ವಿಶ್ವದ ಅತ್ಯಂತ ಸುಂದರ ಭಾಷೆ ತಮಿಳು, ಫ್ರಾನ್ಸ್‌ನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ: ಪ್ರಧಾನಿ ಮೋದಿ ಘೋಷಣೆ

ಪ್ಯಾರಿಸ್‌, ಜುಲೈ 14: ಪ್ರಾನ್ಸ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ತಮಿಳು ಬಾಷೆ ಹಾಗೂ ಸಂಸ್ಕೃತಿಯನ್ನು ಹಾಡಿ ಹೊಗಳಿದ್ದಾರೆ. ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿರುವ ಅವರು ವಿಶ್ವದ ಅತ್ಯಂತ ಸುಂದರ ಭಾಷೆ ತಮಿಳು ಎಂದು ಬಣ್ಣಿಸಿದ್ದಾರೆ.

ತಮಿಳು ಕಲ್ಚರಲ್ ಅಸೋಸಿಯೇಷನ್ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.

ತಮಿಳಿನ ಮಹಾಕವಿ ಹಾಗೂ ತತ್ವಜ್ಞಾನಿ ತಿರುವಳ್ಳುವರ್ ಬಗ್ಗೆಯೂ ಮಾತನಾಡಿರುವ ಮೋದಿ, ಫ್ರಾನ್ಸ್‌ನಲ್ಲಿ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

PM Modi France Visit

ತಿರುವಳ್ಳುವರ್‌ ಪ್ರತಿಮೆ ಮೂಲಕ ಫ್ರಾನ್ಸ್‌ನಲ್ಲಿ ತಮಿಳು ಭಾಷೆ ಹಾಗೂ ಸಂಸ್ಕೃತಿಯ ಮಹತ್ವವನ್ನು ತಿಳಿಸಿಕೊಡಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ತಿರುವಳ್ಳುವರ್ ಮಹತ್ವದ ಕೊಡುಗೆಗಳನ್ನು ಸ್ಮರಿಸಿರುವ ಮೋದಿ, ತಮಿಳು ಪ್ರಪಂಚದ ಅತ್ಯಂತ ಹಳೆಯ ಭಾಷೆ ಹಾಗೂ ವಿಶ್ವದ ಅತಿ ಸುಂದರ ಭಾಷೆ ಎಂದು ಮೋದಿ ಶ್ಲಾಘಿಸಿದ್ದಾರೆ.

ತಿರುವಳ್ಳುವರ್‌ ಭಾರತದ ಹೆಮ್ಮೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ತಿರುವಳ್ಳುವರ್ ಪ್ರತಿಮೆಯು ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ತಮಿಳು ಸಾಹಿತ್ಯ ಮತ್ತು ತತ್ವಶಾಸ್ತ್ರದ ಶ್ರೀಮಂತ ಪರಂಪರೆಯನ್ನು ಎತ್ತಿಹಿಡಿಯುತ್ತದೆ ಎಂದು ಅವರು ಹೇಳಿದ್ದಾರೆ.

PM Modi France Visit

ಕೆಲವೇ ತಿಂಗಳುಗಳಲ್ಲಿ, ಫ್ರಾನ್ಸ್‌ನ ಸೆರ್ಗೆ ಪ್ರಾಂತ್ಯದಲ್ಲಿ ಸಂತ ತಿರುವಳ್ಳುವರ್ ಅವರ ಪ್ರತಿಮೆ ಇರಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಈ ಘೋಷಣೆಯಾಗುತ್ತಿದಂತೆ ಅನಿವಾಸಿ ಭಾರತೀಯರು ಚಪ್ಪಾಳೆ ತಟ್ಟುವ ಮೂಲಕ ಶ್ಲಾಘಿಸಿದ್ದಾರೆ.

ತನ್ನ ಮಗುವನ್ನು ಹೊಗಳಿದಾಗ ತಾಯಿ ಹೇಗೆ ಸಂತೋಷಪಡುತ್ತಾಳೆ ಎಂಬ ತಿರುವಳ್ಳುವರ್ ಅವರ ಕವಿತೆಯನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.

ಜಗತ್ತು ನಿಮ್ಮನ್ನು ಹೊಗಳಿದಾಗ, 'ತಾಯಿ ಭಾರತಿ' ಅದೇ ರೀತಿಯ ಸಂತೋಷವನ್ನು ಅನುಭವಿಸುತ್ತಾಳೆ ಎಂದು ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+