ಉಕ್ರೇನ್ ಹಾರಿಸಿದ 42 ಡ್ರೋನ್‌ಗಳು ರಷ್ಯಾ ದಾಳಿಯಲ್ಲಿ ಪುಡಿ ಪುಡಿ?

ಕ್ರಿಮಿಯಾ: ಅತ್ಯಾಧುನಿಕ ಡ್ರೋನ್‌ಗಳ ಸಹಾಯದಿಂದ ರಷ್ಯಾ ವಿರುದ್ಧ ತನ್ನ ದಾಳಿಯನ್ನ ಉಕ್ರೇನ್ ಮುಂದುವರಿಸಿದೆ. 2014ರ ನಂತರ ಸಂಪೂರ್ಣ ರಷ್ಯಾ ಕೈಯಲ್ಲಿರುವ ಕ್ರಿಮಿಯಾ ಮೇಲೆ ಉಕ್ರೇನ್ ಕಣ್ಣಿಟ್ಟು ಕೂತಿರುವ ಆರೋಪವಿದೆ. ಈ ಕಾರಣಕ್ಕೆ ಬರೋಬ್ಬರಿ 40ಕ್ಕೂ ಹೆಚ್ಚು ಡ್ರೋನ್‌ಗಳ ಸಹಾಯದಿಂದ ರಷ್ಯಾ ಮೇಲೆ ಉಕ್ರೇನ್ ದಾಳಿ ನಡೆಸಿದೆ ಎನ್ನಲಾಗಿದೆ. ಆದರೆ ರಷ್ಯಾ ತನ್ನ ಗಡಿಗೆ ಬಂದ ಎಲ್ಲಾ ಡ್ರೋನ್‌ಗಳನ್ನು ಆಕಾಶದಲ್ಲೇ ಪುಡಿ ಮಾಡಿದೆ.

2022ರಲ್ಲಿ ಯುದ್ಧ ಆರಂಭವಾದ ನಂತರ ರಷ್ಯಾ ಹಿಡಿತದಲ್ಲಿ ಇರುವ ಕ್ರಿಮಿಯಾ ಮೇಲೆ ಪದೇ ಪದೆ ದಾಳಿ ನಡೆಯುತ್ತಿದೆ. ಇದನ್ನ ಉಕ್ರೇನ್ ಮಾಡುತ್ತಿದೆ ಅಂತಾ ರಷ್ಯಾ ಪಡೆಗಳು ಆರೋಪ ಮಾಡುತ್ತಿವೆ, ಆದರೆ ಇದು ರಷ್ಯಾ ಸೇನೆಯ ಕೃತ್ಯ ಅಂತಾ ಉಕ್ರೇನ್ ಆರೋಪ ಮಾಡುತ್ತಿದೆ. ಇಬ್ಬರ ಕಿತ್ತಾಟದಲ್ಲಿ ಕ್ರಿಮಿಯಾ ನಡುಗುತ್ತಿದೆ. ಈಗಲೂ ಅಷ್ಟೇ ದಿಢೀರ್ 42 ಡ್ರೋನ್‌ಗಳು ಕ್ರಿಮಿಯಾ ಆಗಸದಲ್ಲಿ ಹಾರಾಡಿವೆ. ತಕ್ಷಣವೇ ತನ್ನ ವಾಯುರಕ್ಷಣಾ ವ್ಯವಸ್ಥೆ ಮೂಲಕ ಎಲ್ಲಾ ಡ್ರೋನ್‌ಗಳನ್ನ ಉಡೀಸ್ ಮಾಡಿದ್ದಾಗಿ ರಷ್ಯಾ ಸೇನೆ ಘೋಷಿಸಿದೆ. ಸಾವು ನೋವಿನ ಬಗ್ಗೆ ಯಾವುದೇ ವರದಿಯಾಗಿಲ್ಲ.

