ಫೋರ್ಬ್ಸ್ ವಿಶ್ವದ ಪ್ರಭಾವಿ ವ್ಯಕ್ತಿಗಳ ಟಾಪ್ 10 ಪಟ್ಟಿ

ನ್ಯೂಯಾರ್ಕ್, ನ.05: ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆಗೊಳಿಸಿರುವ ವಿಶ್ವದ ಅತ್ಯಂತ ಪ್ರಬಲ ನಾಯಕರ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು 9ನೇ ಸ್ಥಾನ ಗಳಿಸಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ.

ನಂತರದ ಸ್ಥಾನವನ್ನು ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಪಡೆದಿದ್ದಾರೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮೂರನೇ ಸ್ಥಾನದಲ್ಲಿದ್ದರೆ, ಪೋಪ್ ಫ್ರಾನ್ಸಿಸ್ 4ನೇ ಸ್ಥಾನ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ 5ನೇ ಸ್ಥಾನ ಗಳಿಸಿದ್ದಾರೆ. [2014ರಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಮೋದಿ]

ಜನ ಸಮುದಾಯದ ಮೇಲೆ ಹೊಂದಿರುವ ಪ್ರಭಾವ, ಆರ್ಥಿಕ ಸಂಪನ್ಮೂಲದ ಮೇಲೆ ನಿಯಂತ್ರಣ,ದೇಶದ ಆರ್ಥಿಕ ಪ್ರಗತಿ ಜಿಡಿಪಿ ದರ, ಉದ್ಯಮಿಗಳಾದರೆ ಅವರ ಆಸ್ತಿ, ಆದಾಯ ಗಳಿಕೆ ಹೀಗೆ ವಿವಿಧ ವಿಷಯಗಳ ಆಧಾರದ ಮೇಲೆ ಪಟ್ಟಿ ತಯಾರಿಸಲಾಗಿದೆ. [ಬ್ಲೂಮ್ ಬರ್ಗ್ ಶ್ರೇಯಾಂಕದಲ್ಲಿ ಮೋದಿಗೆ 13ನೇ ಸ್ಥಾನ]

ಫೋರ್ಬ್ಸ್ ಪಟ್ಟಿಗೆ ಮೊದಲ ಬಾರಿಗೆ ಡೆಲ್ ಸಿಇಒ ಮೆಕೈಲ್ ಡೆಲ್ (ನಂ.59), ಚೀನಾದ ಶ್ರೀಮಂತ ವಾಂಗ್ ಜಿಯಾನ್ಲಿನ್(68), ಕೆನಡಾದ ಹೊಸ ಪ್ರಧಾನಿ ಜಸ್ಟಿನ್ ಟ್ರೂ ಡ್ಯೂ (69), ಬಿಲಿಯನೇರ್ ಕಾರ್ಲ್ ಇಕಾನ್ (70), ಯುಎಸ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (72) ಸೇರ್ಪಡೆಗೊಂಡಿದ್ದಾರೆ. ಫೋರ್ಬ್ಸ್ ವಿಶ್ವದ ಪ್ರಭಾವಿ ವ್ಯಕ್ತಿಗಳ ಟಾಪ್ 10 ಪಟ್ಟಿ ಮುಂದೆ ನೋಡಿ...

#1 ವ್ಲಾದಿಮಿರ್ ಪುಟಿನ್

#1 ವ್ಲಾದಿಮಿರ್ ಪುಟಿನ್

* ರಷ್ಯಾದ ಅಧ್ಯಕ್ಷ
* 63 ವರ್ಷ ವಯಸ್ಸು
* ರಷ್ಯಾದ ನಿವಾಸಿ
* ವಿವಾಹವಾಗಿ ವಿಚ್ಛೇದಿತ
* 2 ಮಕ್ಕಳು
* ವಿದ್ಯಾರ್ಹತೆ: ಡಾಕ್ಟರ್ ಆಫ್ ಜ್ಯೂರಿಸ್ ಪ್ರೂಡೆನ್ಸ್, ಸೈಂಟ್ ಪೀಟರ್ಸ್ ಬರ್ಗ್ ಸ್ಟೇಟ್ ಯೂನಿವರ್ಸಿಟಿ
2014ರಲ್ಲಿ #1

