ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟದಿಂದ ಹೊರಬಂದ ಕತಾರ್

ದೋಹಾ (ಕತಾರ್), ಡಿಸೆಂಬರ್ 03 : ಶ್ರೀಮಂತ ರಾಷ್ಟ್ರವಾಗಿರುವ ಕತಾರ್ 2019ರ ಜನವರಿಯಲ್ಲಿ ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಒಕ್ಕೂಟದಿಂದ ಹೊರಬರುವ ಮಹತ್ವದ ನಿರ್ಧಾರವನ್ನು ಸೋಮವಾರ ತೆಗೆದುಕೊಂಡಿದೆ. ಆದರೆ, ಈ ವಾರ ನಡೆಯಲಿರುವ ತೈಲ ರಫ್ತುದಾರರ ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದೆ.

ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟ(ಓಪೆಕ್)ದಲ್ಲಿರುವ ದೇಶಗಳಲ್ಲಿಯೇ ಅತಿ ಕಡಿಮೆ ಪ್ರಮಾಣದಲ್ಲಿ ತೈಲ ಉತ್ಪಾದಿಸುವ ಕತಾರ್, ದ್ರವೀಕೃತ ನೈಸರ್ಗಿಕ ಅನಿಲ ರಫ್ತುದಾರ ರಾಷ್ಟ್ರಗಳಲ್ಲಿ ತನ್ನ ಉನ್ನತ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಚಿಂತನೆ ನಡೆಸಿದೆ.

ಸೌದಿ ಅರೇಬಿಯಾ ಮತ್ತಿತರ ನೆರೆಯ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ತಾಕಲಾಟದಲ್ಲಿ ಬಿದ್ದಿರುವ ಸಣ್ಣ ರಾಷ್ಟ್ರ ಕತಾರ್, ತನ್ನ ಈ ನಡೆಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಹೇಳಿದೆ. ಕಳೆದ 57 ವರ್ಷಗಳಿಂದ ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟದಲ್ಲಿರುವ ಕತಾರ್, ಬರುವ ಗುರುವಾರ ಮತ್ತು ಶುಕ್ರವಾರ ನಡೆಯಲಿರುವ ಒಕ್ಕೂಟದ ಸಭೆಯಲ್ಲಿ ಭಾಗವಹಿಸಲಿದೆ.

'ಮಿಸ್ಟರ್ ಗ್ಯಾಸ್' ಸಾದ್ ಅಲ್-ಕಾಬಿ ಪತ್ರಿಕಾಗೋಷ್ಠಿ

'ಮಿಸ್ಟರ್ ಗ್ಯಾಸ್' ಸಾದ್ ಅಲ್-ಕಾಬಿ ಪತ್ರಿಕಾಗೋಷ್ಠಿ

ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಇಂಧನ ಖಾತೆಯ ರಾಜ್ಯ ಸಚಿವ ಮತ್ತು ಕತಾರ್ ಪೆಟ್ರೋಲಿಯಂನ ಮಾಲಿಕರೂ ಆಗಿರುವ 'ಮಿಸ್ಟರ್ ಗ್ಯಾಸ್' ಸಾದ್ ಅಲ್-ಕಾಬಿ ಅವರು, 2019ರ ಜನವರಿಯಿಂದ ಓಪೆಕ್ ನಿಂದ ಹೊರಬರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಈ ನಿರ್ಧಾರವನ್ನು ಒಕ್ಕೂಟಕ್ಕೂ ಸೋಮವಾರ ತಿಳಿಸಲಾಗಿದೆ ಎಂದು ತಿಳಿಸಿದರು.

ಪೆಟ್ರೋಲಿಯಂ ಉತ್ಪಾದನೆಯಿಂದ ಲಾಭವಿಲ್ಲ

ಪೆಟ್ರೋಲಿಯಂ ಉತ್ಪಾದನೆಯಿಂದ ಲಾಭವಿಲ್ಲ

ಈ ಒಕ್ಕೂಟದಲ್ಲಿ ನಮ್ಮ ರಾಷ್ಟ್ರ ಅತ್ಯಂತ ಚಿಕ್ಕ ದೇಶವಾಗಿದ್ದು, ಇದರಲ್ಲಿ ನಮ್ಮ ಪರಿಶ್ರಮ, ಸಮಯ ವಿನಿಯೋಗಿಸುವುದರಿಂದ ಯಾವುದೇ ಲಾಭವಾಗುತ್ತಿಲ್ಲ ಮತ್ತು ಪ್ರಾಕ್ಟಿಕಲ್ ಆಗಿ ತೈಲ ಉತ್ಪಾದಿಸಿ ರಫ್ತು ಮಾಡುವುದರಿಂದ ನಮಗೆ ಸಹಾಯವಾಗುತ್ತಿಲ್ಲ. ಇದರ ಬದಲಿಗೆ ದೇಶದ ಅಭಿವೃದ್ಧಿಗೆ ಪೂರಕವಾದಂತಹ ಕೆಲಸದಲ್ಲಿ ತೊಡಗುತ್ತೇವೆ ಎಂದು ಅವರು ತಿಳಿಸಿದರು.

