ಅಫ್ಘಾನಿಸ್ತಾನದ ಪಂಜ್‌ಶೀರ್‌ನಲ್ಲಿ 700 ತಾಲಿಬಾನಿಗಳ ಹತ್ಯೆ?
ಕಾಬೂಲ್, ಸೆಪ್ಟೆಂಬರ್ 06: ಅಫ್ಘಾನಿಸ್ತಾನದ ಪಂಜ್‌ಶೀರ್‌ನಲ್ಲಿ 700ಕ್ಕೂ ಅಧಿಕ ತಾಲಿಬಾನಿಗಳ ಹತ್ಯೆ ನಡೆದಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಅಫ್ಘಾನಿಸ್ತಾನದ ಎಲ್ಲಾ ಪ್ರಾಂತ್ಯಗಳನ್ನೂ ತಾನು ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ಹೇಳಿದ್ದರೂ, ಪಂಜ್‌ಶೀರ್‌ನಲ್ಲಿ ಇನ್ನೂ ಉಗ್ರರು ಹಾಗೂ ಸ್ಥಳೀಯರ ಪ್ರತಿರೋಧ ಪಡೆಯ ನಡುವೆ ಭಾರಿ ಕಾಳಗ ನಡೆಯುತ್ತಿದೆ.
ಸಂಘರ್ಷದಲ್ಲಿ ತಾನು ಗೆದ್ದಿರುವುದಾಗಿ ತಾಲಿಬಾನ್ ಹೇಳಿಕೊಂಡಿದ್ದರೆ, ತಾವು 700ಕ್ಕೂ ಹೆಚ್ಚು ಉಗ್ರರನ್ನು ಕೊಂದಿರುವುದಾಗಿ ಸ್ಥಳೀಯ ಹೋರಾಟಗಾರರ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಹೇಳಿಕೊಂಡಿದೆ.
ತಾಲಿಬಾನ್ ಉಗ್ರರು ತಾವು ಪಂಜ್‌ಶೀರ್ ರಾಜಧಾನಿ ಬಜರಾಕ್‌ಗೆ ಪ್ರವೇಶಿಸಿದ್ದು, ಗವರ್ನರ್ ಕಚೇರಿ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆದರೆ ಪಂಜ್‌ಶೀರ್ ಹೋರಾಟಗಾರರು, ತಾವು ತಾಲಿಬಾನ್ ಪಡೆಗಳನ್ನು ಗಡಿಯಿಂದ ಹೊರಹಾಕಿದ್ದೇವೆ, 700 ಉಗ್ರರನ್ನು ಕೊಂದಿದ್ದೇವೆ. 600ಕ್ಕೂ ಅಧಿಕ ಮಂದಿಯನ್ನು ಸೆರೆಯಲ್ಲಿರಿಸಿದ್ದೇವೆ ಎಂದು ಹೇಳಿದ್ದಾರೆ.

ಸಂಧಾನದ ಆಫರ್
ಪಂಜ್‌ಶೀರ್ ಹಾಗೂ ಅಂದರಾಬ್‌ನಿಂದ ತಾಲಿಬಾನ್ ಹಿಂತೆಗೆದರೆ ಯುದ್ಧ ನಿಲ್ಲಿಸಿ ಶಾಂತಿ ಸಂಧಾನಕ್ಕೆ ಸಿದ್ಧ ಇರುವುದಾಗಿ ಪಂಜ್‌ಶೀರ್‌ನ ತಾಲಿಬಾನ್ ವಿರೋಧಿ ಪಡೆ ಮುಖಂಡ ಅಹಮದ್ ಮಸೌದ್ ಹೇಳಿದ್ದಾರೆ.

ಪಾಕ್‌ನಿಂದ ಉಗ್ರರ ಏರ್‌ಡ್ರಾಪ್
ತಾಲಿಬಾನ್ ಉಗ್ರರಿಗೆ ಅಫ್ಘಾನಿಸ್ತಾನ ವಶಡಿಸಿಕೊಳ್ಳಲು ನೆರವಾದ ಅಫ್ಘಾನಿಸ್ತಾನ, ಇದೀಗ ಪಂಜ್‌ಶೀರ್ ವಶಪಡಿಸಿಕೊಳ್ಳಲು ನೆರವಾಗುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.
ತಾಲಿಬಾನ್ ಕಣಿವೆ ಪ್ರದೇಶವಾಗಿದ್ದು, ಒಳಗೆ ಪ್ರವೇಶಿಸುವುದು ಕಷ್ಟವಾಗಿದೆ. ಹೀಗಾಗಿ ತಾಲಿಬಾನಿ ಯೋಧರನ್ನು ಪಂಜ್‌ಶೀರ್ ಕಣಿವೆಯೊಳಗೆ ಏರ್‌ಡ್ರಾಪ್ ಮಾಡುವ ಮೂಲಕ ಅವರಿಗೆ ನೆರವಾಗುತ್ತಿದೆ. ಅದಲ್ಲದೆ ಇತರೆ ಕೆಲ ತಾಂತ್ರಿಕ ಮತ್ತು ಸೇನಾ ನೆರವನ್ನೂ ಅದು ಒದಗಿಸುತ್ತಿದೆ ಎಂದು ಪಂಜ್‌ಶೀರ್ ರೆಸಿಸ್ಟೆನ್ಸ್ ಫೋರ್ಸ್‌ನ ಮೂಲಗಳು ತಿಳಿಸಿವೆ.
ಪಂಜ್‌ಶೀರ್ ವಶಪಡಿಸಿಕೊಳ್ಳಲು ಕಳೆದ 2 ವಾರಗಳಿಂದ ತಾಲಿಬಾನಿ ಉಗ್ರರು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಆದರೆ ರೆಸಿಸ್ಟೆನ್ಸ್ ಪೋರ್ಸ್ ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಿರುವ ಕಾರಣ ತಾಲಿಬಾನಿಗಳ ಯತ್ನ ಯಶಸ್ವಿಯಾಗಿಲ್ಲ.

