗಳನ್ನು ರಷ್ಯಾ ಒದಗಿಸಿದೆ ಎಂದು ಹೇಳಲಾಗಿದೆ. ವಿಯೆಟ್ನಾಂ ಮತ್ತು ಅಫ್ಘಾನಿಸ್ತಾನದಲ್ಲೂ ಅಮೆರಿಕ ಈ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎಂದು ಹೇಳಲಾಗುತ್ತಿದೆ.

ಯುದ್ಧಗಳಲ್ಲಿಯೂ ಕೆಲವು ಕಾನೂನುಗಳನ್ನು ಅನೌಪಚಾರಿಕವಾಗಿ ಅಳವಡಿಕೆ ಮಾಡಿಕೊಳ್ಳಲಾಗಿದೆ. ಥರ್ಮೋಬ್ಯಾರಿಕ್ ಶಸ್ತ್ರಾಸ್ತ್ರಗಳನ್ನು ಇನ್ನೂ ನಿಷೇಧ ಮಾಡಲಾಗಿಲ್ಲ. ಆದರೆ ಈ ಅಸ್ತ್ರಗಳ ಅಭಿವೃದ್ಧಿ ಮತ್ತು ಬಳಕೆ ವಿರುದ್ಧ ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಧ್ವನಿಯೆತ್ತಿವೆ.

ಆದರೆ ಈ ಬಾಂಬ್​ಗಳು ವಾತಾವರಣದಲ್ಲಿನ ಆಮ್ಲಜನಕವನ್ನೇ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಆದ್ದರಿಂದ ಇಂಧನವೂ ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣದಿಂದಾಗಿ ಅತ್ಯಂತ ದೊಡ್ಡ ಮಟ್ಟದಲ್ಲಿ ಬೆಂಕಿ ಉಗುಳುವ ಸಾಮರ್ಥ್ಯ ಈ ಬಾಂಬ್​ಗಳಿಗೆ ಇರುತ್ತದೆ.

ಆದ್ದರಿಂದ ಹಾನಿಯ ಪ್ರಮಾಣವೂ ಹೆಚ್ಚಾಗಿರುತ್ತದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯಿಂದ ಥರ್ಮೋಬ್ಯಾರಿಕ್ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸಲಾಗಿತ್ತು. ಪಾಶ್ಚಿಮಾತ್ಯ ರಾಷ್ಟ್ರಗಳು, ಸೋವಿಯತ್ ಒಕ್ಕೂಟ 1960ರ ದಶಕದಿಂದಲೂ ಅವುಗಳನ್ನು ಬಳಸುತ್ತಿದ್ದವು.

English summary
Russian forces in Ukraine may have used thermobaric weapons and cluster bombs, according to reports from the Ukraine government and human rights groups.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X