ಮನೆಯ ನೆಲಮಾಳಿಗೆಯಲ್ಲಿ ಪ್ಲಂಬರ್‌ಗೆ ಸಿಕ್ಕಿತು 20 ಕೋಟಿ ರೂ. ಮೌಲ್ಯದ ಚಿನ್ನದ ನಿಧಿ

ನಾವೆಲ್ಲರೂ ಚಿಕ್ಕವರಿದ್ದಾಗ ಮನೆಯ ಹಿರಿಯರು ಹೇಳುವ ನಿಧಿ ಶೋಧನೆಯ ಕಥೆಗಳನ್ನಾ ತುಂಬ ಉತ್ಸಾಹದಿಂದ ಕೇಳಿರುತ್ತೇವೆ. ಇವೆಲ್ಲ ಕಥೆಯಲ್ಲಷ್ಟೇ ನಡೆಯುವುದು ಎಂದು ನಾವು ನಂಬಿರುತ್ತೇವೆ. ಇದು ಸತ್ಯ ಕೂಡ. ಆದರೆ ಕೆಲವೊಮ್ಮೆ ಅಂದರೆ ತೀರಾ ಅಪರೂಪ ಎನ್ನುವಂತೆ ನಿಜ ಜೀವನದಲ್ಲಿಯೂ ಇಂತಹ ಘಟನೆಗಳು ನಡೆಯುತ್ತದೆ.

ಹೌದು, ಇತ್ತೀಚೆಗೆ ಆಸ್ಟ್ರಿಯಾದ ವಿಯೆನ್ನಾದಲ್ಲಿ ಪ್ಲಂಬರ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಇಂಥದ್ದೇ ಒಂದು ಅದೃಷ್ಟ ಒಲಿದುಬಂದಿದೆ ನೋಡಿ. ಮನೆಯೊಂದರ ನೆಲಮಾಳಿಗೆಯನ್ನ ನವೀಕರಣ ಮಾಡುತ್ತಿದ್ದಾಗ, ಬರೋಬ್ಬರಿ 2.4 ಮಿಲಿಯನ್ ಡಾಲರ್ ಅಂದರೆ ಅಂದಾಜು 20 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನದ ನಿಧಿ ಪತ್ತೆಯಾಗಿದೆ. ಇದು ಕೇವಲ ಕಥೆಯಲ್ಲ, ಬದಲಿಗೆ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದ ಪೆನ್ಜಿಂಗ್ ಪ್ರದೇಶದಲ್ಲಿ ನಡೆದ ನಿಜವಾದ ಘಟನೆ.

Plumber

ನೆಲಮಾಳಿಗೆಯ ಕಾಂಕ್ರೀಟ್ ಒಳಗೆ ಅಡಗಿದ್ದ ಚಿನ್ನದ ನಿಧಿ

ವಿಯೆನ್ನಾದ ವಿಲ್ಲಾವೊಂದರ ನೆಲಮಾಳಿಗೆಯಲ್ಲಿ ನವೀಕರಣ ಕೆಲಸ ಆಗುತ್ತಿತ್ತು. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಪ್ಲಂಬರ್ ಒಬ್ಬರ ಕಣ್ಣಿಗೆ, ಕಾಂಕ್ರೀಟ್ ನೆಲದಿಂದ ಹೊರಬಂದಿದ್ದ ಒಂದು ವಿಚಿತ್ರವಾದ ಹಗ್ಗ ಕಂಡಿದೆ. ನಂತರ ಇದ್‌ ಎನ್‌ ಹಗ್ಗ ಎಂದು ಕುತೂಹಲಗೊಂಡು ಆ ಹಗ್ಗವನ್ನ ಏಳೆದಿದ್ದಾರೆ. ಆದರೆ, ಅದು ಅಷ್ಟು ಸುಲಭಕ್ಕೆ ಮೇಲೆ ಬಾರದಿದ್ದಾಗ, ಸಲಿಕೆ ಬಳಸಿ ಕಾಂಕ್ರೀಟ್ ನೆಲವನ್ನು ಅಗೆದಿದ್ದಾರೆ. ಆಗ ಅವರ ಕಣ್ಣಿಗೆ ತುಕ್ಕು ಹಿಡಿದಿದ್ದ ಒಂದು ಹಳೆಯ ಲೋಹದ ಪೆಟ್ಟಿಗೆ ಬಿದ್ದಿದೆ. ಆ ಪೆಟ್ಟಿಗೆಯನ್ನ ತೆರೆದು ನೋಡಿದಾಗ, ಅದರೊಳಗಿದ್ದ ಕಂಡು ಅವರು ಅಕ್ಷರಶಃ ದಂಗಾಗಿದ್ದಾರೆ. ಪೆಟ್ಟಿಗೆಯ ತುಂಬಾ ಬರೋಬ್ಬರಿ 30 ಕೆ.ಜಿ (66 ಪೌಂಡ್) ತೂಕದ ಚಿನ್ನದ ನಾಣ್ಯಗಳು ತುಂಬಿದ್ದವು.

