Ukraine War: ಉಕ್ರೇನ್ ಭೂಮಿ ಮೇಲೆ ರಷ್ಯಾ ಹಿಡಿತ ಮತ್ತಷ್ಟು ಜೋರು, ಇನ್ನಷ್ಟು ಪ್ರದೇಶಗಳು ವಶಕ್ಕೆ!
ರಷ್ಯಾ & ಉಕ್ರೇನ್ ನಡುವೆ ಶಾಂತಿ ಮಾತುಕತೆ ಇನ್ನೇನು ನಡೆದೇ ಹೋಗಲಿದೆ ಅನ್ನೋ ಸಮಯ ಎದುರಾಗಿರುವ ವಾತಾವರಣದಲ್ಲೇ, ಇನ್ನೊಮ್ಮೆ ದ್ವೇಷದ ಬೆಂಕಿ ಮೊಳಗಿದೆ. ರಷ್ಯಾ ಸೇನೆಯಿಂದ ಭಾರಿ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ಶುರು ಆಗಿದ್ದು, ನೋಡ ನೋಡುತ್ತಲೇ ಉಕ್ರೇನ್ ದೇಶಕ್ಕೆ ಸೇರಿದ ಮತ್ತಷ್ಟು ಪ್ರದೇಶಗಳನ್ನು ವಶಕ್ಕೆ ಪಡೆದಿದೆ ರಷ್ಯಾ ಸೇನೆ. ಈ ಮೂಲಕ ರಷ್ಯಾ & ಉಕ್ರೇನ್ ನಡುವಿನ ತಿಕ್ಕಾಟ ಇನ್ನಷ್ಟು ಜೋರಾಗುವ ಮುನ್ಸೂಚನೆ ಕೂಡ ಸಿಗುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶಾಂತಿ ಮಾತುಕತೆಗೆ ಕೂಡ ಇದರಿಂದ ಭಾರಿ ಹಿನ್ನಡೆ ಆಗ್ತಾ ಇದೆ.
ಅಂದಹಾಗೆ ಉಕ್ರೇನ್ ಈಗ 28 ಅಂಶಗಳ ಯೋಜನೆ ಒಪ್ಪಿ ರಷ್ಯಾ ಜೊತೆಗೆ ರಾಜಿ ಮಾಡಿಕೊಂಡು ಈ ಯುದ್ಧ ನಿಲ್ಲಿಸಬೇಕು ಎಂಬ ಒತ್ತಡವನ್ನ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಕುತ್ತಿದ್ದಾರೆ. ಹಾಗೇ ಉಕ್ರೇನ್ ತಮ್ಮ ಮಾತು ಕೇಳದೇ ಇದ್ದರೆ ಭವಿಷ್ಯದಲ್ಲಿ ಪರಿಸ್ಥಿತಿ ಸರಿ ಇರುವುದಿಲ್ಲ ಎಂಬ ಭಾರಿ ಗಂಭೀರವಾದ ಎಚ್ಚರಿಕೆ ಕೂಡ ನೀಡಿದೆ ಅಮೆರಿಕ. ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿರುವಾಗಲೇ ಮತ್ತೊಂದು ಕಡೆ ರಷ್ಯಾ ಭಾರಿ ದೊಡ್ಡ ಆಘಾತವನ್ನೇ ಇದೀಗ ಉಕ್ರೇನ್‌ಗೆ ಕೊಟ್ಟಿದೆ. ಅಷ್ಟಕ್ಕೂ ಪೂರ್ವ ಉಕ್ರೇನ್‌ನಲ್ಲಿ ವಿಶೇಷವಾಗಿ ಡೊನೆಟ್ಸ್ಕ್ & ಜಪೋರಿಝಿಯಾ ಪ್ರದೇಶಗಳಲ್ಲಿ ರಷ್ಯಾ ಸೇನೆಯ ಅಬ್ಬರ ಜೋರಾಗಿದೆ.

ಹಲವು ಪ್ರದೇಶಗಳು ರಷ್ಯಾ ವಶಕ್ಕೆ
ರಷ್ಯಾ ಸೇನೆ ಉಕ್ರೇನ್‌ನ ರಾಜಧಾನಿಯನ್ನೇ ಟಾರ್ಗೆಟ್ ಮಾಡಿ ಮುಂದೆ ನುಗ್ಗುತ್ತಾ ಇದ್ದು, ಈಗ ಡೊನೆಟ್ಸ್ಕ್ ಭಾಗದ ಬಖ್‌ಮುಟ್ ಬಳಿಯ ಜ್ವಾನಿವ್ಕಾ ಹಳ್ಳಿ & 14 ಚದರ ಕಿಲೋ ಮೀಟರ್ ಮೀರಿದ ವಿಸ್ತಾರವಾದ ಜಾಗವನ್ನೇ ವಶಕ್ಕೆ ಪಡೆದಿದೆ. ಅದರಲ್ಲೂ ಅಣುಸ್ಥಾವರ ಇರುವ ಭಾಗದಲ್ಲೇ ಹೀಗೆ ರಷ್ಯಾ ಸೇನೆ ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ಶುರು ಮಾಡಿರುವುದು ಸಹಜವಾಗಿ ಜಗತ್ತಿನ, ಪ್ರತಿಯೊಂದು ದೇಶದ ಗಮನ ಸೆಳೆದಿದೆ. ಜಪೋರಿಝಿಯಾ ಪ್ರದೇಶ ಸೇರಿದಂತೆ ಹಲವು ಪ್ರದೇಶಗಳ ಮೇಲೆ ರಷ್ಯಾ ಸಂಪೂರ್ಣ ಹಿಡಿತ ಸಾಧಿಸಿದೆ.
ಯುದ್ಧ ನಿಲ್ಲಿಸಲು ಉಕ್ರೇನ್ ಚಿಂತನೆ?
ಒಟ್ನಲ್ಲಿ 2022 ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ರಷ್ಯಾ & ಉಕ್ರೇನ್ ವಾರ್ ಒಂದು ಹಂತಕ್ಕೆ ಬಂದು ತಲುಪಿದೆ. ರಷ್ಯಾ & ಉಕ್ರೇನ್ ನಡುವೆ ಯುದ್ಧ ನಿಲ್ಲುವ ಮುನ್ಸೂಚನೆ ಕಂಡು ಬರುತ್ತಿದ್ದು, ಈಗ ರಷ್ಯಾ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಇಟ್ಟಿರುವ ಶರತ್ತುಗಳಿಗೆ ಒಪ್ಪಿಕೊಳ್ಳುವ ಬಗ್ಗೆ ಎಲ್ಲಾ ಚರ್ಚೆ ಸಾಗಿದೆ. ಆದಷ್ಟು ಬೇಗ ಯುದ್ಧ ನಿಲ್ಲಿಸಬೇಕು ಎಂದು ಅಮೆರಿಕ ತೀವ್ರ ರಾಜತಾಂತ್ರಿಕ ಒತ್ತಡ ಹಾಕುತ್ತಿದ್ದು, ಇನ್ನೊಂದು ಕಡೆ ರಷ್ಯಾ ಕೂಡ ತನ್ನ ದಾಳಿಯನ್ನ ಮುಂದುವರಿಸುತ್ತಿದೆ. ಈ ಮೂಲಕ ಉಕ್ರೇನ್‌ಗೆ ಈಗ ರಾಜಿ ಮಾಡಿಕೊಳ್ಳುವುದು ಬಿಟ್ಟು ಬೇರೆ ಏನೂ ಬಾಕಿ ಉಳಿದಿಲ್ಲ...












Click it and Unblock the Notifications