ಅಬ್ಬಬ್ಬಾ ಲಾಟರಿ.. ವಿದೇಶದಲ್ಲಿ ಪ್ರಧಾನಿ ಮೋದಿ ರೈಲು ಪ್ರಯಾಣ! ಭಾರತಕ್ಕೆ ಏನೇನು ಲಾಭ?
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹತ್ವದ ಭೇಟಿ ಕೈಗೊಳ್ಳಲಿದ್ದಾರೆ. ಜಾಗತಿಕವಾಗಿ ಸಂಚಲನ ಸೃಷ್ಟಿ ಮಾಡಿರುವ ಉಕ್ರೇನ್ & ರಷ್ಯಾ ನಡುವಿನ ಯುದ್ಧ ಯಾವಾಗ ಬೇಕಾದ್ರು 3ನೇ ಮಹಾಯುದ್ಧದ ರೂಪ ಪಡೆಯಬಹುದು. ಇಂತಹ ಸಮಯದಲ್ಲೇ ರಷ್ಯಾ & ಉಕ್ರೇನ್ ಇಬ್ಬರ ಜೊತೆಯಲ್ಲೂ ಭಾರತ ಅತ್ಯುತ್ತಮ ಸಂಬಂಧ ಇಟ್ಟುಕೊಂಡಿದೆ. ಇದೇ ಕಾರಣಕ್ಕಾಗಿ ಈಗ ಪ್ರಧಾನಿ ಮೋದಿ ಅವರು ಮಹತ್ವದ ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. ಅದರಲ್ಲೂ, ಇಂದು ಪ್ರಧಾನಿ ಮೋದಿ ಅವರು ಕೈಗೊಳ್ಳಲಿರುವ ರೈಲು ಪ್ರಯಾಣ ಭರ್ಜರಿ ಗಮನ ಸೆಳೆದಿದೆ.
ಅಂದಹಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಒಟ್ಟು 3 ದಿನ ಪೋಲೆಂಡ್ & ಉಕ್ರೇನ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೊದಲಿಗೆ ನೇರವಾಗಿ ಪೋಲೆಂಡ್‌ಗೆ ತೆರಳುವರು. ಪೋಲೆಂಡ್ ದೇಶದ ನಾಯಕರ ಜೊತೆಗೆ ಮಾತುಕತೆ ನಡೆಸಿದ ನಂತರ ಅವರು ನೇರವಾಗಿ ಯುದ್ಧದಿಂದ ನರಳಿ ಹೋಗಿರುವ ಉಕ್ರೇನ್‌ಗೆ ತೆರಳಿದ್ದಾರೆ. ಆಗಸ್ಟ್ 23ಕ್ಕೆ ಯುದ್ಧ ಪೀಡಿತ ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ. ಆದರೆ ಇದೇ ಸಮಯದಲ್ಲಿ ಪಿಎಂ ಮೋದಿ ಅವರು ಕೈಗೊಳ್ಳಲಿರುವ ರೈಲು ಪ್ರಯಾಣ ಭಾರಿ ಗಮನ ಸೆಳೆದಿದೆ.

ವಿಮಾನ ಅಲ್ಲ ರೈಲು ಪ್ರಯಾಣ ಏಕೆ?
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ ಈಗಾಗಲೇ 2.5 ವರ್ಷ ಕಳೆದು ಹೋಗಿದೆ. ಹೀಗಿದ್ದಾಗ ಈ ಯುದ್ಧ ನಿಲ್ಲಿಸಬೇಕು ಅಂತಾ ಆಫ್ರಿಕಾ ಖಂಡದ ದೇಶಗಳು ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳು ಪ್ರಯತ್ನ ಪಡುತ್ತಿವೆ. ಇಂತಹ ಸ್ಥಿತಿಯಲ್ಲಿ ಭಾರತ ಕೂಡ ಮಹತ್ವದ ನಿರ್ಧಾರ ಕೈಗೊಂಡಿದ್ದು, ಯುದ್ಧದ ಪರಿಣಾಮ ನಾಶವಾಗಿ ಹೋದ ಉಕ್ರೇನ್‌ಗೆ ಸಾಂತ್ವಾನ ಹೇಳಲು ಪ್ರಧಾನಿ ಮೋದಿ ಅವರು ರೈಲಿನ ಮೂಲಕ ಉಕ್ರೇನ್‌ಗೆ ಹೋಗುತ್ತಿದ್ದಾರೆ. ಹಾಗಾದರೆ, ಉಕ್ರೇನ್ ದೇಶಕ್ಕೆ ರೈಲಿನ ಮೂಲಕ ಪ್ರಧಾನಿ ಮೋದಿ ಅವರು ತೆರಳುತ್ತಿರುವುದು ಏಕೆ? ವಿಮಾನದಲ್ಲಿ ಅವರು ಹೋಗುತ್ತಿಲ್ಲ ಏಕೆ? ಮುಂದೆ ಓದಿ.