ಮೊಜಾರ್ಟ್ ಚಿತ್ರವಿರುವ ಎರಡನೇ ಮಹಾಯುದ್ಧದ ಕಾಲದ ನಾಣ್ಯಗಳು

ತಜ್ಞರು ಈ ಚಿನ್ನದ ನಾಣ್ಯಗಳನ್ನ ಪರಿಶೀಲಿಸಿದಾಗ, ಇವು ಎರಡನೇ ಮಹಾಯುದ್ಧದ ಪೂರ್ವದ ಕಾಲಕ್ಕೆ ಸೇರಿದ ಅಪರೂಪದ ನಾಣ್ಯಗಳು ಎಂಬುದು ಖಚಿತವಾಗಿದೆ. ಪ್ರತಿಯೊಂದು ನಾಣ್ಯದ ಮೇಲೂ ಪ್ರಸಿದ್ಧ ಸಂಗೀತ ಸಂಯೋಜಕ 'ಮೊಜಾರ್ಟ್' ಅವರ ಭಾವಚಿತ್ರವನ್ನ ಮುದ್ರಿಸಲಾಗಿದೆ. "ನಾನು 15 ವರ್ಷದವನಿದ್ದಾಗಿನಿಂದಲೂ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಕೆಲವೊಮ್ಮೆ ಒಂದೆರಡು ಹಳೆಯ ನಾಣ್ಯಗಳು ಸಿಗುವುದುಂಟು. ಆದರೆ ಇಷ್ಟು ದೊಡ್ಡ ಪ್ರಮಾಣದ ನಿಧಿ ಸಿಕ್ಕಿರುವುದು ನಿಜಕ್ಕೂ ನಂಬಲಾಗುತ್ತಿಲ್ಲ," ಎಂದು ಈ ಅದೃಷ್ಟಶಾಲಿ ಪ್ಲಂಬರ್ ಜರ್ಮನ್ ಟಿವಿ ಶೋ ಒಂದರಲ್ಲಿ ತಮ್ಮ ಸಂತಸವನ್ನ ಹಂಚಿಕೊಂಡಿದ್ದಾರೆ.

ಯಾರ ಪಾಲಾಗುತ್ತದೆ ಈ ನಿಧಿ?

ಈ ಘಟನೆಯಲ್ಲಿ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಈ ನಿಧಿ ಸಿಕ್ಕ ಜಾಗ ಪ್ಲಂಬರ್‌ಗೆ ಸೇರಿದ್ದಲ್ಲದಿದ್ದರೂ, ಆಸ್ಟ್ರಿಯಾದ ಕಾನೂನಿನ ಪ್ರಕಾರ ನಿಧಿಯ ಅರ್ಧ ಭಾಗ ಪ್ಲಂಬರ್‌ಗೆ ಸೇರಲಿದೆ. ಅಲ್ಲಿನ ವಿಶೇಷ ಕಾನೂನಿನ ಪ್ರಕಾರ, ಇಂತಹ ನಿಧಿಗಳು ಪತ್ತೆಯಾದಾಗ ಅದನ್ನ ಆಸ್ತಿಯ ಮಾಲೀಕರು ಹಾಗೂ ನಿಧಿ ಪತ್ತೆ ಮಾಡಿದ ವ್ಯಕ್ತಿ ಸಮಾನವಾಗಿ ಹಂಚಿಕೊಳ್ಳಬೇಕು. ಹೀಗಾಗಿ 20 ಕೋಟಿ ರೂ. ಮೌಲ್ಯದ ಚಿನ್ನದಲ್ಲಿ 10 ಕೋಟಿ ರೂ. ಈ ಪ್ಲಂಬರ್ ಪಾಲಾಗಲಿದೆ. ಅಚ್ಚರಿಯೆಂದರೆ, ಈ ಪ್ಲಂಬರ್ ಕೆಲಸ ಆರಂಭಿಸುವ ಕೆಲವು ದಿನಗಳ ಮೊದಲು ಬೇರೊಬ್ಬ ಕಾರ್ಮಿಕ ಈ ಹಗ್ಗವನ್ನು ನೋಡಿದ್ದರೂ, ಅದನ್ನು ನಿರ್ಲಕ್ಷಿಸಿ ಹೋಗಿದ್ದನಂತೆ. ಆತನ ಈ ಒಂದು ಸಣ್ಣ ನಿರ್ಲಕ್ಷ್ಯ ಈ ಪ್ಲಂಬರ್‌ಗೆ ವರದಾನವಾಗಿದೆ ಅಷ್ಟೇ.

ಯುರೋಪ್‌ನಾದ್ಯಂತ ಅಪರೂಪದ ನಿಧಿಗಳ ಶೋಧನೆ

ಕೇವಲ ಆಸ್ಟ್ರಿಯಾದಲ್ಲಿ ಮಾತ್ರವಲ್ಲ, ಯುರೋಪ್‌ನಾದ್ಯಂತ ಇಂತಹ ಹಳೆಯ ನಾಣ್ಯಗಳು ಹಾಗೂ ನಿಧಿಗಳು ಪತ್ತೆಯಾಗುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಬ್ರಿಟನ್‌ನಲ್ಲಿ ಮೆಟಲ್ ಡಿಟೆಕ್ಟರ್ ಬಳಸುತ್ತಿದ್ದ ಏಳು ಜನರ ಗುಂಪಿಗೆ ರೈತನೊಬ್ಬನ ಜಮೀನಿನಲ್ಲಿ ಕ್ರಿ.ಶ. 1066 - 1088ರ ಕಾಲದ 5.6 ಮಿಲಿಯನ್ ಡಾಲರ್ ಮೌಲ್ಯದ 2,584 ಬೆಳ್ಳಿ ನಾಣ್ಯಗಳು ಸಿಕ್ಕಿದ್ದವು. ಇಂಗ್ಲೆಂಡ್‌ನಲ್ಲಿ ದಂಪತಿಯೊಬ್ಬರು 17ನೇ ಶತಮಾನದ ಕಟ್ಟಡ ನವೀಕರಿಸುವಾಗ 100 ನಾಣ್ಯಗಳನ್ನು ಪತ್ತೆ ಮಾಡಿದ್ದರು.

ಇಟಲಿಯಲ್ಲಿ ಸಮುದ್ರದ ಆಳದಲ್ಲಿ 30,000 ತಾಮ್ರ ಮತ್ತು ಕಂಚಿನ ನಾಣ್ಯಗಳು ಪತ್ತೆಯಾಗಿದ್ದವು. ಅದೇ ರೀತಿ ನೈಋತ್ಯ ಜರ್ಮನಿಯಲ್ಲೂ ಪೈಪ್ ಅಳವಡಿಸುವಾಗ 1320ರ ಕಾಲದ 1,600 ನಾಣ್ಯಗಳು ಸಿಕ್ಕಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+