ಜರ್ಮನ್ ಹೂಡಿಕೆದಾರರಿಗೆ ಮೋದಿ ಮುಕ್ತ ಆಹ್ವಾನ
ಬರ್ಲಿನ್, ಏ. 14: ಪ್ರಧಾನಿ ನರೇಂದ್ರ ಮೋದಿ ಜರ್ಮನಿ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಕೆನಡಾಕ್ಕೆ ತೆರಳಿದ್ದಾರೆ. ಭಾರತದಲ್ಲಿ ವಿದೇಶಿ ಹೂಡಿಕೆಗೆ ವಿಪುಲ ಅವಕಾಶವಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಭಾರತೀಯ ಮೂಲದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಸಂಸ್ಕೃತ ಭಾಷೆ ಮಹತ್ವ ತಿಳಿಸಿಕೊಟ್ಟರು. ಎರಡು ದೇಶಗಳ ನಡುವಿನ ಸಂಬಂಧ ಬೆಳವಣಿಗೆಯಲ್ಲಿ ನಿಮ್ಮ ಪಾತ್ರ ಪ್ರಮುಖವಾದದ್ದು, ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬರಬಹುದು ಎಂದು ಬಹಿರಂಗ ಆಹ್ವಾನ ನೀಡಿದರು.[ಜರ್ಮನಿಯಲ್ಲೂ ಮೋದಿ ಮೇಕ್ ಇನ್ ಇಂಡಿಯಾ ಮ್ಯಾಜಿಕ್]

ಮೋದಿ ಜರ್ಮನಿಯಲ್ಲಿ ಹೇಳಿದ ಮಾತುಗಳ ಹೈಲೈಟ್ಸ್
* ಭಾರತದಲ್ಲಿ ಉದ್ದಿಮೆ ಸ್ಥಾಪನೆಗೆ ಆಗಮಿಸುವವರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಿಕೊಡಲಾಗುವುದು.
* ಭಾರತ ಈಗ ಬದಲಾಗಿದೆ. ಆಡಳಿತ ಮತ್ತು ನೀತಿಯಲ್ಲಿ ಪಾರದರ್ಶಕತೆ ಮನೆ ಮಾಡಿದೆ.
* ಜರ್ಮನಿಯ ಚಾನ್ಸೆಲರ್ ಅಂಜೆಲಾ ಮಾರ್ಕೆಲ್ ಜತೆ ಮಾತನಾಡಿ ಜತೆ ವಿದೇಶಿ ವ್ಯವಹಾರದ ಕುರಿತಾಗಿ ಮಾತನಾಡಿದರು.
* ಜಗತ್ತಿಲ್ಲಿ ಶಾಂತಿ ಸ್ಥಾಪನೆಗಾಗಿ ಜರ್ಮನಿಯ ಕೋರಿಕೆ
* ಮೇಕ್ ಇನ್ ಇಂಡಿಯಾ ಅಭಿಯಾನದ ಸಮಗ್ರ ತಿಳಿವಳಿಕೆ.
* ವಿಶ್ವ ಸಂಸ್ಥೆಯಲ್ಲಿ ಕಾಯಂ ಸದಸ್ಯತ್ವಕ್ಕೆ ಬೆಂಬಲಿಸಲು ಮನವಿ
* ಉದ್ಯಮಿಗಳಿಗೆ ಉತ್ತಮ ಮಾರುಕಟ್ಟೆ, ಸೌಕರ್ಯ ಕಲ್ಪಿಸಿಕೊಡುವ ಭರವಸೆ.
* ಭಾರತೀಯ ಉದ್ಯಮಿಗಳು ಎರಡು ದೇಶದ ನಡುವಿನ ಬಾಂಧವ್ಯದ ಸೇತುವೆಯಾಗಿ ಕೆಲಸ ಮಾಡಬೇಕು
* ಭಾರತದ ಆರ್ಥಿಕ ಬೆಳವಣಿಗೆ ಆತ್ಮ ಗೌರವವನ್ನು ಹೆಚ್ಚಿಸಿದೆ.
* ಭಾರತ ಒಂದು ಉತ್ಪಾದಕ ರಾಷ್ಟ್ರವಾಗಿ ಬೆಳೆಯಬೇಕಿದೆ.
My visit to Berlin Hauptbahnhof was a valuable experience. Learnt a lot about railway infrastructure & modernisation pic.twitter.com/Ye8cIeJUaM
— Narendra Modi (@narendramodi) April 14, 2015 * ಕೌಶಲ್ಯ ವೃದ್ಧಿಗೆ ಎರಡು ರಾಷ್ಟ್ರಗಳು ಒಟ್ಟಾಗಿ ಶ್ರಮಿಸಬೇಕಿದೆ.
* ಮಾನವ ಸಂಪನ್ಮೂಲ ಸದ್ಬಳಕೆ ಕುರಿತು ಹೊಸ ಹೊಸ ಸಂಶೋಧನೆ ಮಾಡಬೇಕಿದೆ.
* ಭಾರತದ ನಗರಗಳನ್ನು ಸ್ಮಾರ್ಟ್ ಸಿಟಿಯಾಗಿ ಮಾಡುತ್ತಿದ್ದೇವೆ. ಹಾಗಾಗಿ ಉದ್ಯಮಿಗಳಿಗೆ ಯಾವ ಸಮಸ್ಯೆ ಎದುರಾಗಲ್ಲ.
* ಪರಿಸರ ಸಂರಕ್ಷಣೆ ಎಲ್ಲರ ಹೊಣೆ. ಜಾಗತಿಕ ತಾಪಮಾನ ಏರಿಕೆ ಕುರಿತಾಗಿಯೂ ಗಂಭೀರ ಚಿಂತನೆಗಳು ನಡೆಯಬೇಕಿದೆ.
* ಮಾಹಿತಿ ತಂತ್ರಜ್ಞಾನ ಯಾರೊಬ್ಬರ ಸ್ವತ್ತಾಗಿ ಉಳಿದಿಲ್ಲ. ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಸಂಘಟನಾತ್ಮಕವಾಗಿ ಮುನ್ನುಗ್ಗಬೇಕಿದೆ.












Click it and Unblock the Notifications