ಮೂರೂವರೆ ಕೋಟಿ ತೊಡಗಿಸಿದರೆ ಅಮೆರಿಕ ಗ್ರೀನ್ ಕಾರ್ಡ್?

Posted By:
Subscribe to Oneindia Kannada
ನವದೆಹಲಿ, ಫೆಬ್ರವರಿ 17: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಿಗಿ ನಿಲುವುಗಳಿಂದಾಗಿ ಅಮೆರಿಕದಲ್ಲಿ ಈಗಾಗಲೇ ನೆಲೆ ನಿಂತು ಗ್ರೀನ್ ಕಾರ್ಡ್ ಕನಸು ಕಾಣುತ್ತಿದ್ದ ಅನೇಕ ವಿದೇಶೀಯರಿಗೆ ನಡುಕ ಉಂಟಾಗಿತ್ತು. ಇವರಲ್ಲಿ ಲಕ್ಷಾಂತರ ಭಾರತೀಯರೂ ಸೇರಿದ್ದರು.

ಆದರೆ, ಗ್ರೀನ್ ಕಾರ್ಡ್ ಪಡೆಯುವ ಹಲವಾರು ಅವಕಾಶಗಳಿದ್ದು ಉದ್ಯಮಿಗಳು ಈಗಾಗಲೇ ಈ ದಾರಿಯಲ್ಲಿ ಅಮೆರಿಕದ ಗ್ರೀನ್ ಕಾರ್ಡ್ ಪಡೆಯಲು ಪ್ರಯತ್ನಿಸುತ್ತಿದ್ದಾರೆಂದು ಹೇಳಲಾಗಿದೆ.[ಅಮೆರಿಕದ ವಲಸೆ ನೀತಿ ಬದಲು; ಕುಶಲಮತಿಗಳಿಗೆ ಮಣೆ]

Rush to invest in EB-5, to get America green card

ಅಮೆರಿಕ ಸರ್ಕಾರದ ಇಬಿ-5 ಕಾರ್ಯಕ್ರಮದಲ್ಲಿ ಸುಮಾರು 3.4 ಕೋಟಿ ರು.ಗಳಷ್ಟು ಹೂಡಿಕೆ ಮಾಡಿದರೆ ಸಾಕು ಆ ದೇಶದ ಪೌರತ್ವದ ಹಕ್ಕುಗಳನ್ನು ಪಡೆಯುವ ದಾರಿ ಸುಗಮವಾಗಲಿದೆ ಎಂದು ಮೂಲಗಳು ಹೇಳಿವೆ.

ಹಾಗಾಗಿಯೇ, ಭಾರತೀಯ ಉದ್ಯಮಿಗಳು ಈಗ ಇಬಿ-5 ಕಾರ್ಯಕ್ರಮಗಳಲ್ಲಿ ಹೂಡಿಕೆ ಮಾಡಲು ದಾಂಗುಡಿ ಇಡುತ್ತಿದ್ದಾರೆಂದು ಹೇಳಲಾಗಿದೆ.

ಅಂದಹಾಗೆ, ಅಮೆರಿಕದ ಪೌರತ್ವವನ್ನು ಸುಲಭವಾಗಿ ಪಡೆಯುವ ಮತ್ತೊಂದು ದಾರಿಯಿದೆ. ಅದರ ಪ್ರಕಾರ, 1 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು (ಸುಮಾರು 6 ಕೋಟಿ, 70 ಲಕ್ಷ ರು.) ಹೂಡಿಕೆ ಮಾಡಿ ಅಮೆರಿಕದಲ್ಲೊಂದು ಸ್ಟಾರ್ಟ್ ಅಪ್ ಶುರು ಮಾಡಬೇಕು. ಆಗ, ಅಲ್ಲಿನ ಪೌರತ್ವ ಸಿಗುವ ದಾರಿ ಸುಗಮವಾಗುತ್ತದೆ.

ಆದರೆ ಇದು ತುಸು ಕಷ್ಟಕರ ಕೆಲಸವಾಗಿರುವುದರಿಂದ ಬಹುತೇಕ ಉದ್ಯಮಿಗಳು ಇಬಿ-5 ಕಾರ್ಯಕ್ರಮದಲ್ಲಿ ಹಣ ತೊಡಗಿಸುವ ಮೂಲಕ ಗ್ರೀನ್ ಕಾರ್ಡ್ ಪಡೆಯಲು ಹೆಚ್ಚು ಉತ್ಸಾಹ ತೋರುತ್ತಿದ್ದಾರೆಂದು ಕೆಲ ಮೂಲಗಳು ಹೇಳಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Many of the Indian Entraprounours showing their interest in one-time investment of $500,000 (Rs 3.4 crore) into a government-approved EB-5, to get green card easily.
Please Wait while comments are loading...