
Rishi Sunak Biography: ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಈ ರಿಷಿ ಸುನಕ್ ಯಾರು?
ನವದೆಹಲಿ, ಅಕ್ಟೋಬರ್, 24: ಬ್ರಿಟನ್ನ ಪ್ರಧಾನಿ ಹುದ್ದೆಗೆ ಭಾರತೀಯ ಮೂಲದ ರಿಷಿ ಸುನಕ್ ಅವರು ಆಯ್ಕೆಯಾಗಿದ್ದಾರೆ. ಇದೇ ಮೊದಲ ಭಾರಿಗೆ ಯುಕೆಯ ಉನ್ನತ ಹುದ್ದೆಯನ್ನು ಭಾರತೀಯ ಮೂಲದ ವ್ಯಕ್ತಿ ಒಬ್ಬರು ಅಂಕರಿಸುತ್ತಿದ್ದಾರೆ.
ಯುಕೆನಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಾರ್ಟಿಯು ಅನೇಕ ಆರ್ಥಿಕ ಸವಾಲುಗಳ ಸಂದರ್ಭದಲ್ಲಿ ಹಿಂದೆ ಇದ್ದ ಇಬ್ಬರು ನಾಯಕರ ಅವ್ಯವಸ್ಥೆಯ ಕಾರಣದಿಂದ ತೆರವಾಗಿದ್ದ ಸ್ಥಾನಕ್ಕೆ ರಿಷಿ ಸುನಕ್ ಮೂರನೇ ಪ್ರಧಾನಿಯಾಗಿ ಆಯ್ಕೆಗೊಂಡಿದ್ದಾರೆ.
Breaking: ರಿಷಿ ಸುನಕ್ ಯುಕೆ ಹೊಸ ಪ್ರಧಾನಿ
ಭಾರತದ ಬೃಹತ್ ಕಂಪನಿಗಳಲ್ಲಿ ಅಗ್ರಸ್ಥಾನದಲ್ಲಿರುವ ಇನ್ಫೋಸಿಸ್ ಸಂಸ್ಥೆಯ ನಾರಾಯಣಮೂರ್ತಿ ಅವರ ಅಳಿಯೂ ಆಗಿರುವ ಬಿಟ್ರನ್ ನೂತನ ಪ್ರಧಾನಿ ರಿಷಿ ಸುನಕ್ ಯಾರು, ಅವರ ಅನುಭವ ಎಂಥದ್ದು ಎಂಬುದರ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ
ಬ್ರಿಟನ್ ನೂತನ ಪ್ರಧಾನಿ 42ವರ್ಷದ ರಿಷಿ ಸುನಕ್ ಅವರ ಪೋಷಕರು ಭಾರತದ ಮೂಲದವರು. ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ 1960ರಲ್ಲಿ ವಲಸೆ ಹೋದರು. ರಿಷಿ ಸುನಕ್ ಅವರು ವಿಂಚೆಸ್ಟರ್ ಕಾಲೇಜು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ವಿದ್ಯಾಭ್ಯಾಸ ಮುಗಿಸಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿ ನಂತರ, ಇನ್‌ವೆಸ್ಟ್ ಬ್ಯಾಂಕ್ ಕಂಪನಿಯೊಂದರಲ್ಲಿ ಅವರು ಅನಾಲಿಸ್ಟ್ ಆಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದಾರೆ. ಹೀಗೆ ವಿವಿಧ ಕಂಪನಿಗಳಲ್ಲಿ ಅವರು ಕೆಲಸ ಮಾಡಿದ್ದಾರೆ.
ರಿಚ್ಮಂಡ್ ಕ್ಷೇತ್ರದಿಂದ 2015ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಚುನಾಯಿತರಾದರು. ನಂತರ 2017 ಹಾಗೂ 2019ರಲ್ಲಿ ಮತ್ತೆ ಸಂಸ್ಥೆದಾರಿ ಮೂರು ಭಾರಿ ಆಯ್ಕೆಯಾಗಿದ್ದರು. ಸಂಸತ್ತಿನಲ್ಲಿ ಭಗವದ್ಗೀತೆ ಮೇಲೆ ಯಾರ್ಕ್‌ಷೈರ್‌ನಿಂದ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿ ಬ್ರಿಟನ್‌ನ ಮೊದಲ ಸಂಸದರ ಗಾದಿಗೆ ಏರಿದ ಮೊದಲ ಭಾರತೀಯರು ಈ ರಿಷಿ ಸುನಕ್ ಅವರು.
ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಲು 100ಕ್ಕೂ ಹೆಚ್ಚು ಸಂಸದರ ಬೆಂಬಲ; ಹೊಸ ಪ್ರಧಾನಿ ಯಾರು?

ಸಚಿವರಾಗಿ ಅನುಭವ ಹೊಂದಿರುವ ರಿಷಿ ಸುನಕ್
ಜುಲೈ 2019 ರಲ್ಲಿ ಸುನಕ್ ಅವರನ್ನು ಸರ್ಕಾರದ ಖಜಾನೆಗೆ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಜನವರಿ 2018 ರಲ್ಲಿ ಸ್ಥಳೀಯ ಸರ್ಕಾರದ ಸಚಿವರಾಗಿಯು ಅವರು ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಈ ಹಿಂದೆ ಬ್ರೀಟನ್ ದೇಶದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ರಿಷಿ ಸುನಕ್ ಮತ್ತವರ ಪತ್ನಿ ಅಕ್ಷತಾಮೂರ್ತಿ 222ನೇ ಅಗ್ರಸ್ಥಾನ ಅಲಂಕರಿಸಿದ್ದರು.
ಬ್ರಿಟನ್‌ನಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಾರ್ಟಿಯ ನಾಯಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವರು ಮುಂಚೂಣೆಯಲ್ಲಿದ್ದರು. ಬ್ರಿಟನ್ ಪ್ರಧಾನಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಏಳು ತಿಂಗಳಲ್ಲಿ ರಿಷಿ ಸುನಕ್ ಅವರು ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ಚುನಾವಣೆ ನಡೆಯುತ್ತಿರುವಾಗಲೇ ರಿಷಿ ಸುನಕ್ ಅವರೇ ದೇಶದ ಪ್ರಧಾನಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಇನ್ಫೋಸಿಸ್ ನಾರಾಯಣ್ ಮೂರ್ತಿ ಅವರ ಅಳಿಯ ಸುನಕ್
ರಿಷಿ ಸುನಕ್ ಅವರು ಐಟಿ ಕಂಪನಿಯಾದ ಭಾರತದ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವರಿಸಿದ್ದಾರೆ. ಅವರು ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಾರೆ. ಸುನಕ್ ಅವರ ತಂದೆ ಯಶವೀರ್ ಸುನಕ್ ಅವರು ರಾಷ್ಟ್ರೀಯ ಆರೋಗ್ಯ ವಿಭಾಗದಲ್ಲಿ ವೈದ್ಯರಾಗಿದ್ದಾರೆ. ತಂದೆ ಹಾಗೂ ತಾಯಿ ಉಷಾ ಸುನಕ್ ಅವರ ಸೇವೆ ನೋಡಿಕೊಂಡು ನಾನು ಬೆಳೆದಿದ್ದೇನೆ ಎಂದು ರಿಷಿ ಸುನಕ್ ಅವರು ತಮ್ಮ ವೆಬ್‌ಸೈಟ್ ಒಂದರಲ್ಲಿ ಬರೆದುಕೊಂಡಿದ್ದಾರೆ.

ವಿಶ್ವಮಟ್ಟದ ವಿದ್ಯಾಸಂಸ್ಥೆಗಳಲ್ಲಿ ಕಲಿತೆ
ಈ ದಂಪತಿಗಳ ಪುತ್ರನಾಗಿ ಅಂತಾರಾಷ್ಟ್ರೀಯ ಮಟ್ಟದ ವಿದ್ಯಾಸಂಸ್ಥೆಗಳಲ್ಲಿ ಕಲಿಯಲು ಅದೃಷ್ಟ ಪಡೆದಿದ್ದಾನೆ. ನಾನು ಕ್ಯಾಲಿಫೋರ್ನಿಯಾ ಪತ್ನಿಯೊಂದಿಗೆ ವಾಸವಾಗಿದ್ದೆ. ನನಗೆ ಕೃಷ್ಣಾ ಮತ್ತು ಅನುಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂದು ಹೇಳಿದ್ದಾರೆ. ಅವರು ಬಿಡುವಿನ ವೇಳೆಯಲ್ಲಿ ದೈಹಿಕ ವ್ಯಾಯಾಮದ ಮೂಲಕ ಫಿಟ್ ಆಗಿರುವುದಕ್ಕೆ ಆದ್ಯತೆ ನೀಡುತ್ತಾರೆ. ಕ್ರಿಕೆಟ್, ಫುಟ್‌ಬಾಲ್ ಅವರ ಇಷ್ಟದ ಕ್ರೀಡೆಗಳಾಗಿವೆ.