ಕರ್ಮಭೂಮಿಗೆ ನಿಷ್ಠರಾಗಿರಿ, ವಿವಿಧತೆಯಲ್ಲಿ ಏಕತೆಯೇ ಭಾರತದ DNA': ನ್ಯೂಯಾರ್ಕ್‌ನಲ್ಲಿ ಮೋಹನ್ ಭಾಗವತ್ ಸಂದೇಶ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಮೆರಿಕದ ನ್ಯೂಯಾರ್ಕ್ ನಗರದ ಐತಿಹಾಸಿಕ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆದ ಸಮಾವೇಶದಲ್ಲಿ ಭಾರತೀಯ ವಲಸಿಗರನ್ನ ಉದ್ದೇಶಿಸಿ ಮಹತ್ವದ ಸಂದೇಶ ರವಾನಿಸಿದ್ದಾರೆ.

'ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಅಂಡ್ ಡೈಲಾಗ್ʼ ವೇದಿಕೆ ಆಯೋಜಿಸಿದ್ದ 'ಯೂನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್ಸ್' ಕಾರ್ಯಕ್ರಮದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಭಾರತೀಯ ಮೂಲದ ಅಮೆರಿಕನ್ನರು ಭಾಗವಹಿಸಿದ್ದರು. ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ಅಮೆರಿಕ, ಕೆನಡಾ ಮತ್ತು ಬ್ರಿಟನ್ ಪ್ರವಾಸ ಕೈಗೊಂಡಿರುವ ಅವರು, ಮಾನವೀಯತೆ, ಧರ್ಮ, ಮತ್ತು ವಲಸಿಗರ ಕರ್ತವ್ಯದ ಬಗ್ಗೆ ಮಾತನಾಡಿದರು.

RSS Chief Mohan Bhagwat Addresses Indian Diaspora in New York Calls for Loyalty to Karma Bhumi

ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಕಿವಿಮಾತು ಹೇಳಿದ ಮೋಹನ್ ಭಾಗವತ್, ಪ್ರತಿಯೊಬ್ಬರೂ ತಮ್ಮ ಕರ್ಮಭೂಮಿ ಅಂದರೆ ನೀವು ಕೆಲಸ ಮಾಡುವ ಸ್ಥಳಕ್ಕೆ ಸಂಪೂರ್ಣ ನಿಷ್ಠರಾಗಿರಬೇಕು ಎಂದು ಕರೆ ನೀಡಿದರು. "ನೀವು ಅಮೆರಿಕದಲ್ಲಿ ವಾಸಿಸುತ್ತಿದ್ದೀರಿ, ಅಲ್ಲಿಯೇ ಸಂಪಾದಿಸುತ್ತಿದ್ದೀರಿ. ಹಾಗಾಗಿ ನೀವು ಅಮೆರಿಕನ್ನರಾಗಿದ್ದು, ಆ ದೇಶಕ್ಕೆ ಪ್ರಾಮಾಣಿಕರಾಗಿರಬೇಕು. ನಿಮ್ಮ ಕರ್ಮಭೂಮಿಗೆ ನೀವು ನಿಷ್ಠರಾಗಿರುವುದು ನಿಮ್ಮ ಮೊದಲ ಕರ್ತವ್ಯ" ಎಂದರು.

ಇದರ ಜೊತೆಗೆ, ಭಾರತವು ನಿಮ್ಮ ಜನ್ಮಭೂಮಿ ಆಗಿರುವುದರಿಂದ, ಕರ್ಮಭೂಮಿಯ ಜವಾಬ್ದಾರಿಗಳನ್ನ ಪೂರೈಸಿದ ಬಳಿಕ ಜನ್ಮಭೂಮಿಗೆ ಕೊಡುಗೆ ನೀಡುವುದನ್ನು ನಿರೀಕ್ಷಿಸಲಾಗುತ್ತದೆ. ಅದು ಕಡ್ಡಾಯವಲ್ಲ, ಆದರೆ ನಿಮ್ಮ ಇಚ್ಛೆಯಿದ್ದರೆ ಖಂಡಿತವಾಗಿ ಮಾಡಬಹುದು ಎಂದು ತಿಳಿಸಿದರು.

ವಿವಿಧತೆಯಲ್ಲಿ ಏಕತೆಯೇ ಭಾರತದ DNA

ಕಾರ್ಯಕ್ರಮದಲ್ಲಿ ವಿಶ್ವ ಏಕತೆಯ ಕುರಿತು ಮಾತನಾಡಿದ ಅವರು, ಅಮೆರಿಕವನ್ನು ಬಹುವಚನವಾದ (Pluralism) ಎಂಬ ಪದದಿಂದ ಗುರುತಿಸಿದರೆ, ಭಾರತವನ್ನು ವಿವಿಧತೆಯಲ್ಲಿ ಏಕತೆ ಎಂದು ಕರೆಯಲಾಗುತ್ತದೆ ಎಂದರು. "ವಿವಿಧತೆಯಲ್ಲಿ ಏಕತೆಯೆಂಬುದು ಭಾರತದ ಡಿಎನ್‌ಎಯಲ್ಲೇ ಅಡಗಿದೆ. ಮನುಷ್ಯರ ನಡುವೆ ಭಿನ್ನಾಭಿಪ್ರಾಯಗಳು, ಜೀವನಶೈಲಿಯ ವ್ಯತ್ಯಾಸಗಳು ಸಹಜ. ಆದರೆ ನಮ್ಮೆಲ್ಲರನ್ನೂ ಬೆಸೆಯುವ ಒಂದು ಆಂತರಿಕ ಏಕತೆಯಿದೆ. ಆ ಏಕತೆಯನ್ನು ನಾವು ಆಚರಿಸಬೇಕು" ಎಂದು ಅವರು ಹೇಳಿದರು.

