ಪ್ರವಾಸಕ್ಕಾಗಿ ಕೈತುಂಬಾ ಸಂಬಳದ ಕಾರ್ಪೊರೇಟ್ ಕೆಲಸಕ್ಕೆ ಗುಡ್‌ಬೈ ಹೇಳಿದ ಯುವತಿ, ಕೇವಲ 14 ದಿನಕ್ಕೆ ರಿಟರ್ನ್? ಇಲ್ಲಿದೆ ಕಾರಣ

ಕಾರ್ಪೊರೇಟ್ ಜೀವನದ ಜಂಜಾಟ, ನಿರಂತರ ಒತ್ತಡ ಮತ್ತು ಒಂದೇ ರೀತಿಯ ದಿನಚರಿಯಿಂದ ಬೇಸತ್ತು ಎಲ್ಲಾದರೂ ದೂರ ಪ್ರಯಾಣ ಬೆಳೆಸಬೇಕೆಂದು ಕನಸು ಕಾಣುವವರ ಸಂಖ್ಯೆ ಹೆಚ್ಚಾಗುತ್ತಲಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸುವ ಪ್ರವಾಸದ ವಿಡಿಯೋಗಳು ಮತ್ತು ವಾಸ್ತವದ ಪ್ರಯಾಣದ ನಡುವೆ ಅಗಾಧ ವ್ಯತ್ಯಾಸವಿದೆ ಎಂಬುದಕ್ಕೆ ಆಸ್ಟ್ರೇಲಿಯಾದ 28 ವರ್ಷದ ಮಹಿಳೆಯೊಬ್ಬರ ಅನುಭವವೇ ಪ್ರಮುಖ ಸಾಕ್ಷಿಯಾಗಿದೆ.

ಅನೇಕರಿಗೆ ಕಾರ್ಪೊರೇಟ್ ಕೆಲಸದ ಜಂಜಾಟದಿಂದ ಹೊರಬಂದು ಪ್ರಪಂಚವನ್ನು ಸುತ್ತಬೇಕು, ಪ್ರವಾಸ ಮಾಡಬೇಕು ಎನ್ನುವ ಆಸೆ ಇರುತ್ತದೆ. ಆದರೆ ಈ ಕನಸನ್ನು ನನಸು ಮಾಡಿಕೊಳ್ಳಲು ಹೊರಟ ಆಸ್ಟ್ರೇಲಿಯಾದ ಯುವತಿಯೊಬ್ಬಳಿಗೆ ಪ್ರವಾಸ ಆರಂಭವಾದ ಕೆಲವೇ ದಿನಗಳಲ್ಲಿ ಕಹಿ ಅನುಭವ ಎದುರಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Quits Corporate Job to Travel Europe 28-Year-Old Woman Wants to Return Home in Just 14 Days Viral

ತಾಯ್ನಾಡಿಗೆ ಮರಳುವ ನಿರ್ಧಾರ

ಆಸ್ಟ್ರೇಲಿಯಾದ ಮೆಲ್ಬೋರ್ನ್ ಮೂಲದ ಯುವತಿಯೊಬ್ಬಳು ಕಾರ್ಪೊರೇಟ್ ಕ್ಷೇತ್ರದಲ್ಲಿ ಒಳ್ಳೆಯ ಕೆಲಸಕ್ಕೆ ರಾಜೀನಾಮೆ ನೀಡಿ, 6 ತಿಂಗಳ ಕಾಲ ಯುರೋಪ್ ಖಂಡವನ್ನು ಸುತ್ತಲು ನಿರ್ಧರಿಸಿದ್ದಳು. ಇದಕ್ಕಾಗಿ ಆಕೆ ಹೆಚ್ಚು ಹಣ ಮತ್ತು ಸಮಯವನ್ನು ವಿನಿಯೋಗಿಸಿ ಪ್ರವಾಸದ ಸಿದ್ಧತೆ ಮಾಡಿಕೊಂಡಿದ್ದಳು. ಆದರೆ, ಯುರೋಪ್ ತಲುಪಿದ ಕೇವಲ ಎರಡೇ ವಾರಗಳಲ್ಲಿ (14 ದಿನಗಳು) ಆಕೆಗೆ ಪ್ರವಾಸ ಸಾಕಪ್ಪಾ ಸಾಕು ಎನಿಸಿದ್ದು, ಮತ್ತೆ ತಾಯ್ನಾಡಿಗೆ ಮರಳುವ ಭಯಕೆ ವ್ಯಕ್ತಪಡಿಸಿದ್ದಾರೆ.

ಪ್ರವಾಸದ ಕಹಿ ಅನುಭವ ಹಂಚಿಕೊಂಡ ಯುವತಿ

ತನ್ನ ಈ ದಿಢೀರ್ ನಿರ್ಧಾರ ಮತ್ತು ನಿರಾಶಾದಾಯಕ ಅನುಭವದ ಕುರಿತು ಟಿಕ್‌ಟಾಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಯುವತಿ, ತನಗೆ ಎದುರಾದ ವಾಸ್ತವದ ತೊಂದರೆಗಳನ್ನು ಬಿಚ್ಚಿಟ್ಟಿದ್ದಾರೆ. 'ಸೋಶಿಯಲ್ ಮೀಡಿಯಾದಲ್ಲಿ ಕಾಣಿಸುವ ಯುರೋಪ್ ಪ್ರವಾಸದ ಸುಂದರ ವಿಡಿಯೋಗಳು ಮತ್ತು ವಾಸ್ತವ ಜೀವನದ ನಡುವೆ ದೊಡ್ಡ ವ್ಯತ್ಯಾಸವಿದೆ. ಪ್ರವಾಸ ಆರಂಭವಾದ ತಕ್ಷಣವೇ ತೀವ್ರ ಆಯಾಸ, ಮಾನಸಿಕ ಒತ್ತಡ ಹಾಗೂ ಮನೆನೆನಪು ಕಾಡತೊಡಗಿತು,' ಎಂದು ಹೇಳಿಕೊಂಡಿದ್ದಾರೆ.

'ಹೊಂದಿಕೊಳ್ಳುವುದು ತುಂಬಾ ಕಷ್ಟವಾಯಿತು'

'ಪ್ರತಿದಿನ ಹೊಸ ಜಾಗಗಳಿಗೆ ಪ್ರಯಾಣಿಸುವುದು, ಲಗೇಜ್‌ಗಳನ್ನು ಹೊತ್ತು ತಿರುಗುವುದು ಮತ್ತು ನಿರಂತರವಾಗಿ ಹೋಟೆಲ್ ಹಾಗೂ ರೂಂಗಳನ್ನು ಬದಲಾಯಿಸುವುದು ಶಾರೀರಿಕವಾಗಿ ತೀವ್ರ ಆಯಾಸವನ್ನು ಉಂಟುಮಾಡಿತು. ಹೊಸ ವಾತಾವರಣ, ಭಾಷೆಯ ಸಮಸ್ಯೆ ಮತ್ತು ಆಹಾರ ಪದ್ಧತಿಗೆ ಹೊಂದಿಕೊಳ್ಳುವುದು ಸವಾಲಾಗಿ ಪರಿಣಮಿಸಿತು,' ಎಂದು ತಿಳಿಸಿದ್ದಾರೆ.

'ನಾನು ವರ್ಷಗಟ್ಟಲೆ ಯೋಜಿಸಿ, ಕೆಲಸ ಬಿಟ್ಟು ಇಲ್ಲಿಗೆ ಬಂದೆ. ಆದರೆ ಈಗ ನನಗೆ ಕೇವಲ ನನ್ನ ಮನೆ, ನನ್ನ ಹಳೆಯ ದಿನಚರಿ ಮತ್ತು ಆರಾಮದಾಯಕ ಜೀವನವೇ ನೆನಪಾಗುತ್ತಿದೆ,' ಎಂದು ಆಕೆ ವಿಡಿಯೋದಲ್ಲಿ ಕಣ್ಣೀರು ಹಾಕುತ್ತಾ ಅಳಲು ತೋಡಿಕೊಂಡಿದ್ದಾಳೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವು ಬಳಕೆದಾರರು ಆಕೆಯ ನಿರ್ಧಾರವನ್ನು ಬೆಂಬಲಿಸಿದ್ದು, 'ಪ್ರವಾಸ ಎಂದರೆ ಕೇವಲ ಮೋಜು-ಮಸ್ತಿಯಲ್ಲ, ಅದಕ್ಕೂ ಮಾನಸಿಕ ಸಿದ್ಧತೆ ಬೇಕು. ದಿಢೀರ್ ದೀರ್ಘಾವಧಿ ಪ್ರವಾಸ ಕೈಗೊಂಡಾಗ ಇಂತಹ ಅನುಭವಗಳು ಸಾಮಾನ್ಯ,' ಎಂದು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಇನ್ನು ಕೆಲವರು, 'ಕಾರ್ಪೊರೇಟ್ ಕೆಲಸ ಬಿಟ್ಟು ಪ್ರವಾಸ ಮಾಡುವುದು ಸಿನಿಮಾಗಳಲ್ಲಿ ನೋಡಲು ಮಾತ್ರ ಚೆನ್ನಾಗಿರುತ್ತದೆ. ವಾಸ್ತವದಲ್ಲಿ ಅದಕ್ಕೆ ಶಿಸ್ತು ಮತ್ತು ತಾಳ್ಮೆ ಅಗತ್ಯ,' ಎಂದು ಸಲಹೆ ನೀಡಿದ್ದಾರೆ.

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗನ್ನು ಅನುಸರಿಸಿ ದಿಢೀರ್ ನಿರ್ಧಾರ ಕೈಗೊಳ್ಳುವ ಮುನ್ನ ವಾಸ್ತವದ ಸವಾಲುಗಳನ್ನು ಅರಿತುಕೊಳ್ಳುವುದು ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆ ಒಂದು ಉತ್ತಮ ನಿದರ್ಶನವಾಗಿದೆ ಎಂದು ಹೇಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+