ಉಕ್ರೇನಿಯನ್ ಮನಸ್ಥಿತಿ: ಪಕ್ಕದಲ್ಲಿ ಬಾಟಲಿ ಒಡೆದರೂ ಬಾಂಬ್ ಬಿದ್ದಂತೆ ಎನ್ನಿಸುವುದಯ್ಯ!

ಕೀವ್, ಏಪ್ರಿಲ್ 27: ಉಕ್ರೇನ್‌ನಲ್ಲಿ ರಷ್ಯಾ ನಡೆಸಿರುವ ಹಾಗೂ ಇಂದಿಗೂ ನಡೆಸುತ್ತಿರುವ ಆಕ್ರಮಣವು ಸಾರ್ವಜನಿಕರನ್ನು ಕನಸಿನಲ್ಲೂ ಬೆಚ್ಚಿ ಬೀಳಿಸುವಂತಿದೆ. ಅಕ್ಕಪಕ್ಕದಲ್ಲಿ ಯಾವುದೇ ಸದ್ದು ಕೇಳಿದರೂ ಅದು ಬಾಂಬ್ ಶಬ್ಧದಂತೆ ಭಾಸವಾಗುತ್ತದೆ.

ಉಕ್ರೇನಿಯನ್‌ ಜನರ ಮನಸ್ಥಿತಿಯು ಮೊದಲಿನಂತಿಲ್ಲ. ರಷ್ಯಾದ ಮದ್ದು ಗುಂಡಿನ ದಾಳಿ ಒಂದು ಕಡೆಯಲ್ಲಿದ್ದರೆ, ಇನ್ನೊಂದು ದಿಕ್ಕಿನಲ್ಲಿ ಉಕ್ರೇನ್ ಯೋಧರು ಅದಕ್ಕೆ ಪ್ರತ್ಯುತ್ತರ ನೀಡುತ್ತಿದ್ದಾರೆ. ಎರಡು ಸೇನೆಗಳ ಯುದ್ಧದಲ್ಲಿ ಜನರು ಮಾತ್ರ ನಿತ್ಯ ಭಯದಲ್ಲೇ ಬದುಕುವಂತಾ ವಾತಾವರಣ ನಿರ್ಮಾಣವಾಗಿ ಬಿಟ್ಟಿದೆ.

ಪೂರ್ವ ಉಕ್ರೇನ್‌ನ ಟೊರೆಟ್ಸ್ಕ್ ಪ್ರದೇಶದಲ್ಲಿ ಬಹುತೇಕ ಯುದ್ಧದ ಪರಿಸ್ಥಿತಿ ತಿಳಿಯಾಗಿದೆ. ಆದರೆ ಸ್ಥಳೀಯ ನಿವಾಸಿಗಳ ಮನಸ್ಥಿತಿ ಮಾತ್ರ ಮೊದಲಿಗಿಂತ ಹೆಚ್ಚು ಭಯದಲ್ಲಿ ನರಳುವಂತೆ ಮಾಡಿದೆ. ರಷ್ಯಾ ಯುದ್ಧ ಮತ್ತು ಉಕ್ರೇನ್ ನೆಲದಲ್ಲಿ ನಿವಾಸಿಗಳ ವಾಸ್ತವ ಸ್ಥಿತಿ ಹಾಗೂ ಅಭಿಪ್ರಾಯದ ಕುರಿತು ಒಂದು ವರದಿ ಇಲ್ಲಿದೆ ಓದಿ.

ಪಕ್ಕದಲ್ಲಿ ಬಾಟಲಿ ಒಡೆದರೆ, ಬಾಂಬ್ ಬಿದ್ದಂತೆ!

ಪಕ್ಕದಲ್ಲಿ ಬಾಟಲಿ ಒಡೆದರೆ, ಬಾಂಬ್ ಬಿದ್ದಂತೆ!

