ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದಲ್ಲಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಮನೆಗೆ ನುಗ್ಗಿದ ಪ್ರತಿಭಟನಾಕಾರರು!

|
Google Oneindia Kannada News

ಕೊಲಂಬೋ, ಜುಲೈ 9: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಉದ್ವಿಗ್ನತೆಯನ್ನು ಸೃಷ್ಟಿ ಮಾಡಿದೆ. ದೇಶದಲ್ಲಿರುವ ಅಧ್ಯಕ್ಷ ಗೋಟಬಯ ರಾಜಪಕ್ಸೆ ವಿರುದ್ಧ ಸಾರ್ವಜನಿಕರು ಕೆರಳಿ ಕೆಂಡವಾಗಿದ್ದಪ, ಅವರ ರಾಜೀನಾಮೆಗೆ ಒತ್ತಾಯಿಸಿ ನೂರಾರು ಪ್ರತಿಭಟನಾಕಾರರು ಬೀದಿಗೆ ಇಳಿದಿದ್ದಾರೆ.

Recommended Video

Sri Lanka ಜನತೆ ರಾಷ್ಟ್ರಪತಿಗಳ ಮನೆಗೆ ನುಗ್ಗಿದ್ದು ಹೀಗೆ | *World | OneIndia Kannada

ಶನಿವಾರ ಮಧ್ಯ ಕೊಲಂಬೊದ ಹೈ-ಸೆಕ್ಯುರಿಟಿ ಫೋರ್ಟ್ ಪ್ರದೇಶದಲ್ಲಿರುವ ಬ್ಯಾರಿಕೇಡ್‌ಗಳನ್ನು ಮುರಿದ ಪ್ರತಿಭಟನಾಕಾರರು ಗೋಟಬಯ ರಾಜಪಕ್ಸೆಯ ಅಧಿಕೃತ ನಿವಾಸಕ್ಕೆ ನುಗ್ಗಿದ್ದಾರೆ ಎಂದು ವರದಿಯಾಗಿದೆ.

ಶ್ರೀಲಂಕಾ ಬಿಕ್ಕಟ್ಟು: ಸರ್ಕಾರಿ ವಿರೋಧಿ ರ್‍ಯಾಲಿಗೂ ಮುನ್ನ ಕರ್ಫ್ಯೂಶ್ರೀಲಂಕಾ ಬಿಕ್ಕಟ್ಟು: ಸರ್ಕಾರಿ ವಿರೋಧಿ ರ್‍ಯಾಲಿಗೂ ಮುನ್ನ ಕರ್ಫ್ಯೂ

ಶ್ರೀಲಂಕಾದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಮುತ್ತಿಗೆ ಹಾಕಿದ್ದು ಆಗಿದೆ. ನಿಮ್ಮ ಭದ್ರಕೋಟೆ ಬಿದ್ದಿದೆ. ಅರಗಾಲಯ ಮತ್ತು ಜನಶಕ್ತಿ ಗೆದ್ದಿದೆ. ದಯವಿಟ್ಟು ಈಗ ರಾಜೀನಾಮೆ ನೀಡುವ ಘನತೆ ಉಳಿಸಿಕೊಳ್ಳಿರಿ," ಎಂದು ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಹೇಳಿದ್ದಾರೆ.

Protesters break into Sri lanka President Gotabaya Rajapaksa official residence, demand his resignation

ಕ್ರಿಕೆಟಿಗರ ಸನತ್ ಜಯಸೂರ್ಯ ಸರಣಿ ಟ್ವೀಟ್:

ಶ್ರೀಲಂಕಾದಲ್ಲಿ ಸೃಷ್ಟಿಯಾಗಿರುವ ಸರಣಿ ಟ್ವೀಟ್ ಮೂಲಕ ಪ್ರತಿಭಟನಾನಿರತ ಜೊತೆಗೆ ತಾವು ಯಾವಾಗಲೂ ಇರುವುದಾಗಿ ಕ್ರಿಕೆಟಿಗ ಸನತ್ ಜಯಸೂರ್ಯ ಹೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು,"ನಾನು ಯಾವಾಗಲೂ ಶ್ರೀಲಂಕಾದ ಜನರೊಂದಿಗೆ ನಿಲ್ಲುತ್ತೇನೆ. ಶೀಘ್ರದಲ್ಲೇ ವಿಜಯದ ಸಂಭ್ರಮವನ್ನು ಆಚರಿಸುತ್ತೇನೆ. ಇದು ಯಾವುದೇ ಉಲ್ಲಂಘನೆಯಿಲ್ಲದೆ ಮುಂದುವರಿಯಬೇಕು," ಎಂದು ಬರೆದುಕೊಂಡಿದ್ದಾರೆ.

ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅನ್ನು ಉಲ್ಲೇಖಿಸಿ ಬರೆದಿರುವ ಮತ್ತೊಂದು ಟ್ವೀಟ್ ಸಂದೇಶದಲ್ಲಿ "ನಿಮ್ಮ ಮನೆಗೆ ಮುತ್ತಿಗೆ ಹಾಕಿರುವುದು ಆಗಿದೆ. ನಿಮ್ಮ ಭದ್ರಕೋಟೆ ಕುಸಿದಿದೆ. ಅರಗಾಲಯ ಮತ್ತು ಜನಶಕ್ತಿ ಗೆದ್ದಿದೆ. ದಯವಿಟ್ಟು ಈಗ ರಾಜೀನಾಮೆ ನೀಡಿ ಘನತೆ ಉಳಿಸಿಕೊಳ್ಳಿರಿ," ಎಂದು ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ರಾಜಪಕ್ಸೆ ರಾಜೀನಾಮೆಗೆ ಹೆಚ್ಚಿದ ಕೂಗು:

ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನ ನಡುವೆ ಸರ್ಕಾರವನ್ನು ದುರುಪಯೋಗಪಡಿಸಿಕೊಂಡ ಹಿನ್ನೆಲೆ ತಕ್ಷಣವೇ ಅಧ್ಯಕ್ಷ ಸ್ಥಾನಕ್ಕೆ ಗೋಟಬಯ ರಾಜಪಕ್ಸೆ ರಾಜೀನಾಮೆ ಸಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಈ ಸಂಬಂಧ ಪ್ರಧಾನಮಂತ್ರಿ ಕಚೇರಿಯ ಎದುರು ಸಾವಿರಾರು ಸಂಖ್ಯೆಯಲ್ಲಿ ಜನರು ಮೊಕ್ಕಾಂ ಹೂಡಿದ್ದರೆ, ಇನ್ನಷ್ಟು ಮಂದಿ ಈ ಕಡೆ ಅಧ್ಯಕ್ಷರ ಮನೆಗೆ ನುಗ್ಗಿದ್ದಾರೆ. ಈ ಮಧ್ಯೆ ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕಾಗಿ ಭದ್ರತಾ ಸಿಬ್ಬಂದಿಯು ಹರಸಾಹಸ ಪಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.

English summary
Protesters break into Sri lanka President Gotabaya Rajapaksa official residence, demand his resignation. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X