ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್ ಚುನಾವಣೆಯಲ್ಲಿ ರಾರಾಜಿಸುತ್ತಿರುವ ಮೋದಿ ಫೋಟೋ

|
Google Oneindia Kannada News

ಟೆಲ್ ಅವಿವ್, ಜುಲೈ 29: ಬರುವ ಸೆಪ್ಟಂಬರ್ ಹದಿನೇಳರಂದು ನಡೆಯಲಿರುವ ಚುನಾವಣೆಯ (Isreal snap polls) ಪ್ರಚಾರದ ಬ್ಯಾನರ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಬಳಸಿಕೊಳ್ಳಲಾಗಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮೋದಿ ಜೊತೆಗಿರುವ ಫೋಟೋವನ್ನು ದಿ ಲುಕುಡ್ ಪಕ್ಷದ ಪ್ರಧಾನ ಕಚೇರಿಯ ಕಟ್ಟಡದಲ್ಲಿ ಹಾಕಲಾಗಿದೆ.

ಡಿಸ್ಕವರಿ ಚಾನೆಲ್‌ನ Man Vs Wild ಸರಣಿಯಲ್ಲಿ ಪ್ರಧಾನಿ ಮೋದಿಡಿಸ್ಕವರಿ ಚಾನೆಲ್‌ನ Man Vs Wild ಸರಣಿಯಲ್ಲಿ ಪ್ರಧಾನಿ ಮೋದಿ

ಮೋದಿಯವರನ್ನು ತನ್ನ ಪರಮಾಪ್ತ ಸ್ನೇಹಿತ ಎಂದು ಹಲವು ಬಾರಿ ಹೇಳಿದ್ದ ನೆತನ್ಯಾಹು. ಮೋದಿ ಮತ್ತೆ ಪ್ರಧಾನಿಯಾಗಿ ಆಯ್ಕೆಯಾದಾಗ ಮೊದಲಿಗೆ ಶುಭಾಶಯ ಸಂದೇಶವನ್ನು ಕಳುಹಿಸಿದ್ದರು.

Indian Prime Minister Narendra Modi Features In Benjamin Netanyahus Election Campaign In Israel

ಟೆಲ್ ಅವಿವ್ ನಗರದ ಕಿಂಗ್ ಜಾರ್ಜ್ ಸ್ಟ್ರೀಟ್ ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯ ಕಟ್ಟಡದಲ್ಲಿ ಮೋದಿ ಮತ್ತು ವಿಶ್ವದ ಇತರ ಇಬ್ಬರು ನಾಯಕರ ಜೊತೆ ನೆತನ್ಯಾಹು ಕೈಕುಲುಕುತ್ತಿರುವ ಬ್ಯಾನರ್ ಅನ್ನು ಹಾಕಲಾಗಿದೆ.

ಮೋದಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜೊತೆಗಿರುವ ಫೋಟೋಗಳನ್ನು ನೆತನ್ಯಾಹು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ವಿಶ್ವದ ಪ್ರಮುಖ ನಾಯಕರ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇವೆ ಎಂದು ಸಾರಲು ಮೂರು ನಾಯಕರ ಫೋಟೋಗಳನ್ನು ಬಳಸಿಕೊಳ್ಳಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

ಚುನಾವಣೆಗೆ ಎಂಟು ದಿನದ ಮುನ್ನ ಅಂದರೆ ಸೆಪ್ಟಂಬರ್ 9ರಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಭಾರತಕ್ಕೆ ಆಗಮಿಸಿ, ಮೋದಿಯವರನ್ನು ಭೇಟಿಯಾಗಲಿದ್ದಾರೆ. (ಚಿತ್ರಕೃಪೆ: @AmichaiStein1)

English summary
Indian Prime Minister Narendra Modi Features In Benjamin Netanyahu's Election Campaign In Israel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X