ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ವಾಡ್ ಸಮ್ಮೇಳನದಲ್ಲಿ ಮೋದಿ ಕಂಡು ಖುಷಿ ಆಯಿತು ಎಂದ ಬೈಡನ್

|
Google Oneindia Kannada News

ನವದೆಹಲಿ, ಮಾರ್ಚ್.12: "ಪ್ರಧಾನಮಂತ್ರಿ ನರೇಂದ್ರ ಮೋದಿ.. ನಿಮ್ಮನ್ನು ನೋಡುವುದಕ್ಕೆ ತುಂಬಾ ಖುಷಿಯಾಗುತ್ತಿದೆ", ಹೀಗೆ ಕ್ವಾಡ್ ರಾಷ್ಟ್ರಗಳ ಮೊದಲ ಸಮ್ಮೇಳನದಲ್ಲಿ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಅವರು ಸ್ವಾಗತಿಸುತ್ತಿದ್ದಂತೆ ಪ್ರಧಾನಿ ಮೋದಿ ಕೂಡ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಕ್ವಾಡ್ ಸಮ್ಮೇಳನದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್, ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಮತ್ತು ಜಪಾನಿ ಪ್ರಧಾನಮಂತ್ರಿ ಯೋಶಿಹೈಡ್ ಸುಗಾ ಮತ್ತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದರು.

ಇಂದು ನಾಲ್ಕು ದೇಶಗಳ ಮೊದಲ 'ಕ್ವಾಡ್' ಸಮ್ಮೇಳನ: ಅಮೆರಿಕದ ಲಸಿಕೆ ಭಾರತದಲ್ಲಿ ಉತ್ಪಾದನೆಇಂದು ನಾಲ್ಕು ದೇಶಗಳ ಮೊದಲ 'ಕ್ವಾಡ್' ಸಮ್ಮೇಳನ: ಅಮೆರಿಕದ ಲಸಿಕೆ ಭಾರತದಲ್ಲಿ ಉತ್ಪಾದನೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಚೀನಾದಲ್ಲಿ ಬೆಳೆಯುತ್ತಿರುವ ಮಿಲಿಟರಿ ಪಡೆಯ ಸಾಮರ್ಥ್ಯ ಮತ್ತು ಆರ್ಥಿಕ ಶಕ್ತಿಯನ್ನು ಸಮತೋಲಗೊಳಿಸುವ ನಿಟ್ಟಿನಲ್ಲಿ ಕ್ವಾಡ್ ಒಕ್ಕೂಟ ರಾಷ್ಟ್ರಗಳ ನಾಯಕರು ಚರ್ಚೆ ನಡೆಸಿದರು.

PM Modi, Great To See You, US President Joe Biden Says At Quad Summit

ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಮಾತು:

ಕ್ವಾಡ್ ಒಕ್ಕೂಟದ ನಾಲ್ಕು ಸದಸ್ಯ ರಾಷ್ಟ್ರಗಳ ಭವಿಷ್ಯಕ್ಕೆ ಮುಕ್ತವಾಗಿದ್ದು, ಇಂಡೋ-ಪೆಸಿಫಿಕ್ ಪ್ರದೇಶವನ್ನು ಮುಕ್ತಗೊಳಿಸಲು ಅತ್ಯಗತ್ಯ ಎಂದು ಅಮೆರಿಕಾ ಅಧ್ಯಕ್ಷ ಜೋ ಬಿಡನ್ ಹೇಳಿದರು. ಸ್ಥಿರತೆ ಸಾಧಿಸಲು ನಿಮ್ಮೊಂದಿಗೆ, ನಮ್ಮ ಪಾಲುದಾರರೊಂದಿಗೆ ಮತ್ತು ಈ ಪ್ರದೇಶದ ನಮ್ಮ ಎಲ್ಲ ಮಿತ್ರರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಯುನೈಟೆಡ್ ಸ್ಟೇಟ್ಸ್ ಬದ್ಧವಾಗಿದೆ" ಎಂದು ಜೋ ಬಿಡೆನ್ ಅವರು ಸಭೆಗೆ ತಿಳಿಸಿದರು.

ಕ್ವಾಡ್ ಒಂದು ಜಾಗತಿಕ ಶಕ್ತಿ ಎಂದ ಪ್ರಧಾನಿ ಮೋದಿ:

ಕೊರೊನಾವೈರಸ್ ಸೋಂಕಿನ ಲಸಿಕೆ ವಿತರಣೆ, ಹವಾಮಾನದಲ್ಲಿನ ಬದಲಾವಣೆ, ಉದಯೋನ್ಮುಖ ತಂತ್ರಜ್ಞಾನ ಮತ್ತು ಕಾರ್ಯಸೂಚಿಗೆ ಕ್ವಾಡ್ ಒಂದು ಜಾಗತಿಕ ಶಕ್ತಿಯಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಇಂಡೋ-ಪೆಸಿಫಿಕ್‌ಗೆ ಸಂಬಂಧಿಸಿದಂತೆ ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳು, ಮುಕ್ತ ಮತ್ತು ಅಂತರ್ಗತ ವಿಷಯಗಳಿಗೆ ಬದ್ಧತೆಯಿಂದ ನಾವು ಒಂದಾಗಿದ್ದೇವೆ ಎಂದರು. "ಸಕಾರಾತ್ಮಕ ದೃಷ್ಟಿಕೋನವನ್ನು ಭಾರತದ ಪ್ರಾಚೀನ ತತ್ತ್ವಶಾಸ್ತ್ರದ ವಾಸುದೈವ ಕುತುಂಬಕಂನ ವಿಸ್ತರಣೆಯಾಗಿ ನಾನು ನೋಡುತ್ತೇನೆ. ಅದು ಇಡೀ ಜಗತ್ತನ್ನು ಒಂದೇ ಕುಟುಂಬ ಎಂಬಂತೆ ಪರಿಗಣಿಸುತ್ತದೆ" ಎಂದು ಪ್ರಧಾನಿ ಮೋದಿ ತಿಳಿಸಿದರು.

English summary
PM Modi, Great To See You, US President Joe Biden Says At Quad Summit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X