ಇದೇ ವೇಳೆ ಧರ್ಮದ ಬಗ್ಗೆ ಮಾತನಾಡಿದ ಅವರು, "ಧರ್ಮ ಎಂದರೆ ಕೇವಲ ಪೂಜೆ ಅಥವಾ ಆರಾಧನೆಯಲ್ಲ; ಅದು ಇಡೀ ಬ್ರಹ್ಮಾಂಡವನ್ನು ಹಿಡಿದಿಟ್ಟುಕೊಳ್ಳುವ, ಮನುಷ್ಯನ ಜೀವನವನ್ನು ಸಮತೋಲನದಲ್ಲಿಡುವ ಒಂದು ನಿಯಮ" ಎಂದು ವಿವರಿಸಿದರು.

"ನಾವು ಎಷ್ಟು ಸಂಪಾದಿಸುತ್ತೇವೆ ಎನ್ನುವುದಕ್ಕಿಂತ, ಎಷ್ಟು ಹಂಚುತ್ತೇವೆ ಎಂಬುದು ಮುಖ್ಯ. ಭೌತಿಕ ಸಂಪತ್ತು ಎಂದಿಗೂ ಶಾಶ್ವತ ನೆಮ್ಮದಿಯನ್ನು ನೀಡಲಾರದು" ಎಂದು ಭಾಗವತ್‌ ಕಿವಿಮಾತು ಹೇಳಿದರು. ಹಾಗೆಯೇ "ಒಳ್ಳೆಯದು ಮತ್ತು ಕೆಟ್ಟದ್ದನ್ನ ವಿವೇಚಿಸುವ ಶಕ್ತಿ ಮನುಷ್ಯನಿಗೆ ಮಾತ್ರ ಇದೆ. ನಾವು ತಪ್ಪು ದಾರಿಯಲ್ಲಿ ಯೋಚಿಸಿದರೆ, ಪ್ರಾಣಿಗಳ ಮಟ್ಟಕ್ಕೆ ಇಳಿಯುತ್ತೇವೆ" ಎಂದು ಎಚ್ಚರಿಸಿದರು. 'ಹಸಿದ ಮನುಷ್ಯನ' ಉದಾಹರಣೆ ನೀಡುವ ಮೂಲಕ, ಮಾನವೀಯತೆ ಮತ್ತು ಸಹಾನುಭೂತಿಯ ಪ್ರಾಮುಖ್ಯತೆಯನ್ನ ಸಾರಿದರು.

ವಿರೋಧ ಮತ್ತು ಪ್ರತಿಭಟನೆಗಳ ನಡುವೆಯೂ ಯಶಸ್ವಿ ಕಾರ್ಯಕ್ರಮ

ಈ ಬೃಹತ್ ಯೂನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್ಸ್ ಕಾರ್ಯಕ್ರಮವು ವಿವಾದಗಳಿಂದ ಹೊರತಾಗಿರಲಿಲ್ಲ. ಕಾರ್ಯಕ್ರಮಕ್ಕೂ ಮುನ್ನ ನ್ಯೂಯಾರ್ಕ್ ಸಿಟಿ ಮೇಯರ್ ಜೊಹ್ರಾನ್ ಮಮದಾನಿ ಅವರು ಆರ್‌ಎಸ್‌ಎಸ್ ಸಿದ್ಧಾಂತವನ್ನ ಹೊರಗಿಡುವ ದೃಷ್ಟಿಕೋನ ಹೊಂದಿದೆ ಎಂದು ಟೀಕಿಸಿದ್ದರು. ಅಲ್ಲದೆ, 61ಕ್ಕೂ ಹೆಚ್ಚು ಸಂಘಟನೆಗಳು ಕಾರ್ಯಕ್ರಮವನ್ನ ವಿರೋಧಿಸಿ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಹೊರಗೆ ಪ್ರತಿಭಟನೆ ನಡೆಸಲು ಮುಂದಾಗಿದ್ದವು.

ಹಿಂದೂ ಅಮೆರಿಕನ್ ಫೌಂಡೇಶನ್ ಕೂಡ ಈ ಬಗ್ಗೆ ಮುನ್ನೆಚ್ಚರಿಕೆ ನೀಡಿ, ಶಾಂತಿ ಕಾಪಾಡುವಂತೆ ಹಾಗೂ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿತ್ತು. ಇಷ್ಟೆಲ್ಲಾ ವಿರೋಧಗಳ ನಡುವೆಯೂ, ಮೋಹನ್ ಭಾಗವತ್ ಅವರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು ಮತ್ತು ವಿಶ್ವಾದ್ಯಂತದ ಭಾರತೀಯರು ಒಗ್ಗಟ್ಟಿನ ಸಂದೇಶವನ್ನು ಸಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+