ಯುರೋಪ್ ವಿರುದ್ಧ ಯುದ್ಧಕ್ಕೆ ರೆಡಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಘೋಷಣೆ!
ರಷ್ಯಾ ಮತ್ತು ಉಕ್ರೇನ್ ಯುದ್ಧ ಏನೇನೋ ಸಮಸ್ಯೆ ಹುಟ್ಟುಹಾಕಿದೆ, ನೋಡ ನೋಡುತ್ತಲೇ ಈ ಯುದ್ಧ ಶುರುವಾದ ನಂತರ ಹಲವು ದೇಶಗಳು ಬಡಿದಾಡಿ ಸಾಯುತ್ತಿವೆ. ಯುರೋಪ್ ಅಲ್ಲಾಡಿ ಹೋಗಿದ್ದು, ಇಡೀ ಯುರೋಪ್ ಖಂಡದ ತುಂಬಾ ಸಂಚಲನ ಸೃಷ್ಟಿ ಮಾಡಿದೆ ರಷ್ಯಾ & ಉಕ್ರೇನ್ ವಾರ್. ಈಗಾಗಲೇ ಲಕ್ಷಾಂತರ ಜನರು ಈ ತಿಕ್ಕಾಟದಲ್ಲಿ ಜೀವ ಕಳೆದುಕೊಂಡಿರುವ ಸಮಯದಲ್ಲೇ ಹೇಗಾದರೂ ಮಾಡಿ ಈ ಯುದ್ಧ ನಿಲ್ಲಿಸಬೇಕು ಎಂಬ ಪ್ರಯತ್ನಗಳು ಸಾಗಿದ್ದವು. ಆದರೆ ಎಲ್ಲಾ ದಿಢೀರ್ ಉಲ್ಟಾ ಹೊಡೆದಿದ್ದು, ಯುರೋಪ್ ವಿರುದ್ಧ ಯುದ್ಧಕ್ಕೆ ರೆಡಿ... ರಷ್ಯಾ ಅಧ್ಯಕ್ಷ ಪುಟಿನ್ ಘೋಷಣೆ!
ಉಕ್ರೇನ್ ಜೊತೆಗಿನ ರಷ್ಯಾ ಸಂಧಾನ ನಿಂತು ಹೋದ ನಂತರ ರಷ್ಯಾ ಅಧ್ಯಕ್ಷ ಪುಟಿನ್ ಇನ್ನಷ್ಟು ರೊಚ್ಚಿಗೆದ್ದು ಕೂತಿದ್ದಾರೆ. ಅದರಲ್ಲೂ ಉಕ್ರೇನ್ ತಲೆ ಕೆಡಿಸಿ, ಯುರೋಪ್ ದೇಶಗಳು ಹೊಸದಾಗಿ ಆಟ ಶುರು ಮಾಡಿವೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಒಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಯಭಾರಿ ಮಾಸ್ಕೋಗೆ ತೆರಳಿದ್ದರೆ, ಈ ಸಮಯದಲ್ಲಿ ಯುರೋಪ್ ರಾಷ್ಟ್ರಗಳಿಂದ ಮಹತ್ವದ ಸಭೆ ನಡೆದಿತ್ತು.

ರಷ್ಯಾಗೆ ಅನುಕೂಲಕರವಾಗಿ ಇದ್ದ ಶಾಂತಿ ಪ್ರಸ್ತಾವನೆ ಪರಿಷ್ಕರಿಸಲು ಒತ್ತಡ ಹೇರುವ ತಂತ್ರವಾಗಿ ಫ್ರಾನ್ಸ್ ಮುಂದಾಳತ್ವದಲ್ಲಿ ಸಭೆಯು ನಡೆದಿತ್ತು. ಬ್ರಿಟನ್, ಜರ್ಮನಿ, ಇಟಲಿ, ಪೋಲೆಂಡ್ ಮತ್ತು ಯುರೋಪಿಯನ್ ಒಕ್ಕೂಟದ ಇತರ ದೇಶಗಳು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದವು. ಇಷ್ಟೆಲ್ಲಾ ಬೆಳವಣಿಗೆ ನಡುವೆ ದಿಢೀರ್ ರಷ್ಯಾದ ಅಧ್ಯಕ್ಷ ಪುಟಿನ್, ಯುರೋಪ್ ವಿರುದ್ಧ ಯುದ್ಧಕ್ಕೆ ಸಿದ್ಧ ಎಂದಿದ್ದಾರೆ.












Click it and Unblock the Notifications