Ukraine War: ರಷ್ಯಾ ಜೊತೆ ಶೀಘ್ರದಲ್ಲೇ ಮಹತ್ವದ ಒಪ್ಪಂದಕ್ಕೆ ಉಕ್ರೇನ್ ಸಹಿ?
ಹೊಡಿ ಬಡಿ ಅಂತಾ ಪ್ರತಿದಿನ, ಪ್ರತಿಕ್ಷಣ ಕೂಡ ರಷ್ಯಾ & ಉಕ್ರೇನ್ ನಡುವೆ ದೊಡ್ಡ ಗಲಾಟೆ ಈಗ ನಡೆಯುತ್ತಿದೆ. ರಷ್ಯಾ & ಉಕ್ರೇನ್ ಯುದ್ಧ ಶುರುವಾಗಿ ಹಲವು ವರ್ಷಗಳೇ ಕಳೆದರೂ ಯುದ್ಧ ನಿಂತು ಹೋಗುವ ಲಕ್ಷಣ ಮಾತ್ರ ಗೋಚರಿಸುತ್ತಿಲ್ಲ. ಹೀಗಾಗಿ ಜಾಗತಿಕ ವಲಯದಲ್ಲಿ ಕೂಡ ಯುದ್ಧ ನಿಲ್ಲಿಸಿ, ಆದಷ್ಟು ಬೇಗ ಅಮಾಯಕರ ಜೀವ ಕಾಪಾಡುವ ಪ್ರಯತ್ನ ಸಾಗಿದೆ. ಆದರೆ ಇಬ್ಬರ ನಡುವೆ ಇದೀಗ ಶಾಂತಿ ಮಾತುಕತೆ ನಡೆಸಲು ಮಾಡುತ್ತಿರುವ ಪ್ರಯತ್ನ ಫಲ ನೀಡುತ್ತಿಲ್ಲ. ಇಷ್ಟೆಲ್ಲಾ ಒತ್ತಡ ಎದುರಾದ ಸಮಯದಲ್ಲೇ ಉಕ್ರೇನ್ ಜನರ ಎದೆಯಲ್ಲಿ ಹೊಸ ಆಶಾಭಾವನೆ ಮೂಡಿದೆ.
ರಷ್ಯಾ ರೊಚ್ಚಿಗೆದ್ದು ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿದ್ದರೂ ರಷ್ಯಾ ಸೇನೆ ಕೋಪ ಇರುವುದು ಮಾತ್ರ ಅಮೆರಿಕ ಮೇಲೆ. ಯಾಕಂದ್ರೆ ಜೋ ಬೈಡನ್ ಅವರ ಸರ್ಕಾರ ಉಕ್ರೇನ್ ಬೆನ್ನಿಗೆ ನಿಂತು, ಶಸ್ತ್ರಾಸ್ತ್ರಗಳನ್ನು ಕೊಟ್ಟು ರಷ್ಯಾ ವಿರುದ್ಧ ಮಸಲತ್ತು ಮಾಡಿತ್ತು ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಆ ನಂತರವೇ ರಷ್ಯಾ ತನ್ನ ದಾಳಿಯನ್ನು ಇನ್ನಷ್ಟು ಭೀಕರಗೊಳಿಸಿತ್ತು. ಆದರೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಪಟ್ಟಕ್ಕೆ ಬಂದ ನಂತರ ಪರಿಸ್ಥಿತಿ ಒಂದಷ್ಟು ಸುಧಾರಿಸುವ ನಿರೀಕ್ಷೆ ಮೂಡಿತ್ತು. ದಿಢೀರ್ ಇದೆಲ್ಲಾ ಈಗ ಪಕ್ಕಾ ಹುಸಿಯಾಗಿ ಹೋಗುತ್ತಿದ್ದು, ರಷ್ಯಾ & ಉಕ್ರೇನ್ ವಾರ್ ಮತ್ತಷ್ಟು ಜೋರಾಗಿದೆ.

ರಷ್ಯಾ ಜೊತೆ ಶೀಘ್ರದಲ್ಲೇ ಮಹತ್ವದ ಒಪ್ಪಂದ?
ಹೌದು, ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ರಷ್ಯಾ & ಉಕ್ರೇನ್ ಯುದ್ಧವನ್ನು ಇದೇ ರೀತಿ ಬಿಟ್ಟುಬಿಟ್ಟರೆ ಭವಿಷ್ಯದಲ್ಲಿ ಭಾರಿ ದೊಡ್ಡ ಅವಾಂತರ ಗ್ಯಾರಂಟಿ ಎಂಬ ಅನುಮಾನ ಮೂಡಿದೆ. ಈ ಯುದ್ಧದಿಂದ ಪಾಶ್ಚಿಮಾತ್ಯ ದೇಶಗಳು ಭಾರಿ ದೊಡ್ಡ ಪೆಟ್ಟು ತಿನ್ನುತ್ತಿದ್ದು, ಜಾಗತಿಕ ವಲಯದಲ್ಲಿ ಕೂಡ ದೊಡ್ಡ ಚರ್ಚೆ ಶುರುವಾಗಿದೆ. ಇಂತಹ ಸಮಯದಲ್ಲೇ ಅಮೆರಿಕ ಮಹತ್ವದ ಹೆಜ್ಜೆ ಇಟ್ಟಿದ್ದು, ರಷ್ಯಾ ಜೊತೆ ಉಕ್ರೇನ್ ಅಧ್ಯಕ್ಷನ ಮಾತುಕತೆಗೆ ಸಿದ್ಧತೆ ನಡೆಸಿದೆಯಾ?
ಪುಟಿನ್ ಭೇಟಿ ಆಗುತ್ತಾರಾ ಝೆಲೆನ್ಸ್ಕಿ?
ಅಂದಹಾಗೆ ತಮ್ಮ ಆತ್ಮೀಯ ಗೆಳೆಯ ವ್ಲಾದಿಮಿರ್ ಪುಟಿನ್ ವಿರುದ್ಧವೇ ಇದೀಗ ಅಮೆರಿಕ ಅಧ್ಯಕ್ಷರಾದ ಟ್ರಂಪ್ ರೊಚ್ಚಿಗೆದ್ದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಯಾಕಂದ್ರೆ ಉಕ್ರೇನ್ ವಿರುದ್ಧದ ಯುದ್ಧ ನಿಲ್ಲಿಸಲು ಅಮೆರಿಕ ಎಷ್ಟೇ ಹೇಳಿದರೂ ಅದನ್ನು ರಷ್ಯಾ ಕೇಳುತ್ತಿಲ್ಲ. ಹೀಗಾಗಿ ರಷ್ಯಾ ವಿರುದ್ಧ ಟ್ರಂಪ್ ಆಡಳಿತ ಭಾರಿ ಗರಂ ಆಗಿದ್ದು, ಶೀಘ್ರದಲ್ಲೇ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಸುದ್ದಿ ಕೂಡ ಈಗ ಹಬ್ಬಿದೆ.
ಇದರ ಜೊತೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ & ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಹತ್ವದ ಮೀಟಿಂಗ್ ನಡೆಸಲಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಹೀಗಾಗಿ ಕುತೂಹಲ ಕೂಡ ಡಬಲ್ ಆಗಿದ್ದು, ಉಕ್ರೇನ್ ಭವಿಷ್ಯ ನಿರ್ಧರಿಸಲು ಈ ಮೀಟಿಂಗ್ ಮಹತ್ವದ ಪರಿಣಾಮ ಬೀರುವ ನಿರೀಕ್ಷೆ ಇದೆ. ಮತ್ತೊಂದು ಕಡೆ ಈ ವಿಚಾರವನ್ನು ಟ್ರಂಪ್ ಆಡಳಿತ ಪ್ರತಿಷ್ಠೆಯಾಗಿ ಸ್ವೀಕರಿಸಿದೆ.












Click it and Unblock the Notifications