ವ್ಲಾದಿಮಿರ್ ಪುಟಿನ್ ಸರ್ಕಾರ ನಮ್ಮ ಟಾರ್ಗೆಟ್ ಆಗಿರಲಿಲ್ಲ: ತಂಟೆಗೆ ಬಂದರೆ ಸುಮ್ಮನೆ ಇರಲ್ಲ!

ಮಾಸ್ಕೋ: ರಷ್ಯಾ ಸೇನೆ & ಖಾಸಗಿ ಸೇನೆ ಮಧ್ಯೆ ನಡೆದ ಸಮರ ಸಂಚಲನ ಸೃಷ್ಟಿಸಿದ್ದು, ಪುಟಿನ್ ಸರ್ಕಾರವೇ ಅಲ್ಲಾಡಿ ಹೋಗಿದೆ. ಈ ಮಧ್ಯೆ ಖಾಸಗಿ ಸೇನಾ ಪಡೆಯ ದಂಗೆ ಬಗ್ಗೆ ಅದರ ಮುಖ್ಯಸ್ಥ, ಯೆವ್ಗೆನಿ ಪ್ರಿಗೊಝಿನ್ ಸ್ಪಷ್ಟನೆ ನೀಡಿದ್ದಾನೆ. ಒಂದು ಕಾಲದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಕೈಕೆಳಗೆ ಕೆಲಸ ಮಾಡಿದ್ದ ಈ ವ್ಯಕ್ತಿ ಈಗ ಪುಟಿನ್ ವಿರೋಧಿಯೇ? ಎಂಬ ಪ್ರಶ್ನೆ ಹುಟ್ಟುಹಾಕಿದ್ದಾನೆ. ಹಾಗಾದ್ರೆ ಯೆವ್ಗೆನಿ ನೀಡಿದ ಸ್ಪಷ್ಟನೆ ಏನು? ಮುಂದೆ ಓದಿ.

ಅಂದಹಾಗೆ ಉಕ್ರೇನ್ ವಿರುದ್ಧ ಯುದ್ಧದಲ್ಲಿ ರಷ್ಯಾ ಸೇನೆಯ ಶ್ರಮ ಎಷ್ಟಿದೆಯೋ, ಅಷ್ಟೇ ಶ್ರಮ ರಷ್ಯಾದ ಖಾಸಗಿ ಸೇನೆಯದ್ದು ಕೂಡ. ಆದರೆ ಉಕ್ರೇನ್‌ನ ಯುದ್ಧದಲ್ಲಿ ತನ್ನ ಖಾಸಗಿ ಸೇನೆ ಸೈನಿಕರು ಸಾಯುತ್ತಿದ್ದಿದ್ದು, ಹೋರಾಡೋಕೆ ಖಾಸಗಿ ಸೈನಿಕರಿಗೆ ಸರಿಯಾಗಿ ಶಸ್ತ್ರಾಸ್ತ್ರದ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದ. ಬರೋಬ್ಬರಿ 2 ತಿಂಗಳಿಂದ ರಷ್ಯಾದ ರಕ್ಷಣಾ ಸಚಿವನ ವಿರುದ್ಧವೂ ಗರಂ ಆಗಿದ್ದ ಯೆವ್ಗೆನಿ ಪ್ರಿಗೊಝಿನ್. ಆದರೆ ಅದೆಷ್ಟೇ ಒತ್ತಾಯವನ್ನ ಮಾಡಿದ್ರು, ರಷ್ಯಾ ಮಾತ್ರ ಖಾಸಗಿ ಸೈನಿಕರ ನೆರವಿಗೆ ಬಂದಿಲ್ಲ ಎಂಬ ಆರೋಪ ಇತ್ತು. ಈ ಕಾರಣಕ್ಕೆ ರೊಚ್ಚಿಗೆದ್ದು ಸ್ವಂತ ದೇಶದ ಮೇಲೆಯೇ ರಷ್ಯಾ ಖಾಸಗಿ ಸೇನೆ ಯುದ್ಧಕ್ಕೆ ಬಂದಿತ್ತು. ಆದರೆ ಈಗ ತನ್ನ ತಪ್ಪು ಒಪ್ಪಿಕೊಂಡಿದೆ ಖಾಸಗಿ ಸೇನೆ.

Russia tightens security inside the country after Wagner group coup

ನಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂದ!

ಯೆವ್ಗೆನಿ ಪ್ರಿಗೊಝಿನ್ ಇದೀಗ ಆಡಿಯೋ ಸಂದೇಶ ಒಂದನ್ನ ಕಳುಹಿಸಿದ್ದು, ಇದರಲ್ಲಿ ಆತ ತನ್ನ ತಪ್ಪಿನ ಬಗ್ಗೆ ಮಾತನಾಡಿದ್ದಾನೆ. ಅಲ್ಲದೆ ರಷ್ಯಾ ಖಾಸಗಿ ಸೇನೆ ಟಾರ್ಗೆಟ್ ಪುಟಿನ್‌ರ ಸರ್ಕಾರ ಆಗಿರಲಿಲ್ಲ, ನಮ್ಮ ಸಂಕಷ್ಟ ಹೇಳಿಕೊಳ್ಳಲು ಅನಿವಾರ್ಯವಾಗಿ ನಾವು ಅಟ್ಯಾಕ್ ಮಾಡಿದ್ದೇವೆ ಎಂದಿದ್ದಾನೆ. ಜೊತೆಗೆ ರಷ್ಯಾದಲ್ಲಿ ಭುಗಿಲೆದ್ದಿರುವ ಜನರ ಆಂತರಿಕ ಜಗಳದ ಬಗ್ಗೆಯೂ ಯೆವ್ಗೆನಿ ಮಾತನಾಡಿದ್ದು, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಸಂಪೂರ್ಣವಾದ ಸಹಕಾರ ನೀಡುವುದಾಗಿ ಘೋಷಿಸಿದ್ದಾನೆ. ಈ ಮೂಲಕ ತನ್ನ ಮಾಜಿ ಗುರು ವ್ಲಾದಿಮಿರ್ ಪುಟಿನ್ ಬಳಿ ಪರೋಕ್ಷವಾಗಿ ಕ್ಷಮೆ ಕೇಳಿದ್ದಾನೆ ಯೆವ್ಗೆನಿ ಪ್ರಿಗೊಝಿನ್.

ಖಾಸಗಿ ಸೇನೆ ಬಳಿಕ ಪ್ರಜೆಗಳ ದಂಗೆ?

ಕ್ಷಣಕ್ಷಣಕ್ಕೂ ತೀವ್ರವಾಗುತ್ತಿರುವ ಪರಿಸ್ಥಿತಿ & ಜೀವ ಭಯದಲ್ಲೇ ಬದುಕುತ್ತಿರುವ ಪ್ರಜೆಗಳು. ಇದು ರಷ್ಯಾದ ಈಗಿನ ಸ್ಥಿತಿ, ಏಕೆಂದರೆ ಖಾಸಗಿ ಸೇನೆ ದಂಗೆ ನಂತರ ಇಡೀ ರಷ್ಯಾ ಬೂದಿ ಮುಚ್ಚಿದ ಕೆಂಡವಾಗಿದೆ. ಅಲ್ಲಿ ನಾಗರಿಕರ ಹೋರಾಟ ಅಥವಾ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಕೂಡ ದಟ್ಟವಾಗಿದೆ. ಅದರಲ್ಲೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೀವಕ್ಕೂ ಅಪಾಯ ಇದೆ ಎನ್ನಲಾಗುತ್ತಿದೆ. ಹೀಗಾಗಿ ರಷ್ಯಾ ಪ್ರಧಾನಿ ಅಧ್ಯಕ್ಷರ ಬೆನ್ನಿಗೆ ನಿಂತಿದ್ದಾರೆ. ಹಾಗಾದ್ರೆ ಮಿಖಾಯಿಲ್ ಮಿಶುಸ್ಟಿನ್ ಹೇಳಿದ್ದೇನು? ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಎದುರಾಗಿರುವ ಅಪಾಯ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ (Wagner Group Coup).

