Ukraine & Russia: ಉಕ್ರೇನ್ ವಿರುದ್ಧ ವಿಜಯ ಘೋಷಣೆ ಮೊಳಗಿಸಲು ರಷ್ಯಾ ಸಜ್ಜು?
ಜಗತ್ತಿನ ಘೋರ ಯುದ್ಧವೊಂದು ಇನ್ನೇನು ನಿಂತು ಹೋಗುವ ಹಂತ ಪ್ರವೇಶ ಮಾಡುತ್ತಾ ಇದೆ... ರಷ್ಯಾ & ಉಕ್ರೇನ್ ಯುದ್ಧ ಒಂದು ಹಂತಕ್ಕೆ ಬಂದು ನಿಂತಿದ್ದು, ಈ ಯುದ್ಧ ನಿಲ್ಲಿಸಲು ನಡೆದ ಪ್ರಯತ್ನಗಳು ಕೊನೆಗೂ ಫಲ ನೀಡಿದಂತೆ ಕಾಣುತ್ತಿದೆ. ಒಂದು ಕಡೆ ಅಮೆರಿಕ ಅಧ್ಯಕ್ಷ ಟ್ರಂಪ್ & ಇನ್ನೊಂದು ಕಡೆ ಜಗತ್ತಿನ ಬಲಿಷ್ಠ ದೇಶಗಳು ಒಗ್ಗೂಡಿ ಈ ಯುದ್ಧಕ್ಕೆ ಬ್ರೇಕ್ ಹಾಕಲು ಸಾಕಷ್ಟು ಪ್ರಯತ್ನ ಮಾಡಿದ್ದವು.
ಯುದ್ಧ ನಿಲ್ಲಿಸಲು ಎಲ್ಲಾ ರೀತಿ ಒತ್ತಡ ತಂತ್ರಗಳನ್ನೂ ಅನುಸರಿಸಲಾಗಿತ್ತು. ಹೀಗಿದ್ದರೂ ರಷ್ಯಾ & ಉಕ್ರೇನ್ ಯುದ್ಧ ಇನ್ನೇನು ಕೆಲವೇ ದಿನಗಳಲ್ಲಿ 4 ವರ್ಷ ಮುಗಿಸಿ 5ನೇ ವರ್ಷಕ್ಕೆ ಎಂಟ್ರಿ ಕೊಡುವ ಆತಂಕ ಆವರಿಸಿತ್ತು. ಆದರೆ ಇಂತಹ ಸಮಯದಲ್ಲೇ ಖುಷಿ ಸುದ್ದಿಯೊಂದು ಹೊರಬೀಳುತ್ತಿದ್ದು, ಈ ಸುದ್ದಿ ಉಕ್ರೇನ್ ಪಾಲಿಗೆ ಬಿಸಿ ತುಪ್ಪವಾಗಿದ್ದರೆ, ಅದೇ ಸಮಯದಲ್ಲಿ ರಷ್ಯಾ ಪಾಲಿಗೆ ಸಿಹಿಸುದ್ದಿ ಆಗಿದೆ!

ಯುದ್ಧ ನಿಲ್ಲಿಸಲು ಉಕ್ರೇನ್ ಒಪ್ಪಿಗೆ?
ಉಕ್ರೇನ್ ಎಂಬ ದೇಶಕ್ಕೆ ತಾನು ರಷ್ಯಾ ವಿರುದ್ಧ ಗೆಲ್ಲುವುದಿಲ್ಲ ಅನ್ನೋದು ಗೊತ್ತಿದ್ದರೂ ಎಲ್ಲಾ ರೀತಿಯ ಅಸ್ತ್ರಗಳನ್ನು ಬಳಸಿ ಹೋರಾಡುವ ಚಪಲ. ಅದರಲ್ಲೂ ರಷ್ಯಾ ಜೊತೆಗೆ ಸಂಧಾನವನ್ನ ಮಾಡಿಕೊಂಡು ಶಾಂತಿ ಸ್ಥಾಪನೆ ಮಾಡಿ ಎಂಬ ಬೇಡಿಕೆಗೂ ಉಕ್ರೇನ್ ಹಿಂದೆ & ಮುಂದೆ ಚಿಂತಿಸಿ ಸಮಯ ವ್ಯರ್ಥ ಮಾಡುತ್ತಾ ಬಂದಿದೆ. ಇಷ್ಟೆಲ್ಲದರ ನಡುವೆ ಖುದ್ದು ಅಮೆರಿಕ ಅಧ್ಯಕ್ಷ ಟ್ರಂಪ್ ಕೊನೆಯ ಎಚ್ಚರಿಕೆ ನೀಡಿ, 28 ಅಂಶಗಳ ಕದನ ವಿರಾಮ ಘೋಷಣೆ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ಉಕ್ರೇನ್‌ಗೆ ಆಜ್ಞೆ ಮಾಡಿದ್ದರು. ಈ ಆಜ್ಞೆಯ ನಂತರ ಇದೀಗ ಉಕ್ರೇನ್ ದಾರಿಗೆ ಬಂದ ರೀತಿ ಕಾಣುತ್ತಿದೆ. ಮತ್ತೊಂದು ಕಡೆ ರಷ್ಯಾ ಕೂಡ ವಿಜಯ ಘೋಷಣೆ ಮೊಳಗಿಸಲು ಸಜ್ಜಾಯ್ತಾ?
ರಷ್ಯಾಗೆ ಸಂಭ್ರಮವೋ ಸಂಭ್ರಮ...
ಅಮೆರಿಕ ಒತ್ತಡ ಹೇರುತ್ತಿರುವ ಸಮಯದಲ್ಲಿ ಉಕ್ರೇನ್ ಚಿಂತನೆ ನಡೆಸುತ್ತಿದ್ದು, ಯುದ್ಧ ನಿಲ್ಲಿಸಿ ಸೈಲೆಂಟ್ ಆಗಬೇಕಾ? ಅಥವಾ ರಷ್ಯಾ ವಿರುದ್ಧ ಇನ್ನೂ ಹೋರಾಡಬೇಕಾ ಎಂಬ ಗೊಂದಲದಲ್ಲಿ ಈಗಲೂ ಒದ್ದಾಡುತ್ತಿದೆ ಉಕ್ರೇನ್. ಆದರೆ ಈಗಿರುವ ಪರಿಸ್ಥಿತಿಯಲ್ಲಿ ಉಕ್ರೇನ್ ಕೂಡ ಕದನ ವಿರಾಮ ಘೋಷಣೆಗೆ ಒಪ್ಪಿಗೆ ಸೂಚಿಸುವುದು ಬಹುತೇಕ ಖಚಿತವಾಗಿದೆ. ಹೀಗಿದ್ದಾಗ ಈ ಗೆಲುವು ರಷ್ಯಾಗೆ ಸಂಭ್ರಮವೋ ಸಂಭ್ರಮ ತಂದಿದೆ. ಏಕೆಂದರೆ ಈಗಾಗಲೇ ರಷ್ಯಾ ಸೇನೆ ಉಕ್ರೇನ್ ದೇಶದ ಭಾಗಶಃ ಭೂಮಿಯನ್ನು ವಶಕ್ಕೆ ಪಡೆದಿದೆ!












Click it and Unblock the Notifications