ಕತಾರ್ ನಿಂದ ಪ್ರತಿದಿನ 6 ಲಕ್ಷ ಬ್ಯಾರಲ್ ಉತ್ಪಾದನೆ

ಕತಾರ್ ನಿಂದ ಪ್ರತಿದಿನ 6 ಲಕ್ಷ ಬ್ಯಾರಲ್ ಉತ್ಪಾದನೆ

ಕತಾರ್ ಪ್ರತಿದಿನ 6 ಲಕ್ಷ ಬ್ಯಾರಲ್ ಗಳನ್ನು ತೈಲವನ್ನು ಉತ್ಪಾದಿಸುತ್ತಿದೆ. ಒಕ್ಕೂಟದ ಅತಿ ದೊಡ್ಡ ರಫ್ತುದಾರ ಮತ್ತು ವಿಶ್ವದ ಅತೀದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿರುವ ಸೌದಿ ಅರೇಬಿಯಾದ 110 ಲಕ್ಷ ಬ್ಯಾರಲ್ ಉತ್ಪಾದನೆಗೆ ಹೋಲಿಸಿದರೆ ಕತಾರ್ ನ ಉತ್ಪಾದನೆ ತುಂಬಾ ಕಡಿಮೆ. ಹೀಗಾಗಿ ಇವರು ಹಿಂದೆ ಸರಿದಿರುವುದರಿಂದ ಯಾವುದೇ ಪರಿಣಾಮ ಬೀರಲಾರದು ಎಂಬುದು ತಜ್ಞರ ಅಭಿಮತ. ಆದರೆ, 57 ವರ್ಷಗಳ ಇತಿಹಾಸದಲ್ಲಿ ಕತಾರ್ ಸಾಕಷ್ಟು ಕಾಣಿಕೆ ನೀಡಿದೆ.

ಕಚ್ಚಾ ತೈಲ ಉತ್ಪಾದಿಸುವ ರಾಷ್ಟ್ರಗಳಲ್ಲಿ 17ನೇ ಸ್ಥಾನ

ಕಚ್ಚಾ ತೈಲ ಉತ್ಪಾದಿಸುವ ರಾಷ್ಟ್ರಗಳಲ್ಲಿ 17ನೇ ಸ್ಥಾನ

ವರ್ಲ್ಡ್ ಡೇಟಾ.ಇನ್ಫೋ ಪ್ರಕಾರ, ಕಚ್ಚಾ ತೈಲ ಉತ್ಪಾದಿಸುವ ದೊಡ್ಡ ರಾಷ್ಟ್ರಗಳಲ್ಲಿ ಕತಾರ್ 17ನೇ ಸ್ಥಾನದಲ್ಲಿದ್ದು, ಪ್ರತಿದಿನ 6 ಲಕ್ಷ ಬ್ಯಾರಲ್ ನಷ್ಟು ತೈಲವನ್ನು ಉತ್ಪಾದಿಸುತ್ತಿದೆ. ಮತ್ತು ವಿಶ್ವದ ಜಾಗತಿಕ ತೈಲ ನಿಕ್ಷೇಪಗಳಲ್ಲಿ ಶೇ.2ರಷ್ಟು ಮಾತ್ರ ಕತಾರ್ ಹೊಂದಿದೆ. ಇದೀಗ ದ್ರವೀಕೃತ ನೈಸರ್ಗಿಕ ಅನಿಲ ಉತ್ಪಾದನೆಯನ್ನು ವರ್ಷಕ್ಕೆ 77 ಮಿಲಿಯನ್ ಟನ್ ನಿಂದ 110 ಮಿಲಿಯನ್ ಟನ್ ಗೆ ವೃದ್ಧಿಸಿಕೊಳ್ಳುವ ಗುರಿಯನ್ನು ಹೊಂದಿದ್ದು, ಈ ಕಾರಣದಿಂದಲೇ ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟದಿಂದ ಹೊರಬಂದಿರುವುದಾಗಿ ಕತಾರ್ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+