ಉಕ್ರೇನ್‌ನ ಮೂರು ನೌಕೆಗಳನ್ನು ವಶಪಡಿಸಿಕೊಂಡ ರಷ್ಯಾ: ಯುದ್ಧದ ಭೀತಿ

ಕೀವ್ (ರಷ್ಯಾ), ನವೆಂಬರ್ 26: ರಷ್ಯಾವು ಕ್ರಿಮಿಯಾ ಜಲಸಂಧಿ ಬಳಿ ಉಕ್ರೇನ್‌ನ ಮೂರು ನೌಕೆಗಳನ್ನು ವಶಪಡಿಸಿಕೊಂಡಿದ್ದು, ಎರಡೂ ದೇಶಗಳ ನಡುವೆ ಸೇನಾ ಸಂಘರ್ಷ ಏರ್ಪಡುವ ಭೀತಿ ಎದುರಾಗಿದೆ.

ಎರಡೂ ದೇಶಗಳ ನಡುವೆ ಯುದ್ಧದ ಆತಂಕ ಹೆಚ್ಚಾಗುತ್ತಿರುವ ಕಾರಣ ವಿಶ್ವಸಂಸ್ಥೆ ಮಧ್ಯ ಪ್ರವೇಶಕ್ಕೆ ಮುಂದಾಗಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಹತ್ವದ ಸಭೆ ಏರ್ಪಟ್ಟಿದೆ.

ತನ್ನ ಜನ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದ ಉಕ್ರೇನ್‌ನ ನೌಕೆಗಳು ಆತಂಕಕಾರಿಯಾಗಿ ವರ್ತಿಸಿದವು ಹಾಗಾಗಿ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಿ ಅವನ್ನು ವಶಪಡಿಸಿಕೊಳ್ಳಬೇಕಾಯಿತು ಎಂದು ರಷ್ಯಾ ಹೇಳಿದೆ.

Russia seized three war ship of Ukrain

ಇದನ್ನು ಖಂಡಿಸಿರುವ ಉಕ್ರೇನ್‌, ರಷ್ಯಾ ಕಣಕೆಯು ನಮ್ಮ ನೌಕೆಗೆ ಡಿಕದಕಿ ಹೊಡೆದು ನೌಕೆಯನ್ನು ಹಾಳು ಮಾಡಿದ್ದಲ್ಲದೆ, ಉದ್ದೇಶಪೂರ್ವಕವಾಗಿ ನಮ್ಮ ನೌಕೆಗಳ ಮೇಲೆ ಶಸ್ತ್ರಾಸ್ತ್ರ ದಾಳಿ ನಡೆಸಿ ನೌಕೆಗಳನ್ನು ವಶಪಡಿಸಿಕೊಂಡು ಉದ್ಧಟತನ ಪ್ರದರ್ಶಿಸಿದೆ ಎಂದಿದೆ.

ಎರಡೂ ದೇಶಗಳ ಗಡಿಯಲ್ಲಿ ಆತಂಕ ಮನೆ ಮಾಡಿದ್ದು, ಯುದ್ಧದ ಭೀತಿ ಎದುರಾಗಿದೆ. ವಿಶ್ವಸಂಸ್ಥೆ ಮಧ್ಯ ಪ್ರವೇಶ ಮಾಡಲು ತಯಾರಾಗಿದ್ದು, ಶಾಂತ ರೀತಿಯಲ್ಲಿ ವಿವಾದವನ್ನು ಇತ್ಯರ್ಥಪಡಿಸಲು ಮುಂದಾಗಿದೆ. ಉಕ್ರೇನ್ ಮತ್ತು ರಷ್ಯಾ ದೇಶಗಳು ಹಿಂದಿನಿಂದಲೂ ವೈರತ್ವ ಹೊಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+