ಪೂರ್ವ ಉಕ್ರೇನ್‌ನ ಟೊರೆಟ್ಸ್ಕ್ ಪ್ರದೇಶದಲ್ಲಿ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಈ ಪ್ರದೇಶ 32,000ಕ್ಕೂ ಹೆಚ್ಚು ನಿವಾಸಿಗಳಲ್ಲಿ ಅರ್ಧದಷ್ಟು ಜನರು ಈಗಾಗಲೇ ಓಡಿ ಹೋಗಿದ್ದಾರೆ. ಈಗ ಅನೇಕರಿಗೆ ಹಣ ಮತ್ತು ಮೂಲ ಸಂಪನ್ಮೂಲಗಳ ಕೊರತೆಯಿದೆ. ರಷ್ಯಾ ಯುದ್ಧದ ಬಗ್ಗೆ ಕೋಪದ ಜೊತೆಗೆ ಖಿನ್ನತೆ ಬೆಳೆಯುತ್ತಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಏನಾಗುತ್ತದೆ ಎಂಬುದನ್ನು ತಿಳಿಯುವುದರಲ್ಲೇ ಎಲ್ಲವೂ ಬದಲಾಗಿ ಹೋಗುತ್ತಿದೆ. ಅಕ್ಕಪಕ್ಕದ ಮನೆಯವರು ಬಂದು ನಮ್ಮ ಮನೆ ಬಾಗಿಲು ಬಡೆದರೂ, ಎದೆಯಲ್ಲಿ ನಡುಕ ಶುರುವಾಗುತ್ತದೆ. ಅಕ್ಕಪಕ್ಕದಲ್ಲಿ ಬಾಟಲಿಗಳನ್ನು ಒಡೆದರೆ, ಬಾಂಬ್ ಸ್ಫೋಟವಾದಂತೆ ಭಾಸವಾಗುತ್ತಿದೆ ಎಂದು ಟೊರೆಟ್ಸ್ಕ್ ನಿವಾಸಿ ಆಂಡ್ರಿ ಚೆರೋಮುಶ್ಕಿನ್ ಹೇಳಿದ್ದಾರೆ.

ಅಡುಗೆ ಮಾಡುವುದಕ್ಕೆ ಮಳೆನೀರು ಬಳಕೆ

ಅಡುಗೆ ಮಾಡುವುದಕ್ಕೆ ಮಳೆನೀರು ಬಳಕೆ

"ನಾವು ಮಳೆನೀರನ್ನೇ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದೇವೆ. ಅದೇ ಮಳೆಯ ನೀರಿನಲ್ಲಿ ನಮಗೆ ಅಡುಗೆಯನ್ನು ತಯಾರಿಸಿಕೊಳ್ಳುತ್ತೇವೆ. ಇದೇ ಮಳೆಯ ನೀರಿನಲ್ಲಿ ನಮ್ಮ ನಾಯಿಗೆ ಆಹಾರವನ್ನು ಸಿದ್ಧಪಡಿಸಿ ಬಡಿಸುತ್ತೇವೆ. ಮಳೆ ನೀರಿನಲ್ಲಿ ಮನೆಯ ಮಹಡಿಗಳನ್ನು ಹಾಗೂ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದೇವೆ. ಇದೇ ನೀರಿನಲ್ಲಿ ನಾವು ಸ್ನಾನ ಮಾಡುತ್ತೇವೆ. ಅಂಥ ಮನೆ ನೀರಿನಲ್ಲಿ ಮನೆಯನ್ನು ಸ್ವಚ್ಛಗೊಳಿಸುವುದು ಸಾಮಾನ್ಯವೇ?, ಇದು 21ನೇ ಶತಮಾನ, ಪರಿಮಾಣು ಶಕ್ತಿಯ ಶತಮಾನ," ಎಂದು ನಿವಾಸಿ ಐರಿನಾ ಅನಾಟೊಲಿವ್ನಾ ಹೇಳಿದ್ದಾರೆ.

ಕಳೆದ ಸೋಮವಾರ ನೀರು ವಿತರಿಸುವುದಕ್ಕಾಗಿ ಮಾಡಿದ್ದ ಉದ್ದನೇಯ ಸಾಲಿನಲ್ಲಿ ಗಂಟೆಗಟ್ಟಲೇ ಅವರು ಕಾದು ನಿಂತಿದ್ದರು. ಜನರು ಖಾಲಿ ಬಾಟಲಿಗಳನ್ನು ಇಡಿದು ಹೊರಟ ಸಂದರ್ಭದಲ್ಲಿ ನಮ್ಮೆದುರಿಗೆ ಮೊದಲನೇ ಮಹಾಯುದ್ಧ ಹಾಗೂ ಎರಡನೇ ಮಹಾಯುದ್ಧದ ನೆನಪುಗಳು ಹಾದು ಹೋದವು. ರಷ್ಯಾದ ಆಕ್ರಮಣಕ್ಕೂ ಮೊದಲು ಅಂದರೆ 2014ರಲ್ಲಿ ಕೊನೆಯದಾಗಿ ಟೊರೆಟ್ಸ್ಕ್ ಅನ್ನು ರಷ್ಯಾದ ಪರ ಪ್ರತ್ಯೇಕತಾವಾದಿಗಳು ವಶಪಡಿಸಿಕೊಂಡಾಗ ಸಂಘರ್ಷ ನಡೆದಿತ್ತು. ಆ ವರ್ಷದ ನಂತರದಲ್ಲಿ ಉಕ್ರೇನಿಯನ್ ಪಡೆಗಳು ಅದನ್ನು ಹಿಂಪಡೆದವು. ಈಗ ಗಣಿಗಾರಿಕೆ ಪಟ್ಟಣವು ಡೊನೆಟ್ಸ್ಕ್ ಪ್ರದೇಶದ ಪ್ರತ್ಯೇಕತಾವಾದಿ-ನಿಯಂತ್ರಿತ ಭಾಗದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದೆ.

