ರಷ್ಯಾ-ಉಕ್ರೇನ್ ಸಂಧಾನ ಅಪೂರ್ಣ: ಉಕ್ರೇನ್‌ಗೆ ಷರತ್ತು ವಿಧಿಸಿದ ಪುಟಿನ್

ಕೀವ್ ಮಾರ್ಚ್ 01: ಉಕ್ರೇನ್ ನಲ್ಲಿ ಸತತ ಐದನೇ ದಿನವೂ ರಕ್ತಪಾತ ಮುಂದುವರೆದಿದೆ. ಉಕ್ರೇನ್ ಸರ್ವನಾಶಕ್ಕೆ ರಷ್ಯಾ ನಿರ್ಧಾರ ಮಾಡಿದಿಯಾ ಅನ್ನೋ ಅನುಮಾನ ಶುರುವಾಗಿದೆ. ಪುಟಿನ್ ಅಣುಯುದ್ಧಕ್ಕೆ ನಲುಗಿ ಹೋಗುತ್ತಾ ಉಕ್ರೇನ್ ಎನ್ನುವ ಪ್ರಶ್ನೆ ಮೂಡಿದೆ. ಬಲಿಷ್ಠ ದೇಶ ರಷ್ಯಾ ಅಧ್ಯಕ್ಷ ಸದ್ಯ ಅಣ್ವಸ್ತ್ರದ ಬಳಿಕೆ ಮುಂದಾಗ್ತಾರಾ ಅನ್ನೋ ಆತಂಕ ಹೆಚ್ಚಾಗಿದೆ. ಒಂದು ವೇಳೆ ರಷ್ಯಾ ಸತಾನ್-2 ಅಟ್ಯಾಕ್ ಮಾಡಿದರೆ ಉಕ್ರೇನ್ ಸರ್ವನಾಶವಾಗಿ ಹೋಗುತ್ತದೆ. ಆ ಹಂತಕ್ಕೆ ಹೋಗುವುದು ಬೇಡ ಎಂದು ಬೇರೆ ಬೇರೆ ದೇಶಗಳು ಮನವಿ ಮಾಡಿವೆ. ಒಂದು ವೇಳೆ ರಷ್ಯಾ ಯುದ್ಧವನ್ನು ನಿರಂತರವಾಗಿ ಹೀಗೆ ಮುದುವರೆಸಿದರೆ ನ್ಯಾಟೋ ಜೊತೆ ಸೇರಿ ಅಮೇರಿಕಾ ಅಖಾಡಕ್ಕೆ ಇಳಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಬಲಿಷ್ಠ ರಾಷ್ಟ್ರ ರಷ್ಯಾ ಜೊತೆ ಉಕ್ರೇನ್ ಧೈರ್ಯಗುಂದದೆ ಎದೆಯೊಡ್ಡಿ ನಿಂತಿದೆ. ಹೀಗಾಗಿ ಹಲವಾರು ದೇಶಗಳು ಉಕ್ರೇನ್ ಸಹಾಯಕ್ಕೆ ಮುಂದಾಗಿವೆ. ಈ ನಡುವೆ ರಷ್ಯಾ ಮತ್ತು ಉಕ್ರೇನ್ ನಡುವಿನ ಎರಡನೇ ಸಂದಾನ ಮಾತುಕತೆ ಮುರಿದು ಬಿದ್ದಿದೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ಸದ್ಯಕ್ಕೆ ನಿಲ್ಲುವಂತೆ ಕಾಣಿಸುತ್ತಿಲ್ಲ. ಯಾಕೆಂದರೆ ರಷ್ಯಾ ಹಾಗೂ ಉಕ್ರೇನ್ ನಡುವಿನ ಎರಡನೇ ಸಂದಾನ ಮಾತುಕತೆ ಅಪೂರ್ಣಗೊಂಡಿದೆ. ಎರಡೂ ದೇಶಗಳ ಅಧ್ಯಕ್ಷರು ಷರತ್ತುಗಳನ್ನು ವಿಧಿಸುವ ಮೂಲಕ ಸಂದಾನಕ್ಕೆ ಬ್ರೇಕ್ ಹಾಕಿದ್ದಾರೆ. ಸಂದಾನ ಮಾತುಕತೆ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೂರು ಷರತ್ತುಗಳನ್ನು ವಿಧಿಸಿದ್ದಾರೆ. ಮೊದಲನೇ ಷರತ್ತು ಉಕ್ರೇನ್ ಶಸ್ತ್ರ ತ್ಯಜಿಸಬೇಕು, ಎರಡನೇಯದು ಶಸಸ್ತ್ರೀಕರಣದ ಸಮಸ್ಯೆ ಪರಿಹರಿಸುವ ಬಗ್ಗೆ ಚರ್ಚೆ, ಮೂರನೇ ಷರತ್ತು ಉಕ್ರೇನ್ ತಟಸ್ಥ ಸ್ಥಿತಿ ಖಾತ್ರಿಪಡಿಸಬೇಕು ಎಂದು ಪುಟಿನ್ ಷರತ್ತು ವಿಧಿಸಿದ್ದಾರೆ.