#2 ಏಂಜೆಲಾ ಮರ್ಕೆಲ್

#2 ಏಂಜೆಲಾ ಮರ್ಕೆಲ್

*ಜರ್ಮನಿಯ ಚಾನ್ಸೆಲರ್
* 61 ವರ್ಷ ವಯಸ್ಸು.
* ಜರ್ಮನಿಯ ಬರ್ಲಿನ್ ನಿವಾಸಿ
*ವಿವಾಹಿತೆ.
* ವಿದ್ಯಾರ್ಹತೆ: ಮಾಸ್ಟರ್ ಆಫ್ ಸೈನ್ಸ್, ಹಾಗೂ ಡಾಕ್ಟರೇಟ್ ಲಿಪ್ಜಿಗ್ ಯೂನಿರ್ವಸಿಟಿ
* ವಿಶ್ವದ ಪ್ರಭಾವಿ ಮಹಿಳೆ #2 (2015)
* 2014ರಲ್ಲಿ 5ನೇ ಸ್ಥಾನದಲ್ಲಿದ್ದರು.

#3 ಬರಾಕ್ ಒಬಾಮಾ

#3 ಬರಾಕ್ ಒಬಾಮಾ

* ಅಮೆರಿಕದ ಅಧ್ಯಕ್ಷ
* 54 ವರ್ಷ ವಯಸ್ಸು
* ವಿವಾಹಿತ, ಇಬ್ಬರು ಮಕ್ಕಳು
* ವಾಷಿಂಗ್ಟನ್ ಡಿಸಿಯಲ್ಲಿ ವಾಸ.
* ಬ್ಯಾಚುಲರ್ ಆಫ್ ಆರ್ಟ್ಸ್ ಅಂಡ್ ಸೈನ್, ಕೊಲಂಬಿಯಾ ಯೂನಿರ್ವಸಿಟಿ, ಹಾರ್ವಡ್ ವಿವಿಯಿಂದ ಡಾಕ್ಟರೇಟ್.
* 2014ರಲ್ಲಿ 2ನೇ ಸ್ಥಾನದಲ್ಲಿದ್ದರು.

#4 ಪೋಪ್ ಫ್ರಾನ್ಸಿಸ್

#4 ಪೋಪ್ ಫ್ರಾನ್ಸಿಸ್

* ರೋಮಿನ ಬಿಷಪ್, ರೋಮನ್ ಕ್ಯಾಥೋಲಿಕ್ ಚರ್ಚ್
* 78 ವರ್ಷ ವಯಸ್ಸು
* ವ್ಯಾಟಿಕನ್ ಸಿಟಿಯಲ್ಲಿ ವಾಸ
* 2014ರಲ್ಲೂ 4ನೇ ಸ್ಥಾನ ಪಡೆದಿದ್ದರು.

#5, ಕ್ಸಿ ಜಿನ್ ಪಿಂಗ್

#5, ಕ್ಸಿ ಜಿನ್ ಪಿಂಗ್

* ಪ್ರಧಾನ ಕಾರ್ಯದರ್ಶಿ, ಕಮ್ಯೂನಿಸ್ಟ್ ಪಾರ್ಟಿ ಚೀನಾ
* 62 ವರ್ಷ ವಯಸ್ಸು
* ಚೀನಾದ ಬೀಜಿಂಗ್ ನಿವಾಸಿ.
* ವಿವಾಹಿತ.
* ಬಿಎ ಆರ್ಟ್ಸ್ ಅಂಡ್ ಸೈನ್ಸ್, ಡಾಕ್ಟರೇಟ್ ತ್ಸಿಂಗುವಾ ವಿವಿ,
* 2014ರಲ್ಲಿ 3ನೇ ಸ್ಥಾನದಲ್ಲಿದ್ದರು.

#6 ಬಿಲ್ ಗೇಟ್ಸ್

#6 ಬಿಲ್ ಗೇಟ್ಸ್

* ಬಿಲ್ ಅಂಡ್ ಮಿಲಿಂಡಾ ಗೇಟ್ಸ್ ಫೌಂಡೇಷನ್ ಸಹ ಸ್ಥಾಪಕ
* 79.7 ಬಿಲಿಯನ್ ಡಾಲರ್ ಹೊಂದಿದ್ದಾರೆ.
* ಅದಾಯ ಮೂಲ, ಸ್ವಯಾರ್ಜಿತ ಹಾಗೂ ಮೈಕ್ರೋಸಾಫ್ಟ್ ಸಂಸ್ಥೆಯ ವೇತನ.
* 60 ವರ್ಷ ವಯಸ್ಸು.
* ವಿವಾಹಿತ. ಮೂವರು ಮಕ್ಕಳು
* ಹಾರ್ವಡ್ ವಿವಿ ಡ್ರಾಪ್ ಔಟ್
* 2014ರಲ್ಲಿ 7ನೇ ಸ್ಥಾನದಲ್ಲಿದ್ದರು.
* ಟೆಕ್ ಉದ್ಯಮಿಗಳ ಪಟ್ಟಿಯಲ್ಲಿ 2015ರಲ್ಲಿ ನಂ.1
* ಕೋಟ್ಯಧಿಪತಿಗಳ ಪಟ್ಟಿಯಲ್ಲಿ ನಂ.1