ukrainian-launched-drones-over-crimea

ಗಡಿಯಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣ

ಉಕ್ರೇನ್ ತನ್ನ ಡ್ರೋನ್‌ಗಳ ಸಹಾಯದಿಂದ ರಷ್ಯಾ ಪ್ರದೇಶದ ಮೇಲೆ ದಾಳಿ ನಡೆಸುವಾಗ, ರಷ್ಯಾ ಕೂಡ ಭಯಾನಕ ದಾಳಿಗೆ ಸಜ್ಜಾಗುತ್ತಿದೆ. ಹೀಗೆ ರಷ್ಯಾ & ಉಕ್ರೇನ್ ಗಡಿಭಾಗದಲ್ಲಿ ಯುದ್ಧದ ಭೀಕರತೆ ಜೋರಾಗಿದೆ. ಈಗಾಗಲೇ ರಷ್ಯಾ ತನ್ನ ಗಡಿ ಭಾಗದಲ್ಲಿ ವಾಸವಿರುವ ಹಳ್ಳಿಗಳ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಆದರೆ ಉಕ್ರೇನ್ ಭಾಗದ ಜನರು ತಮ್ಮ ಜೀವ ಉಳಿಸಿಕೊಳ್ಳಲು ಊರು ಬಿಟ್ಟು ಓಡಿ ಹೋಗಿದ್ದಾರೆ. ಇಷ್ಟಾದರೂ ಸೈಲೆಂಟ್ ಆಗದ ಉಕ್ರೇನ್ ಸೇನೆ ಮತ್ತು ರಷ್ಯಾ ಸೇನೆ ಒಬ್ಬರ ಮೇಲೆ ಮತ್ತೊಬ್ಬರು ಬಾಂಬ್ ಮತ್ತು ಕ್ಷಿಪಣಿ ಹಾಕುತ್ತಾ ರಕ್ತ ಚೆಲ್ಲಾಡುತ್ತಿವೆ.

ಜನರಿಗೆ ತಿನ್ನಲು ಅನ್ನವೂ ಸಿಗುತ್ತಿಲ್ಲ

ಉಕ್ರೇನ್ ತನ್ನ ಮೇಲೆ ದಾಳಿ ಮಾಡುತ್ತಿರುವ ಕಾರಣಕ್ಕೆ ರಷ್ಯಾ ಪ್ರತ್ಯುತ್ತರ ನೀಡಿದೆ ಎನ್ನಲಾಗಿದೆ. ಅದರಲ್ಲೂ ಉಕ್ರೇನ್‌ನ ಧಾನ್ಯ ಸಂಗ್ರಹ ಗೋದಾಮುಗಳ ಮೇಲೆ ರಷ್ಯಾ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡುತ್ತಿದೆ ಎಂಬ ಆರೋಪ ಇದೆ. ಹೀಗೆ, 1 ತಿಂಗಳಲ್ಲಿ ಸುಮಾರು 2,70,00 ಮೆಟ್ರಿಕ್‌ ಟನ್‌ ಧಾನ್ಯ ನಾಶವಾಗಿ ಹೋಗಿದೆ ಎಂದು ಉಕ್ರೇನ್‌ ತಿಳಿಸಿದೆ. ಆದರೆ ಇಬ್ಬರೂ ಹಠ ಬಿಟ್ಟು ಸಂಧಾನಕ್ಕೆ ಕೂರುತ್ತಿಲ್ಲ ಹೀಗಾಗಿ ಇಬ್ಬರ ಮಧ್ಯೆ ಮಾತುಕತೆ ನಡೆಯುತ್ತಿಲ್ಲ. ಇದು ಯುದ್ಧವನ್ನು ಹೀಗೆ ಮುಂದುವರಿಸುತ್ತಿದೆ. ಮುಂದೆ ಏನು ಮಾಡುವುದು ಅನ್ನೋದೇ ಈಗ ಉಕ್ರೇನ್ ಜನರಿಗೆ ಗೊತ್ತಾಗುತ್ತಿಲ್ಲ.