ಇನ್ನೂ ಉಕ್ರೇನ್ ಅಧ್ಯಕ್ಷ ಝೆಲೆಸ್ಕಿ ಕೂಡ ಎರಡು ಪರತ್ತುಗಳನ್ನು ಹಾಕಿದ್ದಾರೆ. ಮೊದಲನೆಯದು ರಷ್ಯಾ ಕೂಡಲೇ ಕದನ ವಿರಾಮ ನೀಡಬೇಕು. ಎರಡನೇಯದು ತಕ್ಷಣ ತನ್ನ ಸೇನೆಯನ್ನು ವಾಪಾಸ್ ಕರೆಸಿಕೊಳ್ಳಬೇಕು ಎಂದು ಷರತ್ತು ವಿಧಿಸಿದ್ದಾರೆ. ಎರಡೂ ಷರತ್ತುಗಳನ್ನು ಒಪ್ಪದ ಹಿನ್ನೆಲೆ ಸಂದಾನ ಅಪೂರ್ಣಗೊಂದಿದೆ ಎನ್ನಲಾಗುತ್ತಿದೆ.

Russia-Ukraine Negotiation Is Incomplete: Putin Imposed Conditional to Ukraine

ಇತ್ತ ಉಕ್ರೇನ್‌ಗೆ ನ್ಯಾಟೋ ಸೇರಿ ವಿವಿಧ ದೇಶಗಳಿಂದ ನೆರವಿನ ಹಸ್ತ ನೀಡಲಾಗುತ್ತಿದೆ. ಅಮೆರಿಕಾ, ಡೆನ್ಮಾರ್ಕ್, ಬೆಲ್ಜಿಯಂ, ಫಿನ್ಯಾಂಡ್, ಜರ್ಮನಿ ಉಕ್ರೇನ್‌ಗೆ ಶಸ್ತ್ರಸ್ತ್ರ ಮತ್ತು ಆರ್ಥಿಕ ನೆರವು ನೀಡುವ ಮೂಲಕ ಬಲ ತುಂಬುತ್ತಿವೆ.ಉಕ್ರೇನ್‌ನ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಬೆಂಬಲವಾಗಿ ಶಸ್ತ್ರಾಸ್ತ್ರಗಳ ವರ್ಗಾವಣೆಯನ್ನು ಹೆಚ್ಚಿಸಿವೆ ಮತ್ತು ಬ್ರಿಟನ್ ಅಂತಹ ವರ್ಗಾವಣೆಗಳನ್ನು ವಿಸ್ತರಿಸಲು ಕರೆ ನೀಡಿದೆ. ಫಿನ್‌ಲ್ಯಾಂಡ್ 2,500 ಆಕ್ರಮಣಕಾರಿ ರೈಫಲ್‌ಗಳು ಮತ್ತು 1,500 ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ರವಾನಿಸಲು ಒಪ್ಪಿಕೊಂಡಿದೆ. ಕೆನಡಾ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳು ಮತ್ತು ನವೀಕರಿಸಿದ ಮದ್ದುಗುಂಡುಗಳನ್ನು ಪೂರೈಸುತ್ತದೆ

Russia-Ukraine Negotiation Is Incomplete: Putin Imposed Conditional to Ukraine

ಉಕ್ರೇನ್‌ ಮೇಲೆ ರಷ್ಯಾದ ಆಗ್ರಮಣದ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ತಮ್ಮ ಪರಮಾಣು ನಿರೋಧಕ ಪಡೆಗಳು ಅಲರ್ಟ್‌ ಆಗುವಂತೆ ಆದೇಶಿಸಿದ್ದು, ಜಾಗತಿಕ ಮಟ್ಟದಲ್ಲಿ ತಲ್ಲಣ ಮಾಡಿಸಿದೆ. ರಷ್ಯಾದ ಉನ್ನತ ಅಧಿಕಾರಿಗಳೊಂದಿಗಿನ ಭಾನುವಾರ ನಡೆಸಿದ ಸಭೆಯಲ್ಲಿ ಮಾತನಾಡಿದ ಪುಟಿನ್, ಪ್ರಮುಖ ನ್ಯಾಟೋ ಶಕ್ತಿಗಳು ರಷ್ಯಾ ವಿರುದ್ಧ ಆಕ್ರಮಣಕಾರಿ ಹೇಳಿಕೆ ನೀಡಿವೆ. ಇಷ್ಟೇ ಅಲ್ಲದೆ, ರಷ್ಯಾದ ವಿರುದ್ಧ ಕಠಿಣ ಆರ್ಥಿಕ ನಿರ್ಬಂಧ ವಿಧಿಸಿದ್ದಾರೆ ಎಂದು ಪುಟಿನ್‌ ಪ್ರತಿಪಾದಿಸಿದರು.

ಇದೇ ಸಂದರ್ಭದಲ್ಲಿ ರಷ್ಯಾದ ರಕ್ಷಣಾ ಮಂತ್ರಿ ಮತ್ತು ಮಿಲಿಟರಿಯ ಜನರಲ್ ಸ್ಟಾಫ್ ಮುಖ್ಯಸ್ಥರಿಗೆ ಪರಮಾಣು ನಿರೋಧಕ ಪಡೆಗಳು ಅಲರ್ಟ್‌ ಆಗುವಂತೆ ಆದೇಶಿಸಿದ್ದಾರೆ. ಅಂದರೆ ಪರಮಾಣು ನಿರೋಧಕ ಪಡೆಯು "ಯುದ್ಧ ಕರ್ತವ್ಯದ ವಿಶೇಷ ರೆಜಿಮ್‌" ನಲ್ಲಿ ಇರಿಸಲು ಆದೇಶಿಸಿದ್ದಾರೆ. ರಷ್ಯಾದ ಈ ನಡೆಯು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+