ರಫೇಲ್ ಡೀಲ್: ವರಸೆ ಬದಲಾಯಿಸಿ, ಭಾರತದ ಬೆಂಬಲಕ್ಕೆ ನಿಂತ ಡಸಾಲ್ಟ್!
ಪ್ಯಾರಿಸ್, ಅಕ್ಟೋಬರ್ 12: 'ರಿಲಯನ್ಸ್ ಡಿಫೆನ್ಸ್ ಸಂಸ್ಥೆಯನ್ನು ಪಾಲುದಾರ ಸಂಸ್ಥೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು ನನ್ನದೇ ನಿರ್ಧಾರ. ಯಾವ ಒತ್ತಡವೂ ತನ್ನ ಮೇಲಿರಲಿಲ್ಲ' ಎಂದು ಡಸಾಲ್ಟ್ ಕಂಪನಿಯು ಫ್ರಾನ್ಸ್ ಆನ್ ಲೈನ್ ಮಾಧ್ಯಮವೊದರಲ್ಲಿ ಬಂದ ವರದಿಯನ್ನು ತಳ್ಳಿಹಾಕಿದೆ.
"ಡಸಾಲ್ಟ್ ಏವಿಯೇಶನ್ ಕಂಪನಿಗೆ ರಿಲಯನ್ಸ್ ಅನ್ನು ಆಯ್ಕೆ ಮಾಡದೆ ಬೇರೆ ವಿಧಿ ಇರಲಿಲ್ಲ. ಏಕೆಂದರೆ ಭಾರತ ರಿಲಯನ್ಸ್ ಹೆಸರನ್ನು ಬಿಟ್ಟು ಬೇರೆ ಹೆಸರನ್ನು ಕೊಟ್ಟೇ ಇರಲಿಲ್ಲ. ಆದ್ದರಿಂದ ತಾನು ರಿಲಯನ್ಸ್ ಅನ್ನೇ ಆಯ್ದುಕೊಂಡೆ, ನನ್ನ ಮೇಲೆ ರಿಲಯನ್ಸ್ ಅನ್ನೇ ಆಯ್ಕೆ ಮಾಡಲು ಒತ್ತಡವಿತ್ತು" ಎಂದು ಡಸಾಲ್ಟ್ ಕಂಪನಿ ಹೇಳಿದ್ದಾಗಿ ಫ್ರೆಂಚ್ ಮಾಧ್ಯಮಗಳು ವರದಿ ಮಾಡಿದ್ದವು.

ರಫೇಲ್ ಯುದ್ಧ ವಿಮಾನ ಖರೀದಿಗಾಗಿ ಭಾರತ ಫ್ರಾನ್ಸ್ ನೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಫ್ರಾನ್ಸ್ ನ ಡಸಾಲ್ಟ್ ಏವಿಯೇಶನ್ ಕಂಪನಿಗೆ ಯುದ್ಧ ವಿಮಾನ ತಯಾರಿಕೆಯ ಹೊಣೆ ವಹಿಸಲಾಗಿತ್ತು. ಯುದ್ಧ ವಿಮಾನಗಳ ಬಿಡಿಭಾಗಗಳ ತಯಾರಿಕೆಗಾಗಿ ಭಾರತದ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಪಾಲಿದಾರ ಕಂಪನಿಯನ್ನಾಗಿ ಡಸಾಲ್ಟ್ ಆರಿಸಿಕೊಂಡಿತ್ತು.
ಆದರೆ ರಫೇಲ್ ಡೀಲ್ ನಲ್ಲಿ ಬಹುಕೋಟಿ ಅವ್ಯವಹಾರ ಸಂಭವಿಸಿದೆ, ಮತ್ತು ರಿಲಯನ್ಸ್ ಕಂಪನಿಯನ್ನೇ ಆಯ್ಕೆ ಮಾಡಿಕೊಳ್ಳಲು ಬೇಕೆಂದೇ ಫ್ರಾನ್ಸ್ ಮೇಲೆ ಒತ್ತಡ ಹೇರಿದೆ ಎಂದು ಪ್ರತಿಪಕ್ಷಗಳು ದೂರಿದ್ದವು.












Click it and Unblock the Notifications