ತಲೆಗೆ ಗುಂಡು ಹಾರಿಸಿ
ತಾಲಿಬಾನಿಗಳು ಕಾಬೂಲನ್ನು ಸುತ್ತುವರಿದಾಗವರೊಡನೆ ಹೋರಾಟ ನಡೆಸುವುದಕ್ಕೆ ಬದಲಾಗಿ ಅಧಿಕಾರಿಗಳು ಭೂಗತರಾದ ಬಗ್ಗೆ ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರು ಬಹಿರಂಗ ಪಡಿಸಿದ್ದಾರೆ.
ಪಂಜ್ ಶೀರ್ ಕಣಿವೆಯಲ್ಲಿ ತಾಲಿಬಾನಿಗಳ ವಿರುದ್ಧ ಹುಟ್ಟಿಕೊಂಡಿರುವ ಎನ್ ಆರ್ ಎಫ್(ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್) ಪಡೆಯ ನೇತೃತ್ವವನ್ನು ಸಲೇಹ್ ಅವರು ವಹಿಸಿಕೊಂಡಿದ್ದಾರೆ.
ಅಫ್ಘಾನಿಸ್ತಾನದ ನಾಯಕರು ತಾಲಿಬಾನಿಗಳ ವಿರುದ್ಧ ಹೋರಾಡದೆ ದೇಶವನ್ನು ಅವರ ಕೈಗೊಪ್ಪಿಸಿ ಪರಾರಿಯಾಗಿದ್ದ ವಿರುದ್ಧ ಸಾಲೇಹ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ದೇಶ ತೊರೆದಾಗ ತಾವು ದೇಶದ ರಕ್ಷಣೆಗಾಗಿ ಇನ್ನೂ ಜೀವಂತ ಇರುವುದಾಗಿ ಹೇಳಿ ಸಾಲೇಹ್ ದುದ್ದಿಯಾಗಿದ್ದರು.

ಪಾಕಿಸ್ತಾನದಲ್ಲಿ ಬಾಂಬ್ ದಾಳಿ
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ಸಂಭವಿಸಿದ್ದು, ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.ಲ್ಲದೆ 20 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ವೆಟ್ಟಾದಲ್ಲಿ ನೆಲೆಗೊಂಡಿದ್ದ ಪಾಕ್ ಭದ್ರತಾಪಡೆಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ದಾಳಿಯ ಹೊಣೆಯನ್ನು ತೆಹ್ರೀಕ್ ಇ ತಾಲಿಬಾನ್ ಉಗ್ರಸಂಘಟನೆ ಹೊತ್ತುಕೊಂಡಿದೆ.
ದುರ್ಘಟನೆಯಲ್ಲಿ ಸತ್ತಿರುವ ಮೂವರು ಭದ್ರತಾಪಡೆ ಸಿಬ್ಬಂದಿ ಎಂದು ತಿಳಿದುಬಂದಿದೆ. ಅಲ್ಲದೆ ಗಾಯಗೊಂಡ ಎಲ್ಲಾ 20 ಮಂದಿಯಲ್ಲಿ 18 ಮಂದಿ ಪಾಕ್ ಸೈನಿಕರು ಎಂದು ತಿಳಿದುಬಂದಿದೆ. ಉಳಿದಿಬ್ಬರು ನಾಗರಿಕರಾಗಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಸರ್ಕಾರ ಬದಲಾದ ಮಾತ್ರಕ್ಕೆ ಪಾಕ್ ಸರ್ಕಾರಕ್ಕೆ ಮುಖಭಂಗ ಮಾಡುವ ತನ್ನ ಪ್ರಯತ್ನ ನಿಲ್ಲುವುದಿಲ್ಲ ಎಂದು ಉಗ್ರಸಂಘಟನೆ ಸೂಚನೆ ನೀಡಿದೆ.












Click it and Unblock the Notifications