ಇಮ್ರಾನ್ ಖಾನ್ ಪ್ರತಿಭಟನಾ ರ್‍ಯಾಲಿ ಟ್ರಕ್‌ಗೆ ಸಿಲುಕಿ ಪಾಕ್ ಪತ್ರಕರ್ತೆ ಸಾವು
ತಮ್ಮ ಕಾರ್ಯಕ್ರಮವನ್ನು ವರದಿ ಮಾಡುತ್ತಿದ್ದ ಪಾಕಿಸ್ತಾನಿ ಮಹಿಳಾ ಪತ್ರಕರ್ತೆಯೊಬ್ಬರು ಟ್ರಕ್‌ನಡಿ ಸಿಲುಕಿ ಸಾವನ್ನಪ್ಪಿದ್ದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾನುವಾರ ತಮ್ಮ ಸುದೀರ್ಘ ಮೆರವಣಿಗೆಯನ್ನು ನಿಲ್ಲಿಸಿದ್ದಾರೆ.
ಮೃತರನ್ನು ಚಾನೆಲ್ ಫೈವ್ ವರದಿಗಾರ್ತಿ ಸದಾಫ್ ನಯೀಮ್ ಎಂದು ಗುರುತಿಸಲಾಗಿದೆ. ಸಾಧೋಕೆ ಬಳಿ ವರದಿಗಾರ್ತಿ ಆಯತಪ್ಪಿ ಬಿದ್ದು ಖಾನ್ ಅವರಿದ್ದ ಮೆರವಣಿಗಾಗಿ ಹೊರಟಿದ್ದ ಟ್ರಕ್ ಆಕೆಯ ಮೇಲೆ ಹರಿದಿದೆ. ಆಸ್ಪತ್ರೆಗೆ ಸಾಗುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.
ಈ ಘಟನೆಯು ಕ್ಷಿಪ್ರ ಚುನಾವಣೆಗಳನ್ನು ಕರೆಯುವಂತೆ ಫೆಡರಲ್ ಸರ್ಕಾರದ ಮೇಲೆ ಒತ್ತಡ ಹೇರಲು ಇಸ್ಲಾಮಾಬಾದ್ ಕಡೆಗೆ ನಡೆಸುತ್ತಿರುವ ಮೆರವಣಿಗೆಯನ್ನು ಖಾನ್ ನಿಲ್ಲಿಸಲು ಪ್ರೇರೇಪಿಸಿತು. ಈ ಬಗ್ಗೆ ಖಾನ್ ಟ್ವೀಟ್ ಮಾಡಿದ್ದಾರೆ. "ಇಂದು ನಮ್ಮ ಚಾನೆಲ್ ವರದಿಗಾರ್ತಿ ಸದಾಫ್ ನಯೀಮ್ ಸಾವಿಗೆ ಕಾರಣವಾದ ಭೀಕರ ಅಪಘಾತವಾಗಿದೆ ಮತ್ತು ತೀವ್ರ ದುಃಖವಾಗಿದೆ" ಎಂದು ಖಾನ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಅವರ ಬೆಂಗಾವಲು ಪಡೆ ಪೂರ್ವ ನಗರವಾದ ಲಾಹೋರ್‌ನಿಂದ ಮೆರವಣಿಗೆಯನ್ನು ಪ್ರಾರಂಭಿಸಿದೆ ಮತ್ತು ಶುಕ್ರವಾರ ಇಸ್ಲಾಮಾಬಾದ್ ತಲುಪುವ ನಿರೀಕ್ಷೆಯಿದೆ. ಲಾಂಗ್ ಮಾರ್ಚ್ ನಾಲ್ಕನೇ ದಿನವಾದ ಇಂದು ಕಾಮೋಕೆಯಿಂದ ಪ್ರಾರಂಭವಾಗಲಿದೆ.
ಪತ್ರಕರ್ತೆಯ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಶೆಹಬಾಜ್ ಷರೀಫ್, ವರದಿಗಾರ್ತಿ ಸಾವಿನಿಂದ ನನಗೆ "ತೀವ್ರ ದುಃಖವಾಗಿದೆ" ಎಂದು ಹೇಳಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ ಸದಾಫ್ ನಯೀಮ್ "ಡೈನಾಮಿಕ್ ಮತ್ತು ಹಾರ್ಡ್ ವರ್ಕಿಂಗ್" ವರದಿಗಾರ್ತಿ ಎಂದು ಬರೆದಿದ್ದಾರೆ. ಮೃತರಿಗೆ ಕ್ಷಮೆ ಕೇಳುತ್ತೇನೆ ಮತ್ತು ಕುಟುಂಬಕ್ಕೆ ತಾಳ್ಮೆಗಾಗಿ ಪ್ರಾರ್ಥಿಸುತ್ತೇನೆ ಎಂದು ಬರೆದಿದ್ದಾರೆ.

ವಾರ್ತಾ ಸಚಿವ ಮರಿಯ್ಯಮ್ ಔರಂಗಜೇಬ್ ಸದಾಫ್ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ ಮತ್ತು ಖಾನ್ ಬಳಸುತ್ತಿದ್ದ ಕಂಟೈನರ್ ಸಾಗಿಸುವ ಟ್ರಕ್‌ನಿಂದ ವರದಿಗಾರ್ತಿ ಹೇಗೆ ಸಿಲುಕಿದರು ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications