• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಟಲಿಯಲ್ಲಿ ಐರೋಪ್ಯ ಒಕ್ಕೂಟಗಳ ಜತೆ ಚರ್ಚೆ ನಡೆಸಿದ ಮೋದಿ

|
Google Oneindia Kannada News

ಇಟಲಿ ಹಾಗೂ ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಐರೋಪ್ಯ ಒಕ್ಕೂಟ ರಾಷ್ಟ್ರಗಳ ನಾಯಕರ ಜತೆ ವಾಣಿಜ್ಯ, ವ್ಯವಹಾರ, ಸಂಸ್ಕೃತಿ ಹಾಗೂ ಪರಿಸರಕ್ಕೆ ಸಂಬಂಧಿಸಿದ ಚರ್ಚೆ ನಡೆಸಿದರು.

ಈ ವೇಳೆ ಇಂಡೋ - ಪೆಸಿಫಿಕ್‌ ಸಾಗರ ಪ್ರಾಂತ್ಯದಲ್ಲಿ ಮುಕ್ತ ವ್ಯಾಪಾರ ಅಗತ್ಯ ಮತ್ತು ಪೂರಕ ಮೂಲ ಸೌಕರ್ಯ ಅಭಿವೃದ್ಧಿಗಳ ಬಗ್ಗೆ ನಾಯಕರು ರೂಪುರೇಷೆ ಸಿದ್ಧಪಡಿಸಿಕೊಂಡು ಮುಂದುವರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

G20 Summit: ರೋಮ್‌ಗೆ ಬಂದಿಳಿದ ಪ್ರಧಾನಿ ಮೋದಿG20 Summit: ರೋಮ್‌ಗೆ ಬಂದಿಳಿದ ಪ್ರಧಾನಿ ಮೋದಿ

ಐರೋಪ್ಯ ಒಕ್ಕೂಟ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಒಯ್ಯಲು ಎಲ್ಲ ರೀತಿಯ ಸಹಕಾರವನ್ನು ನೀಡಲು ಸಿದ್ಧ ಎಂದು ಐರೋಪ್ಯ ಒಕ್ಕೂಟದ ನಾಯಕರು ಪ್ರಧಾನಿ ಮೋದಿ ಅವರಿಗೆ ಭರವಸೆ ಕೊಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಐರೋಪ್ಯ ಒಕ್ಕೂಟದ ಪ್ರತಿನಿಧಿಗಳು ಭಾರತದಲ್ಲಿ ಕೊರೊನಾ ತಡೆ ಲಸಿಕೆಯ 100 ಕೋಟಿ ಪೂರೈಕೆ ಸಾಧನೆ, ಇತರ ದೇಶಗಳಿಗೂ ಲಸಿಕೆಗಳನ್ನು ರಫ್ತುಮಾಡಿ ಭಾರತ ನೀಡಿದ ನೆರವಿಗೆ ಮುಕ್ತ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಉಳಿದಂತೆ, ಅಫ್ಘಾನಿಸ್ತಾನದಲ್ಲಿ ರಾಜಕೀಯ ಸ್ಥಿತಿಗತಿಗಳ ಬದಲಾವಣೆ, ಹವಾಮಾನ ವೈಪರೀತ್ಯ ನಿಯಂತ್ರಣ, ಹೂಡಿಕೆಗೆ ಉತ್ತೇಜನ ವಿಚಾರಗಳು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅರಿಂದಮ್‌ ಬಾಗ್ಚಿ ಹೇಳಿದ್ದಾರೆ.

ಜಿ20 ಶೃಂಗಸಭೆಯಲ್ಲಿ ಭಾಗಿ: ಶನಿವಾರ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿನ್ ಅವರನ್ನು ಭೇಟಿಯಾಗಲಿದ್ದಾರೆ. ಬಳಿಕ 16ನೇ ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಿ ಜಾಗತಿಕ ವಿದ್ಯಾಮಾನಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ಬೆಳಗ್ಗೆ 8.30 ರಿಂದ 30 ನಿಮಿಷಗಳ ಭೇಟಿ ನಿಗದಿಯಾಗಿದೆ. ಈ ವೇಳೆ ಕ್ಯಾಥೊಲಿಕ್‌ ಚರ್ಚ್‌ನ ಮುಖ್ಯಸ್ಥರಾದ ಕಾರ್ಡಿನಲ್‌ ಪೀಟ್ರೋ ಪರೊಲಿನ್‌ ಸಹ ಉಪಸ್ಥಿತರಿರಲಿದ್ದಾರೆ.