ಅಷ್ಟಕ್ಕೂ ಇದೀಗ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧವು ಘೋರವಾಗಿದೆ. ಅದರಲ್ಲೂ ಈ ಯುದ್ಧದಲ್ಲಿ ವೈಮಾನಿಕ ದಾಳಿ ಹೆಚ್ಚಾಗಿದ್ದು, ಪ್ರಧಾನಿ ಮೋದಿ ಅವರನ್ನು ಉಕ್ರೇನ್ ನೆಲಕ್ಕೆ ತೆರಳುವಂತೆ ವ್ಯವಸ್ಥೆ ಮಾಡಲು ರೈಲು ಮಾರ್ಗದ ವ್ಯವಸ್ಥೆ ಮಾಡಲಾಗಿದೆ. 'ಟ್ರೇನ್ ಪೋರ್ಸ್ ಒನ್' ಹೆಸರಿನ ವಿಶೇಷ ರೈಲಿನಲ್ಲಿ ಪ್ರಧಾನಿ 20 ಗಂಟೆಗಳ ಕಾಲ ಪ್ರಯಾಣಿಸಲಿದ್ದಾರೆ. ಒಂದ್ಕಡೆ ಉಕ್ರೇನ್ ರಾಜಧಾನಿಗೆ ತೆರಳಲು ಮೋದಿ ಅವರಿಗೆ 10 ಗಂಟೆ ಕಾಲಾವಕಾಶ ಬೇಕಿದೆ. ಚರ್ಚೆ ನಂತರ ಮತ್ತೆ ಪೋಲೆಂಡ್ ವಾಪಸ್ ಬರಲು ಪ್ರಧಾನಿ ಮೋದಿ ಅವರು ಸಜ್ಜಾಗಲಿದ್ದು ಆಗ ಕೂಡ 10 ಗಂಟೆಗಳ ಕಾಲ ಮತ್ತೆ ರೈಲು ಪ್ರಯಾಣ ಮಾಡಲಿದ್ದಾರೆ.
ಉಕ್ರೇನ್ ಜೊತೆಗೆ ಮಹತ್ವದ ಚರ್ಚೆ
ಅಂದಹಾಗೆ ಭಾರತದ ಪ್ರಧಾನಿ ಮೋದಿ ಅವರು ಇದೀಗ ಉಕ್ರೇನ್‌ಗೆ ತೆರಳಲು ಪ್ರಯಾಣಿಸುವ ರೈಲು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಈ ರೈಲು ಐಷಾರಾಮಿ ವ್ಯವಸ್ಥೆ ಹೊಂದಿದ್ದು, ಸುರಕ್ಷತೆ ದೃಷ್ಟಿಯಿಂದಲೂ ಅತ್ಯುತ್ತಮ ರೈಲು ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 23ಕ್ಕೆ ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ. 30 ವರ್ಷಗಳ ನಂತರ ಉಕ್ರೇನ್ ನೆಲಕ್ಕೆ ಭಾರತದ ಪ್ರಧಾನಿ ಒಬ್ಬರು ಭೇಟಿ ನೀಡುತ್ತಿದ್ದಾರೆ. ಒಟ್ಟಾರೆ 7 ಗಂಟೆಗಳ ಕಾಲ ಪ್ರಧಾನಿ ಮೋದಿ ಅವರು ಉಕ್ರೇನ್ ದೇಶದ ರಾಜಧಾನಿ ಕೀವ್ ನಗರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.












Click it and Unblock the Notifications