Narendra Modi: ಕೆಲವೇ ಕ್ಷಣಗಳಲ್ಲಿ ಉಕ್ರೇನ್ ತಲುಪಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ!
ಭಾರತದ ಇತಿಹಾಸದಲ್ಲಿ ಇಂದು ಹೊಸ ಘಟನೆ ಸಂಭವಿಸಲಿದೆ, ರಷ್ಯಾ & ಉಕ್ರೇನ್ ಯುದ್ಧ ಭೀಕರವಾದ ಸಮಯದಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉಕ್ರೇನ್ ನೆಲಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ಭಾರತದ ಪ್ರಧಾನಿ ಒಬ್ಬರು ಉಕ್ರೇನ್ ಸ್ವತಂತ್ರ ದೇಶವಾದ ನಂತರ ಮೊಟ್ಟ ಮೊದಲಿಗೆ ಭೇಟಿ ನೀಡುತ್ತಿದ್ದಾರೆ. ಇದರ ಜೊತೆಗೆ ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ಒಂದು ಅಂತ್ಯ ಹಾಡುವ ಪ್ರಯತ್ನ ಕೂಡ ಇಲ್ಲಿಂದಲೇ ಶುರುವಾಗಲಿದೆ.
ಹೌದು, ಪ್ರಧಾನಿ ಮೋದಿ ಅವರು ಇದೀಗ ತಮ್ಮ ಅತ್ಯಂತ ಮಹತ್ವದ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಅದರಲ್ಲೂ ಭಯದ ಕೂಪಕ್ಕೆ ತಳ್ಳಿರುವ ರಷ್ಯಾ & ಉಕ್ರೇನ್ ಯುದ್ಧಕ್ಕೆ ಒಂದು ತಡೆ ಹಾಕಲು ಭಾರತದ ಪ್ರಧಾನಿಯೇ ಖುದ್ದಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕವಾಗಿ, ಜಾಗತಿಕ ಮಟ್ಟದಲ್ಲಿ ಭಾರತದ ಶಕ್ತಿ ಮತ್ತೊಮ್ಮೆ ಗೊತ್ತಾಗಲಿದೆ. ಕೆಲವು ದಿನಗಳ ಹಿಂದಷ್ಟೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಭೆಯನ್ನ ನಡೆಸಿದ್ದರು, ಅಲ್ಲದೆ ಇದು ಯುದ್ಧ ಮಾಡುವ ಕಾಲಘಟ್ಟವಲ್ಲ ಎಂಬುದನ್ನು ಕೂಡ ಅವರು ಒತ್ತಿ ಹೇಳಿದ್ದರು. ಇದೀಗ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆಗೆ ಚರ್ಚೆ ಮಾಡಲಿದ್ದಾರೆ ಪಿಎಂ ಮೋದಿ.

3ನೇ ಮಹಾಯುದ್ಧ ನಿಲ್ಲಿಸಬೇಕಿದೆ!
ಅಂದಹಾಗೆ, ರಷ್ಯಾ & ಉಕ್ರೇನ್ ಯುದ್ಧಕ್ಕೆ ಆದಷ್ಟು ಬೇಗ ಒಂದು ತಡೆ ಹಾಕಬೇಕಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಶಾಂತಿ ನೆಲೆಸಲು ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ ಈ ಇಬ್ಬರ ನಡುವೆ ನಡೆಯುತ್ತಿರುವ ಯುದ್ಧವೇ 3ನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಡುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಇಂತಹ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಈಗಾಗಲೇ ಉಕ್ರೇನ್ ಕಡೆಗೆ ಪ್ರಯಾಣ ಆರಂಭ ಮಾಡಿರುವ ಪಿಎಂ ಮೋದಿ, ಇನ್ನೇನು ಕೆಲವೇ ಗಂಟೆಗಳಲ್ಲಿ ಉಕ್ರೇನ್ ಅಧ್ಯಕ್ಷರ ಜೊತೆಯಲ್ಲಿ ಮಾತುಕತೆಯ ಆರಂಭಿಸಲಿದ್ದಾರೆ. ಪೋಲೆಂಡ್ ಮೂಲಕ ರೈಲು ಮಾರ್ಗವಾಗಿ ಪ್ರಧಾನಿ ಮೋದಿ ಅವರು ಈಗ ಉಕ್ರೇನ್‌ಗೆ ಪ್ರಯಾಣ ಶುರು ಮಾಡಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಚಾರ ಮಾಡಲಿರುವ ರೈಲು ಮಾರ್ಗದಲ್ಲಿ ಅತಿಹೆಚ್ಚು ಭದ್ರತೆ ಒದಗಿಸಲಾಗಿದೆ.
'ಟ್ರೇನ್ ಪೋರ್ಸ್ ಒನ್' ರೈಲು!
ಅಷ್ಟಕ್ಕೂ ಇದೀಗ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧವು ಘೋರವಾಗಿದೆ. ಅದರಲ್ಲೂ ಈ ಯುದ್ಧದಲ್ಲಿ ವೈಮಾನಿಕ ದಾಳಿ ಹೆಚ್ಚಾಗಿದ್ದು, ಪ್ರಧಾನಿ ಮೋದಿ ಅವರನ್ನು ಉಕ್ರೇನ್ ನೆಲಕ್ಕೆ ತೆರಳುವಂತೆ ವ್ಯವಸ್ಥೆ ಮಾಡಲು ರೈಲು ಮಾರ್ಗದ ವ್ಯವಸ್ಥೆ ಮಾಡಲಾಗಿದೆ. 'ಟ್ರೇನ್ ಪೋರ್ಸ್ ಒನ್' ಹೆಸರಿನ ವಿಶೇಷ ರೈಲಿನಲ್ಲಿ ಪ್ರಧಾನಿ 20 ಗಂಟೆಗಳ ಕಾಲ ಪ್ರಯಾಣಿಸಲಿದ್ದಾರೆ. ಒಂದ್ಕಡೆ ಉಕ್ರೇನ್ ರಾಜಧಾನಿಗೆ ತೆರಳಲು ಮೋದಿ ಅವರಿಗೆ 10 ಗಂಟೆ ಕಾಲಾವಕಾಶ ಬೇಕಿದೆ. ಚರ್ಚೆ ನಂತರ ಮತ್ತೆ ಪೋಲೆಂಡ್ ವಾಪಸ್ ಬರಲು ಪ್ರಧಾನಿ ಮೋದಿ ಅವರು ಸಜ್ಜಾಗಲಿದ್ದು ಆಗ ಕೂಡ 10 ಗಂಟೆಗಳ ಕಾಲ ಮತ್ತೆ ರೈಲು ಪ್ರಯಾಣ ಮಾಡಲಿದ್ದಾರೆ.












Click it and Unblock the Notifications