ಪ್ರಜೆಗಳ ಬಳಿ ಪ್ರಧಾನಿ ಮನವಿ

ರಷ್ಯಾದಲ್ಲಿ ಹಲವು ಕಾರಣಕ್ಕೆ ಖಾಸಗಿ ಸೇನೆ ದಂಗೆ ಎದ್ದಿತ್ತು. ಹೀಗೆ ದಂಗೆ ಎದ್ದ ನಂತರ ಖಾಸಗಿ ಸೇನೆ ಸೈಲೆಂಟ್ ಕೂಡ ಆಗೋಯ್ತು. ಹೀಗಾಗಿ ರಷ್ಯಾದಲ್ಲಿ ಪರಿಸ್ಥಿತಿ ಹಿಡಿತಕ್ಕೆ ಸಿಕ್ಕಿದೆ ಅಂತಾ ಯಾರೂ ನಂಬೋದಕ್ಕೆ ಆಗಲ್ಲ. ಯಾಕೆ ಗೊತ್ತಾ? ರಷ್ಯಾ ಖಾಸಗಿ ಸೇನೆ ದಂಗೆ ಬಳಿಕ ರಷ್ಯಾದ ಪ್ರಜೆಗಳು ಕೂಡ ದಂಗೆ ಎದ್ದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಪುಟಿನ್ ಪಡೆ ಅಲರ್ಟ್ ಆಗಿದ್ದು ಖುದ್ದಾಗಿ ರಷ್ಯಾ ಪ್ರಧಾನಿ ಜನರ ಬಳಿ ಮನವಿ ಮಾಡಿದ್ದಾರೆ. ಸಂಕಷ್ಟದ ಪರಿಸ್ಥಿತಿಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಬೆನ್ನಿಗೆ ನಿಲ್ಲೋಣ ಬನ್ನಿ ಎಂದು ಕರೆ ನೀಡಿದ್ದಾರೆ. ರಷ್ಯಾದ ಉಪಪ್ರಧಾನಿ & ಸಚಿವರ ಜೊತೆ ಸಭೆ ನಡೆಸಿ ರಷ್ಯಾ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಮನವಿ ಮಾಡಿದ್ದಾರೆ.

ಒಟ್ನಲ್ಲಿ ವ್ಲಾದಿಮಿರ್ ಪುಟಿನ್ ಆಪ್ತರ ಗುಂಪಿನಲ್ಲಿ ಗುರುತಿಸಿಕೊಂಡ ಮಿಖಾಯಿಲ್ ಮಿಶುಸ್ಟಿನ್ ಈಗ ಪುಟಿನ್ ಬೆಂಬಲಕ್ಕೆ ನಿಂತಿದ್ದಾರೆ. ತುರ್ತು ಸಭೆಯಲ್ಲಿ ರಷ್ಯಾ ಸಚಿವರು, ಉಪಪ್ರಧಾನಿಗಳ ಜೊತೆ ಮಾತನಾಡುತ್ತಾ, ಇದು ಅತಂತ್ಯ ಕಠಿಣ ಸ್ಥಿತಿ. ಇಂತಹ ಪರಿಸ್ಥಿತಿಯಲ್ಲಿ ನಮಗೆ ರಷ್ಯಾ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯ, ನಾಗರಿಕರ ಸುರಕ್ಷತೆ, ಯೋಗಕ್ಷೇಮ ಮುಖ್ಯ. ಹೀಗಾಗಿ ನಾವು ರಾಷ್ಟ್ರ ಅಧ್ಯಕ್ಷರ ಜೊತೆ ನಿಲ್ಲಬೇಕಿದ್ದು, ಎಲ್ಲರೂ ಒಟ್ಟಾಗಿ ಸಂಕಷ್ಟ ಎದುರಿಸಬೇಕಿದೆ ಎಂದಿದ್ದಾರೆ. ಆದರೆ ರಷ್ಯಾ ಪ್ರಜೆಗಳ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಭಯ ಕೂಡ ಸರ್ಕಾರಕ್ಕೆ ಎದುರಾಗಿದೆ. ಹೀಗಾಗಿ ಮುಂದಿನ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+