ನವೆಂಬರ್ 1-2ರಂದು ಬ್ರಿಟನ್‌ಗೆ ಮೋದಿ ಭೇಟಿ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಹ್ವಾನದ ಹಿನ್ನೆಲೆಯಲ್ಲಿ ಜಿ-20 ಶೃಂಗದ ಬಳಿಕ ಮೋದಿ ನವೆಂಬರ್ 1-2ಕ್ಕೆ ಬ್ರಿಟನ್‌ನ ಗ್ಲಾಸ್ಗೋ ನಗರಕ್ಕೆ ಭೇಟಿ ನೀಡಲಿದ್ದಾರೆ.

ಭಾರತೀಯರ ಸ್ವಾಗತ: ರೋಮ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಭಾರತೀಯ ಮೂಲದ ಇಟಲಿ ನಿವಾಸಿಗರು ಆತ್ಮೀಯವಾಗಿ ಬರಮಾಡಿಕೊಂಡರು.
ಏರ್‌ಪೋರ್ಟ್‌ನಲ್ಲಿ ಮೋದಿ ಅವರ ಸ್ವಾಗತಕ್ಕೆ ದೊಡ್ಡ ತಂಡವೇ ಸೇರಿತ್ತು.

ಅಲ್ಲಿಂದ ಮೋದಿ ಅವರು ಪಿಯಾಜ್ಜಾ ಗಾಂಧಿ ಉದ್ಯಾನದಲ್ಲಿರುವ ಮಹಾತ್ಮ ಗಾಂಧೀಜಿ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಉದ್ಯಾನದಲ್ಲಿ ನೆರೆದಿದ್ದ ಭಾರತೀಯರು, ಎನ್‌ಆರ್‌ಗಳೊಂದಿಗೆ ಕೆಲ ಕಾಲ ಮೋದಿ ಅವರು ಚರ್ಚೆ ನಡೆಸಿದರು.

ಜಿ20 ಶೃಂಗಸಭೆಗಾಗಿ ಇಟಲಿಗೆ ಭೇಟಿ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್​ 31ರವರೆಗೆ ಅಲ್ಲಿಯೇ ಇರಲಿದ್ದಾರೆ. ಈ ವೇಳೆ ವ್ಯಾಟಿಕನ್​ ನಗರಕ್ಕೂ ಭೇಟಿ ನೀಡುವರು. ನಂತರ ಅಲ್ಲಿಂದ ಯುಕೆ (ಇಂಗ್ಲೆಂಡ್​)ಗೆ ತೆರಳುವರು. ಇನ್ನು ರೋಮ್​​ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಅವರು, ಕೊರೊನಾ ಸಾಂಕ್ರಾಮಿಕದಿಂದ ಆರೋಗ್ಯ ಚೇತರಿಕೆ ಮತ್ತು ಜಾಗತಿಕ ಆರ್ಥಿಕತೆ ಚೇತರಿಕೆ ಕಾಣುತ್ತಿರುವ ಬಗ್ಗೆ ಮಾತನಾಡಲಿದ್ದಾರೆ. ನಂತರ ಯುಕೆಯ ಗ್ಲಾಸ್ಗೋದಲ್ಲಿ, ಹವಾಮಾನ ವೈಪರಿತ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯತೆಯ ಬಗ್ಗೆ ಸಮಗ್ರವಾಗಿ ಮಾತನಾಡಲಿದ್ದಾರೆ.

English summary
Prime Minister Narendra Modi on Friday held a joint meeting with President of the European Council Charles Michel and President of the European Commission Ursula von der Leyen here and discussed ways to enhance economic as well as people-to-people linkages aimed at creating a better planet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X