Rainbow Viral Video: ಕಡಲಲೆ ನಡುವೆ ತೇಲಿ ಬಂದ ಕಾಮನಬಿಲ್ಲು : ಅದ್ಭುತ ನೋಟಕ್ಕೆ ಮನ ಸೋಲದವರುಂಟೇ?
Rainbow Viral Video: ಆಕಾಶದಲ್ಲಿ ಮೂಡುವ ಕಾಮನಬಿಲ್ಲು ನೋಡುವುದಕ್ಕೆ ಬಹಳ ಚಂದ. ಈ ಸೌಂದರ್ಯ ಎಂಥವರನ್ನು ಕೂಡಾ ಮೋಡಿ ಮಾಡಿ ಬಿಡುತ್ತದೆ. ಹಾಗೆಯೇ ಕಡಲ ಅಲೆಗಳು ಕೂಡಾ ನೋಡುತ್ತಾ ಕುಳಿತರೆ ಸಮಯ ಕಳೆಯುವುದೇ ತಿಳಿಯಲ್ಲ. ಸಮುದ್ರದಲ್ಲಿ ಏಳುವ ಸಣ್ಣ ದೊಡ್ಡ ಅಲೆಗಳು ಒಂದು ರೀತಿಯ ಮಜಾ ಕೊಡುತ್ತವೆ. ಸುಮ್ಮನೆ ನೋಡುತ್ತಾ ಕುಳಿತರೆ ಅಲ್ಲಿಂದ ಏಳಲು ಮನಸ್ಸು ಬರುವುದೂ ಇಲ್ಲ. ಯಾಕೆಂದರೆ ಆ ಅಲೆಗಳಿಗೆ ನಮ್ಮ ಮನಸ್ಸನ್ನ ಶಾಂತವಾಗಿಸುವ ಶಕ್ತಿಯಿದೆ. ಹಾಗಾಗಿ ಅಲೆಗಳ ಮಧ್ಯೆ ಮನಸ್ಸು ಕಳೆದ ಹೋಗುತ್ತದೆ.

ಸಮುದ್ರದ Rainbow Viral Video:
ಆದರೆ ಆಕಾಶದಲ್ಲಿ ಕಾಣಿಸಬೇಕಾದ ಕಾಮನಬಿಲ್ಲು ಕಡಲ ಅಲೆಗಳಲ್ಲಿ ಕಂಡರೆ ಹೇಗಿರಬಹುದು? ಕಡಲ ಅಲೆಗಳನ್ನು ನೋಡುವುದೇ ಒಂದು ರೀತಿಯ ಆನಂದ. ಅದರ ಜೊತೆಗೆ ಅಲೆಗಲ್ಲಿ ಕಾಮನಬಿಲ್ಲು ಕಂಡರಂತೂ ಅದ್ಬುತ. ಆದರೆ ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಬಹುದು. ಕಡಲ ಅಲೆಗಳಲ್ಲಿ ತೇಲಿ ಬರುವ ಕಾಮನಬಿಲ್ಲಿನ ವಿಡಿಯೋ ಇದೀಗ ವೈರಲ್ (viral) ಆಗುತ್ತಿದೆ. ಈ ವಿಡಿಯೋವನ್ನು ಸಾವಿರಾರು ಜನ ನೋಡಿದ್ದಾರೆ, ಆಶ್ಚರ್ಯಪಟ್ಟಿದ್ದಾರೆ.
ಸಮುದ್ರದ ಅಲೆಗಳ ನಡುವೆ ಕಾಮನಬಿಲ್ಲು :
ವೈರಲ್ ಆಗಿರುವ ವಿಡಿಯೋದಲ್ಲಿ, ಒಂದರ ಹಿಂದೆ ಒಂದರಂತೆ ಎದ್ದು ಬರುವ ಅಲೆಗಳನ್ನು ನೋಡಬಹುದು. ಈ ಅಲೆಗಳು ಒಂದೊಂದಾಗಿಯೇ ಬಂದು ದಡಕ್ಕೆ ಬಡಿಯುತ್ತಿದೆ. ಅಲೆಗಳ ಘರ್ಷಣೆ ನೀರಿನ ಹನಿ ಗಾಳಿಯಲ್ಲಿ ಹರಡುವುದಕ್ಕೆ ಕಾರಣವಾಗುತ್ತದೆ. ಈ ಸಮಯದಲ್ಲಿ, ಸೂರ್ಯನ ಬೆಳಕು ನೀರಿನ ( water) ಸಣ್ಣ ಹನಿಗಳ ಮೇಲೆ ಬೀಳುತ್ತದೆ. ಆಗ ಕಾಮನಬಿಲ್ಲಿನಂತಹ ಸುಂದರ ದೃಶ್ಯ ಹೊರ ಹೊಮ್ಮುತ್ತದೆ. ಒಂದು ಕಡೆ ಸಮುದ್ರದ ಅಲೆಗಳ ಶಕ್ತಿ ಕಂಡರೆ, ಮತ್ತೊಂದು ಕಡೆ ಅವುಗಳ ಮಧ್ಯೆಯಿಂದ ಹೊರ ಬರುವ ಈ ಏಳು ಬಣ್ಣ.
