Ukraine War: 40 ಕ್ಷಿಪಣಿ & 580 ಡೆಡ್ಲಿ ಡ್ರೋನ್ ಬಳಸಿ ಉಕ್ರೇನ್ ಮೇಲೆ ದಾಳಿ ಮಾಡಿದ ರಷ್ಯಾ!
ರಷ್ಯಾ ಸೇನೆ ರಾತ್ರೋರಾತ್ರಿ ರೊಚ್ಚಿಗೆದ್ದು ತನ್ನ ಶತ್ರು ಉಕ್ರೇನ್ ವಿರುದ್ಧ ಭಾರಿ ಘೋರವಾದ ಅಟ್ಯಾಕ್ ಮಾಡಿದೆ. ರಷ್ಯಾ ಮಿಲಿಟರಿ ಇತ್ತೀಚಿನ ದಿನಗಳಲ್ಲಿ ನಡೆಸಿರುವ ಅತ್ಯಂತ ಡೆಡ್ಲಿ ಅಟ್ಯಾಕ್‌ಗಳನ್ನೇ ಈ ದಾಳಿ ಮೀರಿಸಿದೆ. ಸುಮಾರು 40 ಕ್ಷಿಪಣಿ ಹಾಗೂ 580 ಡೆಡ್ಲಿ ಡ್ರೋನ್ ಬಳಸಿ ಉಕ್ರೇನ್ ಮೇಲೆ ದಾಳಿ ಮಾಡಿದ ರಷ್ಯಾ ಸೇನೆ ಎಲ್ಲವನ್ನೂ ಧೂಳ್ ಧೂಳ್ ಮಾಡಿ ಹಾಕಿದೆ. ಇದರ ಜೊತೆಗೆ ಮೊದಲೇ ಜೀವ ಭಯದಲ್ಲಿ ನರಳುತ್ತಿದ್ದ ಉಕ್ರೇನ್‌ಗೆ ಇದೀಗ ಹೊಸ ಭಯ ಕೂಡ ಶುರುವಾಗಿದೆ. ಅದರಲ್ಲೂ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಗೆ ಇದೀಗ ಆತಂಕ ಮತ್ತಷ್ಟು ಹೆಚ್ಚಾಗಿದೆ.
ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಏನು ಪ್ರಯತ್ನ ಮಾಡಿದರೂ ಪ್ರಯೋಜನಕ್ಕೇ ಬರುತ್ತಿಲ್ಲ. ರಷ್ಯಾ ಮತ್ತು ಉಕ್ರೇನ್ ಯುದ್ಧ ಜ್ವಾಲೆ ದಿನದಿಂದ ದಿನಕ್ಕೆ ಮತ್ತಷ್ಟು ಜೋರಾಗುತ್ತಾ ಇದ್ದು ಧಗಧಗಿಸುತ್ತಾ ಇದೆ. ಹೀಗೆ ರಷ್ಯಾ & ಉಕ್ರೇನ್ ಬಡಿದಾಡುತ್ತಿದ್ರೆ ಅಮೆರಿಕ ತನಗೆ ಏನು ಬೇಕು ಅದನ್ನ ಮಾತ್ರ ನೋಡಿಕೊಳ್ಳುತ್ತಿದೆ ಎಂಬ ಆರೋಪ ಕೂಡ ಈಗ ಕೇಳಿ ಬರುತ್ತಿದೆ. ಹೀಗಿದ್ದಾಗಲೇ ರಷ್ಯಾ ಸೇನೆ ಕುಡ ಹಿಂದೆ & ಮುಂದೆ ಈ ಬಗ್ಗೆ ಚಿಂತೆಯನ್ನೇ ಮಾಡದೆ ಬಿಂದಾಸ್ ಆಗಿ 40 ಕ್ಷಿಪಣಿ ಹಾಗೂ 580 ಡೆಡ್ಲಿ ಡ್ರೋನ್ ಬಳಸಿ ಉಕ್ರೇನ್ ವಿರುದ್ಧ ಅಟ್ಯಾಕ್ ಮಾಡಿದೆ.

ರಷ್ಯಾ ದಾಳಿಗೆ ಬೆಚ್ಚಿಬಿದ್ದ ಉಕ್ರೇನ್!
ಉಕ್ರೇನ್ ಅಧ್ಯಕ್ಷ ಈ ಬಗ್ಗೆ ಆರೋಪ ಮಾಡಿದ್ದು, ಝೆಲೆನ್ಸ್ಕಿ ಹೇಳಿರುವಂತೆ ಇದೀಗ ರಷ್ಯಾ ದಾಳಿಯ ಪರಿಣಾಮ ಡ್ನಿಪ್ರೊ ಭೀಕರವಾಗಿ ಹಾನಿಗೊಳಗದ ಪ್ರದೇಶವಾಗಿದೆ. ಸ್ಥಳೀಯ ಗವರ್ನರ್ ನೀಡಿದ ಮಾಹಿತಿ ಪ್ರಕಾರ ಈ ದಾಳಿಯಲ್ಲಿ 26 ಉಕ್ರೇನ್ ಪ್ರಜೆಗಳು ಭೀಕರವಾಗಿ ಗಾಯಗೊಂಡಿದ್ದಾರೆ. ಹಾಗೇ, ಸಾವಿನ ಸಂಖ್ಯೆ ನಿಖರವಾಗಿ ತಿಳಿದಿಲ್ಲ. ಇದರ ಜೊತೆಗೆ ನೂರಾರು ಕಟ್ಟಡಗಳು ಕೂಡ ನಾಶವಾಗಿವೆ ಎನ್ನುವ ಆಕ್ರೋಶ ಹೊರ ಹಾಕಿದ್ದಾರೆ. ಹೀಗಿದ್ದಾಗ ರಷ್ಯಾ ಸೇನೆ ಮತ್ತಷ್ಟು ದೊಡ್ಡ ಮಟ್ಟದಲ್ಲಿ ದಾಳಿಯನ್ನು ನಡೆಸುವ ಆತಂಕ ಇದೀಗ ಆವರಿಸಿದೆ.
ಶತ್ರು ಎದೆ ನಡುಗಿಸುತ್ತಿರುವ ರಷ್ಯಾ...
ಉಕ್ರೇನ್ ರಾಜಧಾನಿ ಕೀವ್ ಸೇರಿ ಹಲವು ಪ್ರಮುಖ ನಗರಗಳು ನಾಶವಾಗಿ ಹೋಗಿದ್ದು, ಪರಿಸ್ಥಿತಿ ಕೈಮೀರಿ ಹೋಗಿದೆ. ಪರಿಸ್ಥಿತಿ ಸುಧಾರಿಸಲು ಹಲವು ದೇಶಗಳು ಪ್ರಯತ್ನವನ್ನ ಮಾಡುತ್ತಿದ್ದರೂ ಪ್ರಯೋಜನಕ್ಕೆ ಬಂದಿಲ್ಲ ಇನ್ನೊಂದು ಕಡೆ ಉಕ್ರೇನ್ ಕೂಡ ತನ್ನ ಹಠ ಮುಂದುವರಿಸಿರುವ ಕಾರಣ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹಾಯುದ್ಧದ ಭೀತಿ ಕಾಡುತ್ತಿದೆ. ಇದೇ ಸಮಯದಲ್ಲಿ ರಷ್ಯಾ ಸೇನೆ ಕೂಡ ಭೀಕರವಾಗಿ ದಾಳಿ ಮಾಡುತ್ತಿದೆ. ಹೀಗಾಗಿ ಚಿಂತೆ ಕೂಡ ಹೆಚ್ಚಾಗಿದೆ ಈಗ...












Click it and Unblock the Notifications