#7 ಜಾನೆಟ್ ಯೆಲೆನ್

#7 ಜಾನೆಟ್ ಯೆಲೆನ್

* ಫೆಡೆರಲ್ ರಿಸರ್ವ್, ವಾಷಿಂಗ್ಟನ್, ಯುಎಸ್ಎ
* 69 ವರ್ಷ ವಯಸ್ಸು.
* ವಾಷಿಂಗ್ಟನ್, ಡಿಸಿ ನಿವಾಸಿ.
* ವಿವಾಹಿತೆ
* ಬಿಎ, ಬ್ರೌನ್ ವಿವಿ, ಡಾಕ್ಟರೇಟ್ ಯೇಲ್ ವಿವಿ
* 2014ರಲ್ಲಿ 6ನೇ ಸ್ಥಾನದಲ್ಲಿದ್ದರು.
* 2015ರ ಮಹಿಳಾ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

#8 ಡೇವಿಡ್ ಕ್ಯಾಮರೂನ್

#8 ಡೇವಿಡ್ ಕ್ಯಾಮರೂನ್

* ಯುನೈಟೆಡ್ ಕಿಂಗ್ಡಮ್ ಪ್ರಧಾನಿ
* 49ವರ್ಷ ವಯಸ್ಸು.
* ಲಂಡನ್, ಯುಕೆ ನಿವಾಸಿ
* ವಿವಾಹಿತ, ನಾಲ್ಕು ಮಕ್ಕಳು
* ಮಾಸ್ಟರ್ ಆಫ್ ಸೈನ್ಸ್, ಆಕ್ಸ್ ಫರ್ಡ್ ವಿವಿ
* 2014ರಲ್ಲಿ 10ನೇ ಸ್ಥಾನದಲ್ಲಿದ್ದರು.

#9 ನರೇಂದ್ರ ಮೋದಿ

#9 ನರೇಂದ್ರ ಮೋದಿ

* ಭಾರತದ ಪ್ರಧಾನಿ
* 65 ವರ್ಷ ವಯಸ್ಸು
* ನವದೆಹಲಿಯ ನಿವಾಸಿ
* ಪತ್ನಿಯಿಂದ ಪ್ರತ್ಯೇಕವಾಗಿ ಬದುಕು
* ಬಿ.ಎ ದೆಹಲಿ ವಿವಿ, ಮಾಸ್ಟರ್ ಆಫ್ ಆರ್ಟ್ಸ್, ಗುಜರಾತ್ ವಿವಿ
* 2014ರಲ್ಲಿ 15ನೇ ಸ್ಥಾನದಲ್ಲಿದ್ದರು.
* ದೇಶದ ಜಿಡಿಪಿ ಶೇ 7.4ಕ್ಕೇರಲು ಶ್ರಮಿಸಿದ್ದಾರೆ. 120 ಕೋಟಿ ಜನಸಂಖ್ಯೆಯ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.

#10 ಲ್ಯಾರಿ ಪೇಜ್

#10 ಲ್ಯಾರಿ ಪೇಜ್

* ಗೂಗಲ್ ಸಂಸ್ಥೆ ಸಿಇಒ
* 37.6 ಬಿಲಿಯನ್ ಡಾಲರ್ ಹೊಂದಿದ್ದಾರೆ.
* 42 ವರ್ಷ ವಯಸ್ಸು
* ಪಾಲೋ ಆಲ್ಟೋ ನಿವಾಸಿ.
* ಯುನೈಟೆಡ್ ಸ್ಟೇಟ್ಸ್ ಪೌರತ್ವ.
* ವಿವಾಹಿತ,
* ಬ್ಯಾಚುಲರ್ ಆಫ್ ಆರ್ಟ್ ಅಂಡ್ ಸೈನ್ಸ್ ಮಿಚಿಗನ್ ವಿವಿ, ಮಾಸ್ಟರ್ಸ್ ಸ್ಟಾನ್ ಫರ್ಡ್ ವಿವಿ
* 2014ರಲ್ಲಿ 9ನೇ ಸ್ಥಾನ
2015ರಲ್ಲಿ ಟೆಕ್ ಉದ್ಯಮಿಗಳ ಪಟ್ಟಿಯಲ್ಲಿ 5ನೇ ಸ್ಥಾನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+