ಅಲೆಗಳ ನಡುವೆ ಕಾಮನಬಿಲ್ಲು ಹೇಗೆ ರೂಪುಗೊಳ್ಳುತ್ತದೆ?:
ಆಕಾಶದಲ್ಲಿ ಕಾಮನಬಿಲ್ಲು ಕಾಣಿಸುವುದು ಸರಿ. ನೀರಿನ ಅಲೆಗಳಲ್ಲಿ ಅದು ಹೇಗೆ ಕಾಮನ ಬಿಲ್ಲು ಮೂಡುತ್ತದೆ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲೂ ಏಳಬಹುದು.
ಸಮುದ್ರದ ಅಲೆಗಳ ಮಧ್ಯೆ ಈ ಕಾಮನಬಿಲ್ಲಿನ ಬಣ್ಣ ಕಾಣಿಸಿಕೊಳ್ಳುವುದಕ್ಕೆ ಒಂದು ಕಾರಣ ಇದೆ. ಗಾಳಿಯಲ್ಲಿರುವ ಸಣ್ಣ ನೀರಿನ ಹನಿಗಳ ಮೂಲಕ ಸೂರ್ಯನ ಬೆಳಕು ಹಾದುಹೋದಾಗ, ಬೆಳಕು ತಿರುಗುತ್ತದೆ. ಆಗ ಬೇರೆ ಬೇರೆ ಬಣ್ಣಗಳಾಗಿ ವಿಭಜನೆಗೊಳ್ಳುತ್ತದೆ. ಈ ಪ್ರಕ್ರಿಯೆಯ ಮೂಲಕವೇ ಕಾಮನಬಿಲ್ಲು ರೂಪುಗೊಳ್ಳುತ್ತದೆ. ಸಾಮಾನ್ಯವಾಗಿ ಸಮುದ್ರದ ಅಲೆ ಬಂಡೆ ಅಥವಾ ತೀರಕ್ಕೆ ಅಪ್ಪಳಿಸಿದಾಗ ನೀರಿನ ಬಹಳಷ್ಟು ಸಣ್ಣ ಹನಿಗಳು ಗಾಳಿಯಲ್ಲಿ ಚದುರಿಹೋಗುತ್ತವೆ. ಆ ಸಮಯದಲ್ಲಿ ಸೂರ್ಯನ ಬೆಳಕು ಸರಿಯಾದ ದಿಕ್ಕಿನಿಂದ ಬೀಳುತ್ತಿದ್ದರೆ, ಈ ಹನಿಗಳಲ್ಲಿ ಕಾಮನಬಿಲ್ಲು ಕಾಣಿಸಿಕೊಳ್ಳಬಹುದು. ಆದರೆ ಈ ಕಾಮನಬಿಲ್ಲು ಕಾಣಿಸಬೇಕಾದರೆ ಬೆಳಕು ಮತ್ತು ನೀರಿನ ಹನಿಗಳ ಸರಿಯಾದ ಸಮನ್ ಇರಬೇಕು.
ಪ್ರಕೃತಿಯ ಸುಂದರ ರೂಪಕಕೆ ಮರುಳಾದ ಜನ :
ಈ ವಿಡಿಯೋವನ್ನು ಸೋಶೀಯಲ್ ಮಿಡಿಯಾ ಪ್ಲಾಟ್ ಫಾರಂ ಇನ್ಸ್ಟಾಗ್ರಾಮಿನ @yaszre ಎಂಬ ಅಕೌಂಟಿನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ನೋಡಿ ಜನರು ಪ್ರಕೃತಿಯ ಈ ಸೌಂದರ್ಯವನ್ನು ತಮ್ಮದೇ ಆದ ರೀತಿಯಲ್ಲಿ ಬಣ್ಣಿಸಿದ್ದಾರೆ, ಹಾಡಿ ಹೊಗಳಿದ್ದಾರೆ. ವೀಡಿಯೊಗೆ ಬೇರೆ ಬೇರೆ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಪ್ರಕೃತಿಯ ಸೌಂದರ್ಯವನ್ನು ನೋಡಲು ಯಾವಾಗಲೂ ಶಾಂತ ಹವಾಮಾನವೇ ಬೇಕು ಅಂತೇನಿಲ್ಲ. ತುಂಬಾ ಸಲ ಬಲವಾದ ಗಾಳಿ, ಎತ್ತರದ ಅಲೆ ಮತ್ತು ನೀರಿನ ಗದ್ದಲದ ನಡುವೆಯೂ, ಅಂತಹ ಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು ಸಮುದ್ರದ ಶಕ್ತಿ ಮತ್ತು ಪ್ರಕೃತಿಯ ಸೌಂದರ್ಯ ಒಟ್ಟಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications
