ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ವಿರೋಧಿ ಒಕ್ಕೂಟವನ್ನು ಸೇರುವುದಿಲ್ಲ ಎಂದ ರಷ್ಯಾ

|
Google Oneindia Kannada News

ಮಾಸ್ಕೋ, ಜುಲೈ 24: ಚೀನಾ ವಿರುದ್ಧದ ಯಾವುದೇ ಒಕ್ಕೂಟವನ್ನು ರಷ್ಯಾ ಸೇರುವುದಿಲ್ಲ ಎಂದು ರಷ್ಯಾ ಸರ್ಕಾರ ಸ್ಪಷ್ಟಪಡಿಸಿದೆ. ಅಮೆರಿಕ, ಭಾರತ, ಜಪಾನ್ ಸೇರಿ ಕೆಲ ದೇಶಗಳೊಂದಿಗಿನ ಚೀನಾ ಸಂಬಂಧ ಬಿಗಡಾಯಿಸಿದ ಬೆನ್ನಲ್ಲೇ ಚೀನಾದ ವಿರುದ್ಧ ಎಲ್ಲರೂ ಒಗ್ಗೂಡಬೇಕಿದೆ ಎಂದು ಅಮೆರಿಕ ಕರೆ ನೀಡಿತ್ತು.

Recommended Video

The Indian Premier League (IPL) 2020 is all set to kick-off | Oneindia Kannada

ಇದಕ್ಕೆ ಪ್ರತಿಕ್ರಿಯಿಸಿರುವ ರಷ್ಯಾ ಚೀನಾದೊಂದಿಗೆ ರಷ್ಯಾ ಉತ್ತಮ ಸಂಬಂಧ ಹೊಂದಿದೆ. ಚೀನಾ ನಂಬಿಕಸ್ಥ ದೇಶವಾಗಿದೆ ಹಾಗೂ ರಷ್ಯಾದೊಂದಿಗೆ ಉತ್ತಮ ದ್ವಿಪಕ್ಷೀಯ ಸಂಬಂಧ ಹೊಂದಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಚೀನಾ ವಿರೋಧಿ ಒಕ್ಕೂಟವನ್ನು ಸೇರಿ ಚೀನಾ ವಿರುದ್ಧ ಯಾವುದೇ ರೀತಿಯ ಹೋರಾಟ ನಡೆಸುವುದಿಲ್ಲ ಎಂದು ರಷ್ಯಾ ಸರ್ಕಾರದ ವಕ್ತಾರ ಕ್ರೆಮ್ಲಿನ್ ತಿಳಿಸಿದ್ದಾರೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹಸ್ತಕ್ಷೇಪ: ಎಚ್ಚರಿಕೆ ನೀಡಿದ ಅಮೆರಿಕಾದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹಸ್ತಕ್ಷೇಪ: ಎಚ್ಚರಿಕೆ ನೀಡಿದ ಅಮೆರಿಕಾ

ಈ ಮೂಲಕ ಚೀನಾ ವಿರುದ್ಧ ಎಲ್ಲಾ ಆರ್ಥಿಕ ಹಾಗೂ ಬೇರೆ ಸ್ವರೂಪದ ಹೋರಾಟಕ್ಕೆ ರಷ್ಯಾ ಬೆಂಬಲ ನಿರೀಕ್ಷಿಸಿದ್ದ ಅಮೆರಿಕ, ಭಾರತ ಹಾಗೂ ಜಪಾನ್‌ಗೆ ಹಿನ್ನಡೆಯಾದಂತಾಗಿದೆ.

Russia-China Relations Special, Wont Join Any Alliance Against Anyone

ಕಳೆದ ಎರಡು ತಿಂಗಳಿಂದ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಹಳಸಿದ್ದರೂ ಈಬಗ್ಗೆ ರಷ್ಯಾ ತುಟಿ ಬಿಚ್ಚಿರಲಿಲ್ಲ. ಆದರೆ ಅಮೆರಿಕದ ಹೇಳಿಕೆ ಬಳಿಕ ಈಗ ರಷ್ಯಾ ತನ್ನ ಅಭಿಪ್ರಾಯ ತಿಳಿಸಿದೆ.

ಇದರಿಂದ ಚೀನಾ ಪರ ರಷ್ಯಾ ಇರುವುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಚೀನಾವನ್ನು ಏಕಾಂಗಿ ಮಾಡಬೇಕೆನ್ನುವ ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾದ ಆಲೋಚನೆಗೆ ಹೊಡೆತ ಬಿದ್ದಂತಾಗಿದೆ.

ಭಾರತ ಚೀನಾದ 59 ಅಪ್ಲಿಕೇಷನ್ ರದ್ದುಗೊಳಿಸದ ಬೆನ್ನಲ್ಲೇ ಅಮೆರಿಕವೂ ಕೂಡ ಇದರ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಯೋ ಹೇಳಿದ್ದರು. ಚೀನಾ ವಿರುದ್ಧದ ಹೋರಾಟಕ್ಕೆ ಎಲ್ಲಾ ದೇಶಗಳು ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದರು. ಇದಲ್ಲದೆ ಚೀನಾವು ಭಾರತ ಹಾಗೂ ಜಪಾನ್‌ನ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದ್ದರು.

English summary
Russia, on Friday, clarified that it will not join any alliance against China as Moscow and Beijing share special relations. Referring to China as 'our partner', Kremlin said that Russia will not join any alliance aimed against anyone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X