ರಷ್ಯಾ ನಂತರ ಉಕ್ರೇನ್ ದೇಶಕ್ಕೆ ತೆರಳಲು ಪ್ರಧಾನಿ ಮೋದಿ ಸಿದ್ಧತೆ!
ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಗೆ ಭೇಟಿ ನೀಡಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಚರ್ಚೆ ನಡೆಸಿದ್ದರು. ಈ ಕುರಿತು ಅಮೆರಿಕ & ಉಕ್ರೇನ್ ಸೇರಿದಂತೆ ಹಲವು ದೇಶಗಳು ರೊಚ್ಚಿಗೆದ್ದಿದ್ದವು. ಈ ಬೆನ್ನಲ್ಲೇ, ಭಾರತದ ಪ್ರಧಾನಿ ಮೋದಿ ಅವರು ಮತ್ತೊಂದು ದೇಶಕ್ಕೆ ಮಹತ್ವದ ಭೇಟಿ ನೀಡಲು ಸಿದ್ಧತೆ ಆರಂಭಿಸಿದ್ದಾರೆ!
ರಷ್ಯಾ & ಭಾರತದ ನಡುವೆ ಅತ್ಯಂತ ಆಪ್ತ ಸಂಬಂಧ ಇದ್ದು, ಎರಡೂ ದೇಶಗಳು ಹಲವು ದಶಕಗಳಿಂದ ಒಟ್ಟಿಗೆ ಬೆಳೆದು ಬಂದಿವೆ. ಹಾಗೇ ಇಬ್ಬರ ಮಧ್ಯೆ ಉತ್ತಮ ಸಂಬಂಧವು ಇದೇ ರೀತಿ ಇದೆ. ಹೀಗಿದ್ದಾಗ ಭಾರತದ ಪ್ರಧಾನಿ ಮೋದಿ ಅವರು ರಷ್ಯಾ ದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕ್ ಶುರುವಾಗಿತ್ತು. ಉಕ್ರೇನ್ ವಿರುದ್ಧ ಯುದ್ಧ ಸಾರಿ ಹಿಂಸೆ ನಡೆಸುತ್ತಿರುವ ರಷ್ಯಾ ಜೊತೆಗೆ, ಭಾರತ ಆತ್ಮೀಯ ಸಂಬಂಧ ಹೊಂದುತ್ತಿರುವುದು ಈ ಸಮಯದಲ್ಲಿ ಸರಿಯಾದ ನಿರ್ಧಾರ ಅಲ್ಲ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಹೀಗಿದ್ದಾಗಲೇ, ಪಾಶ್ಚಿಮಾತ್ಯ ದೇಶಗಳ ಆರೋಪಕ್ಕೆ ಸರಿಯಾದ ತಿರುಗೇಟು ಕೊಡಲು ಭಾರತ ಸಜ್ಜಾಗಿದೆ!

ಉಕ್ರೇನ್ ದೇಶಕ್ಕೆ ಪ್ರಧಾನಿ ಮೋದಿ!
ಹೌದು, ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಲು ಸಾಕಷ್ಟು ಪ್ರಯತ್ನ ಆರಂಭವಾಗಿವೆ. ಇದೇ ವೇಳೆ ಪ್ರಧಾನಿ ಮೋದಿ ಅವರು ಉಕ್ರೇನ್ ರಾಜಧಾನಿ ಕೀವ್‌ಗೆ ತೆರಳಿ, ಉಕ್ರೇನ್ ಅಧ್ಯಕ್ಷರಾದ ಝೆಲೆನ್ಸ್ಕಿ ಅವರನ್ನ ಭೇಟಿ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮುಂದಿನ ತಿಂಗಳಲ್ಲಿ ಅಂದ್ರೆ ಆಗಸ್ಟ್ ತಿಂಗಳಲ್ಲಿ ಪ್ರಧಾನಿ ಮೋದಿ ಅವರು ಉಕ್ರೇನ್ ದೇಶಕ್ಕೆ ತೆರಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹಾಗಾದ್ರೆ ಯಾವ ದಿನದಂದು ಪ್ರಧಾನಿ ಮೋದಿ ಅವರು ಉಕ್ರೇನ್ ದೇಶಕ್ಕೆ ತೆರಳಲಿದ್ದಾರೆ? ಮುಂದೆ ಓದಿ.
40 ವರ್ಷದ ಇತಿಹಾಸ ಮುರಿಯುತ್ತಾರಾ?
ಉಕ್ರೇನ್ ದೇಶದಲ್ಲಿ ಆಗಸ್ಟ್ 24 ರಂದು ರಾಷ್ಟ್ರೀಯ ದಿನ ಆಚರಣೆ ಮಾಡುತ್ತಾರೆ. ಹೀಗಾಗಿಯೇ ಅದೇ ದಿನದಂದು, ಉಕ್ರೇನ್ ರಾಜಧಾನಿ ಕೀವ್‌ಗೆ ಭೇಟಿ ನೀಡಲು ಮುಂದಾಗಿದ್ದಾರೆ ಪ್ರಧಾನಿ ಮೋದಿ ಅವರು. ಉಕ್ರೇನ್‌ಗೆ ಭೇಟಿ ನೀಡಿದ ನಂತರ ಪ್ರಧಾನಿ ಮೋದಿ ಅವರು ಪೋಲೆಂಡ್‌ಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ಮೋದಿ ಅವರು ಪೋಲೆಂಡ್ ಭೇಟಿಯನ್ನು ಪೂರ್ಣಗೊಳಿಸಿದರೆ, ಬರೋಬ್ಬರಿ 4 ದಶಕಗಳ ನಂತರ ಅಂದ್ರೆ 40 ವರ್ಷದ ನಂತರ ಆ ದೇಶಕ್ಕೆ ಭೇಟಿ ನೀಡಿದ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆಯಲಿದ್ದಾರೆ. ಜಿ7 ಶೃಂಗ ಸಭೆಯ ವೇಳೆ ಕೂಡ ಪ್ರಧಾನಿ ಮೋದಿ & ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾತನಾಡಿದ್ದರು.












Click it and Unblock the Notifications