ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಘಾತ: ವಿಮಾನದಲ್ಲಿದ್ದ ಅಷ್ಟೂ ಮಂದಿ ಭಸ್ಮ

By Srinath
|
Google Oneindia Kannada News

ಮಾಸ್ಕೋ, ನ.18: ಅಪಘಾತಗಳು ಮತ್ತೆ ಮತ್ತೆ ನಡೆಯುತ್ತಲೇ ಇವೆ. ಈ ಬಾರಿ ದೂರದ ರಷ್ಯಾದಿಂದ ಕೇಳಿಬಂದಿದೆ. ಅದೂ ವಿಮಾನಾಪಘಾತ. ವಿಮಾನದಲ್ಲಿದ್ದ ಅಷ್ಟೂ ಮಂದಿ ಸಾವಿಗೀಡಾಗಿದ್ದಾರೆ.

ರಷ್ಯಾದ ಪಶ್ಚಿಮ ಭಾಗದ ಟಟರಸ್ಥಾನ ಪ್ರಾಂತ್ಯದ ವೋಗಾ ಪಟ್ಟಣದಲ್ಲಿ ವಿಮಾನ ಲ್ಯಾಂಡಿಂಗ್ ಆಗುವಾಗ ಭಾನುವಾರ ರಾತ್ರಿ ಈ ದುರಂತ ಸಂಭವಿಸಿದೆ. ರಷ್ಯಾದ ಹೆಮ್ಮೆಯ ಉತ್ಪನ್ನವಾದ ಬೊಯಿಂಗ್‌ ವಿಮಾನ ಇದಾಗಿದೆ. Tatarstan Airlines ಸಂಸ್ಥೆಗೆ ಸೇರಿದ ಈ ಬೊಯಿಂಗ್‌ ವಿಮಾನವು ಭೂಸ್ಪರ್ಶ ಮಾಡುವ ಸಂದರ್ಭದಲ್ಲಿ ದುರ್ಘ‌ಟನೆ ನಡೆದಿದ್ದು, 50 ಮಂದಿ ಸಾವನ್ನಪ್ಪಿದ್ದಾರೆ.

Russia Tatarstan Airlines boeing 737 landing tragedy- 50 dead,

ವಿಮಾನ ಲ್ಯಾಂಡಿಂಗ್ ಗೆ ಪೈಲಟ್ ಮೂರು ಬಾರಿ ಪ್ರಯತ್ನಿಸಿದ್ದಾನೆ. ಆದರೂ ಸುಗಮ ಲ್ಯಾಂಡಿಂಗ್ ಆಗಿಲ್ಲ. ಪೈಲಟ್‌ ಅನನುಭವಿಯಾಗಿದ್ದು ಮತ್ತು ಕಳಪೆ ನಿರ್ವಹಣೆಯೇ ವಿಮಾನ ಅಪಘಾತಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾಸ್ಕೋದ ಡೊಮೊಡೆಡೊವೊ ನಿಲ್ದಾಣದಿಂದ ಆಗಮಿಸುತ್ತಿದ್ದ ವಿಮಾನ ಕಜಾನ್‌ ನಲ್ಲಿರುವ ವೋಗಾ ಪಟ್ಟಣದಲ್ಲಿ ಇಳಿಯುವಾಗ ಸರಾಗವಾಗಿ ಲ್ಯಾಂಡ್‌ ಆಗದೇ ರನ್‌ ವೇಗೆ ಬಲವಾಗಿ ಅಪ್ಪಳಿಸಿ, ಸ್ಫೋಟಗೊಂಡಿದೆ. ವಿಮಾನದಲ್ಲಿದ್ದ ಎಲ್ಲ 44 ಪ್ರಯಾಣಿಕರು ಮತ್ತು ಆರು ಮಂದಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ಟಟರಸ್ಥಾನದ ಗವರ್ನರ್ ಅವರ ಪುತ್ರ ಮತ್ತು ಸೊಸೆ ಸಹ ದುರಂತದಲ್ಲಿ ಸಾವಿಗೀಡಾಗಿದ್ದಾರೆ.

English summary
Russia boeing landing tragedy- 50 dead. A Boeing 737 passenger airline on a domestic flight in Russia has crashed and burst into flames while trying to touch down at an airport, killing all 50 passengers and crew on board. The aircraft, belonging to Tatarstan Airlines had been attempting a second landing in the city of Kazan, when it crashed, officials have said. There were no immediate indications of what may have caused the crash, which left no survivors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X