ukrainian-launched-drones-over-crimea

ಕ್ರಿಮಿಯಾ ಮತ್ತು ಕಪ್ಪು ಸಮುದ್ರ ಟಾರ್ಗೆಟ್

ಯುರೋಪ್ ರಾಷ್ಟ್ರಗಳಿಗೆ ಕಪ್ಪು ಸಮುದ್ರ ಜೀವ. ಅದರಲ್ಲೂ ಉಕ್ರೇನ್‌ಗೆ ಇದೇ ಜಲಮಾರ್ಗದ ಮೂಲಕ ವ್ಯವಹಾರ ನಡೆಯುತ್ತಿತ್ತು. ಆದ್ರೆ ಕೆಲ ದಿನದ ಹಿಂದಷ್ಟೇ ರಷ್ಯಾ ಸೇನೆ ಇಲ್ಲಿ ಉಕ್ರೇನ್ ನೌಕೆಯನ್ನ ಉಡಾಯಿಸಿತ್ತು. 2014ರ ಬಳಿಕ ಉಕ್ರೇನ್‌ಗೆ ಕಪ್ಪು ಸಮುದ್ರದ ಮೇಲಿನ ಹಿಡತವು ಭಾಗಶಃ ತಪ್ಪಿದೆ. 2022ರಲ್ಲಿ ರಷ್ಯಾ ಯುದ್ಧ ಘೋಷಣೆ ಮಾಡಿದ ಬಳಿಕ ಈ ತನಕ ದಿನದಿನಕ್ಕೂ ಉಕ್ರೇನ್ ನರಳುತ್ತಿದೆ. ಅಗತ್ಯ ಇರುವ ದಿನಬಳಕೆ ವಸ್ತು ತರಿಸಿಕೊಳ್ಳುವುದಕ್ಕು ಪರದಾಡುತ್ತಿದೆ ಉಕ್ರೇನ್. ಇದೇ ಸಂದರ್ಭದಲ್ಲಿ ಆಹಾರ ಧಾನ್ಯಗಳು ರಷ್ಯಾ ದಾಳಿಯಿಂದ ಮಣ್ಣುಪಾಲಾಗಿದೆ. ಇಷ್ಟು ಸಾಲದು ಎಂಬಂತೆ ಉಕ್ರೇನ್ ಮತ್ತೆ ಡ್ರೋನ್ ದಾಳಿ ನಡೆಸಿದ ಆರೋಪ ರಷ್ಯಾದ ಸೇನೆಯಿಂದ ಕೇಳಿಬಂದಿದೆ.

ಹೀಗೆ ಉಕ್ರೇನ್ ಮತ್ತು ರಷ್ಯಾ ಭಯಾನಕ ಯುದ್ಧ ಮುಂದುವರಿಯುತ್ತಲೇ ಇದೆ. ಜಗತ್ತಿನ ಹಲವು ಪ್ರಮುಖ ದೇಶಗಳು ಯುದ್ಧ ನಿಲ್ಲಿಸಲು ಪ್ರಯತ್ನ ಆರಂಭಿಸಿವೆ. ಆದರೆ ಇದೆಲ್ಲಾ ವರ್ಕೌಟ್ ಆಗುವಂತೆ ಕಾಣುತ್ತಿಲ್ಲ. ಯಾಕಂದ್ರೆ ಉಕ್ರೇನ್ ಮತ್ತು ರಷ್ಯಾ ಯುದ್ಧ ಕೇವಲ ಎರಡು ದೇಶಗಳ ನಡುವಿನ ಕಿತ್ತಾಟವಾಗಿ ಉಳಿದಿಲ್ಲ. ಇದಕ್ಕೆ ಕಾರಣ ಉಕ್ರೇನ್ ಸೇನೆ ಪರ ನ್ಯಾಟೋ ನಿಂತಿದ್ದರೆ, ರಷ್ಯಾ ಪರ ಚೀನಾ, ಉತ್ತರ ಕೊರಿಯಾ ಸೇರಿ ಅಮೆರಿಕದ ಶತ್ರು ಪಡೆ ನಿಂತಿದೆ. ಹೀಗೆ ಜಗತ್ತು ಇಬ್ಭಾಗವಾಗಿ ಹೋಗುವ ಭಯ ಶುರುವಾಗಿದೆ. ಮನಷ್ಯರಿಗೆ ಇದು ಅಪಾಯದ ಮುನ್ಸೂಚನೆ ನೀಡುತ್ತಿದ್ದು, ಯುದ್ಧ ನಿಲ್ಲಲೇಬೇಕು ಅನ್ನೋ ಒತ್ತಾಯ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+