ಉಕ್ರೇನ್‌ಗೆ ಶಾಕ್ ಮೇಲೆ ಶಾಕ್ ಕೊಡುತ್ತಿರುವ ರಷ್ಯಾ ಮಿಲಿಟರಿ!

ರಷ್ಯಾ ಸೇನೆ ಇದೀಗ ಉಕ್ರೇನ್ ದೇಶದ ಒಂದೊಂದೇ ಭಾಗವನ್ನು ತನ್ನ ಸ್ವಾದೀನಕ್ಕೆ ಪಡೆದು ಶತ್ರುಗಳಿಗೆ ಆಘಾತ ನೀಡುತ್ತಿದೆ. ಅದರಲ್ಲೂ ಕಳೆದ ಕೆಲವು ದಿನಗಳಲ್ಲಿ ಈ ಯುದ್ಧವು ಭಾರಿ ಘೋರ ತಿರುವು ಪಡೆಯುತ್ತಿದೆ. ಉಕ್ರೇನ್ ದೇಶದ ಬಹುತೇಕ ಪ್ರಮುಖ ಭಾಗಗಳನ್ನ ಈಗಾಗಲೇ ರಷ್ಯಾ ಸೇನೆ ತನ್ನ ವಶಕ್ಕೆ ಪಡೆದಿದ್ದು, ಕಳೆದ ಕೆಲವು ದಿನಗಳಿಂದ ರಷ್ಯಾ ಮಿಲಿಟರಿ ಹೀಗೆ ಮುಂದೆ ನುಗ್ಗುತ್ತಿರುವುದು ಉಕ್ರೇನ್ ಸೇನೆಯ ನಿದ್ದೆಗೆಡಿಸಿದೆ.

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ ಬರೋಬ್ಬರಿ ಎರಡು ಮುಕ್ಕಾಲು ವರ್ಷವೇ ಕಳೆದು ಹೋಗಿದೆ. ಈ ಎರಡು ಮುಕ್ಕಾಲು ವರ್ಷದಲ್ಲಿ, ಉಕ್ರೇನ್ ದೇಶದ ಪೂರ್ವ ಭಾಗ ರಷ್ಯಾದ ಭಾಗಶಃ ಹಿಡಿತಕ್ಕೆ ಸಿಕ್ಕಾಗಿದೆ. ಇದು ಉಕ್ರೇನ್ ಅಧ್ಯಕ್ಷ್ಯ ಝೆಲೆನ್ಸ್‌ಸ್ಕಿ ಮತ್ತು ಉಕ್ರೇನ್ ದೇಶದ ಬೆಂಬಲಕ್ಕೆ ನಿಂತಿರುವ ಅಮೆರಿಕದ ಬೇಸರಕ್ಕೆ ಕಾರಣವಾಗಿದೆ. ಇಂತಹ ಸಮಯದಲ್ಲೇ ಈಗ ರಷ್ಯಾ ಮತ್ತಷ್ಟು ಪ್ರದೇಶಗಳನ್ನ ಉಕ್ರೇನ್ ವಶದಿಂದ ಕಿತ್ತುಕೊಂಡಿದೆ. ಅದರಲ್ಲೂ ರಷ್ಯಾದ ಮಿಲಿಟರಿ ಉಕ್ರೇನ್ ರಾಜಧಾನಿ ಸುತ್ತಮುತ್ತಲ ಭಾಗದಲ್ಲಿ ಸಾಕಷ್ಟು ಹಿಡಿತ ಸಾಧಿಸುತ್ತಿದೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಿಚ್ಚು ಹೊತ್ತಿಸುವ ಮುನ್ಸೂಚನೆ ನೀಡಿದೆ.

Russia Acquired More Ukrainian Parts In Last Few Days

ಉಕ್ರೇನ್ ಕೈಯಲ್ಲಿ ಕಾಸು ಇಲ್ಲ!

ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್ ಸೇನೆ ಬಳಿ ಶಸ್ತ್ರಾಸ್ತ್ರಗಳು ಇಲ್ಲವಾಗುತ್ತಿವೆ. ಈಗಾಗಲೇ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಸಾಕಷ್ಟು ಸಹಾಯ ಮಾಡಿವೆ. ಆದರೆ ಇದೆಲ್ಲಾ ಖಾಲಿ ಖಾಲಿ ಆಗುತ್ತಿದೆ. ಹೀಗಾಗಿ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದೆ. ಉಕ್ರೇನ್ ಹೀಗೆಯೇ ಮುಂದುವರಿದರೆ ಇನ್ನೇನು ಕೆಲವೇ ದಿನಗಳಲ್ಲಿ ಉಕ್ರೇನ್‌ನ ರಾಜಧಾನಿ ಕೂಡ ರಷ್ಯಾ ಸೇನೆ ವಶಕ್ಕೆ ಸಿಲುಕುವ ಭಯ ಇದೀಗ ಉಕ್ರೇನ್ ನಾಯಕರಲ್ಲಿ ಆವರಿಸಿದೆ. ಹಾಗೇ ಉಕ್ರೇನ್ ಸೇನೆ ಈಗಾಗಲೇ ಸಾಕಷ್ಟು ಸೈನಿಕರನ್ನ ಕಳೆದುಕೊಂಡು ಪರದಾಡುತ್ತಿದೆ.

ಉಕ್ರೇನ್ ವಿರುದ್ಧ ಘೋರ ಬಾಂಬ್ ಬಳಕೆ?

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಈಗ ವೈರಲ್ ಆಗ್ತಿದ್ದು, ರಷ್ಯಾ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. 'ಥರ್ಮೋಬಾರಿಕ್' ಎಂದು ಕರೆಯಲ್ಪಡುವ, ರಷ್ಯಾದ ಒಡಿಎಬಿ-9000 (ODAB-9000) ಸೂಪರ್ ಬಾಂಬ್ ಒಂದನ್ನ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾದ ಮಿಲಿಟರಿ ಪ್ರಯೋಗ ಮಾಡಿದೆ ಎಂದು ಆರೋಪಿಸಲಾಗಿದೆ. ಆರೋಪ ಸಾಬೀತು ಮಾಡುವಂತೆ ಇದೀಗ, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಕೂಡ ವೈರಲ್ ಆಗುತ್ತಿದೆ. ಪಾಶ್ಚಿಮಾತ್ಯ ದೇಶಗಳು ಇದೇ ವಿಡಿಯೋ ಮೂಲಕ ರಷ್ಯಾದ ವಿರುದ್ಧ ಆಕ್ರೋಶ ಹೊರ ಹಾಕುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+