ಪರಿಸ್ಥಿತಿಯಿಂದ ಪತ್ನಿ ಖಿನ್ನತೆಗೆ ಹೋಗುತ್ತಿದ್ದಾರೆ

ಪರಿಸ್ಥಿತಿಯಿಂದ ಪತ್ನಿ ಖಿನ್ನತೆಗೆ ಹೋಗುತ್ತಿದ್ದಾರೆ

ಟೊರೆಟ್ಸ್ಕ್ ಪ್ರದೇಶವನ್ನು ಬಿಟ್ಟು ಹೋಗುವುದು ಅಷ್ಟು ಸುಲಭವಲ್ಲ. ಏಕೆಂದರೆ ಅದರಲ್ಲಿ ಕೆಲವರು ಹಿರಿಯರು. ಕೆಲವರಿಗೆ ಚಿಕ್ಕ ಮಕ್ಕಳಿದ್ದಾರೆ. ಚೆರೋಮುಶ್ಕಿನ್‌ನಂತಹ ಕೆಲವರಿಗೆ ಉದ್ಯೋಗವೂ ಇಲ್ಲ. ನಾಳೆ ಏನಾಗುತ್ತದೆ ಎಂದು ನಿಮಗೆ ತಿಳಿದಿಲ್ಲ ಎಂಬುದನ್ನು ಬಿಡಿ, ಮುಂದಿನ ನಿಮಿಷವೇ ಏನಾದರೂ ಆಗಬಹುದು," ಎಂದು ಚೆರೋಮುಶ್ಕಿನ್ ಹೇಳಿದ್ದಾರೆ. ಅವರ ಪತ್ನಿ ಟಟಿಯಾನಾರನ್ನು ಈ ಪರಿಸ್ಥಿತಿಯು "ನಿರಂತರವಾಗಿ ಖಿನ್ನತೆಗೆ ಒಳಗಾಗುವಂತೆ ಮಾಡುತ್ತಿದೆ," ಎಂದು ಅವರು ಹೇಳಿದ್ದಾರೆ. ಟೊರೆಟ್ಸ್ಕ್‌ನ ನಾಗರಿಕ ಮತ್ತು ಮಿಲಿಟರಿ ಆಡಳಿತದ ಮುಖ್ಯಸ್ಥ ವಾಸಿಲ್ ಚಿಂಚಿಕ್‌ಗೆ ಇದು ನಿರಂತರ ಚಿಂತೆಯ ಮೂಲವಾಗಿದೆ.

ಶತ್ರುರಾಷ್ಟ್ರಕ್ಕೆ ನಾಗರಿಕರ ಕುರಿತು ಕಾಳಜಿ ಇಲ್ಲವೇ ಇಲ್ಲ

ಶತ್ರುರಾಷ್ಟ್ರಕ್ಕೆ ನಾಗರಿಕರ ಕುರಿತು ಕಾಳಜಿ ಇಲ್ಲವೇ ಇಲ್ಲ

ಶತ್ರುಗಳು ಕುತಂತ್ರ ಮಾಡುತ್ತಿದ್ದಾರೆ. ಶತ್ರುರಾಷ್ಟ್ರಕ್ಕೆ ಮೂಲಭೂತ ಸೌಕರ್ಯಗಳ ಬಗ್ಗೆ ಯಾವುದೇ ಕಾಳಜಿಯಿಲ್ಲ, ನಾಗರಿಕರ ಜೀವದ ಬಗ್ಗೆಯೂ ಯಾವುದೇ ಕಾಳಜಿಯಿಲ್ಲ. ಶತ್ರುರಾಷ್ಟ್ರವು ಉದ್ದೇಶಪೂರ್ವಕವಾಗಿ ಶೆಲ್ ದಾಳಿಯ ಮೂಲಕ ಬೆದರಿಕೆಯೊಡ್ಡವು ಕೆಲಸವನ್ನು ಮಾಡುತ್ತಿದೆ. ಈಗ ನಗವು ಹೆಚ್ಚು ಕಡಿಮೆ ಶಾಂತವಾಗಿರುವಾಗ ನಿವಾಸಿಗಳನ್ನು ಸ್ಥಳಾಂತರಿಸುವುದು ಪ್ರಮುಖ ಕಾರ್ಯವಾಗಿದೆ. ಆದರೆ ಸ್ಥಳಾಂತರಕ್ಕೆ ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ಅವರು ಕೆಲವು ರೀತಿಯ ಒಪ್ಪಂದಕ್ಕೆ ಬರುತ್ತಾರೆ. ಇದು ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಎಂದು ನಾನು ನಂಬುತ್ತೇನೆ," ಎಂದು ಟಟಿಯಾನಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+