Planet Jupiter: ಮನುಷ್ಯರ ಲೆಕ್ಕಾಚಾರ ತಪ್ಪು, ಗುರುಗ್ರಹ ಗಾತ್ರದ ಬಗ್ಗೆ ಅದ್ಭುತ ಮಾಹಿತಿ ಇಲ್ಲಿದೆ
ಗುರುಗ್ರಹ ಒಂದು ರೀತಿಯಲ್ಲಿ ಮನುಷ್ಯರ ದೃಷ್ಟಿಯನ್ನು ಸಾವಿರಾರು ವರ್ಷಗಳಿಂದಲೂ ಹಿಡಿದು ಎಳೆದು ತನ್ನೊಳಗೆ ಬಂಧಿಸಿಕೊಂಡಿದೆ. ಮನುಷ್ಯರು ಬರಿಗಣ್ಣಲ್ಲಿ ನೋಡಿ ಗುರುತು ಹಿಡಿಯಬಹುದಾದ ಕೆಲವೇ ಕೆಲವು ಗ್ರಹಗಳ ಪೈಕಿ ನಮ್ಮ ಸೌರಮಂಡಲದ ಗುರುಗ್ರಹ ಕೂಡ ಒಂದಾಗಿದೆ. ಹೀಗಿದ್ದಾಗ ನಾಗರಿಕತೆ ಜೊತೆ ಜೊತೆಗೆ ಗುರುಗ್ರಹದ ಬಗ್ಗೆ ಕುತೂಹಲ ಕೂಡ ಬೆಳೆಯುತ್ತಲೇ ಬಂದಿದೆ. ಅದರಲ್ಲೂ ಆಧುನಿಕ ವಿಜ್ಞಾನ ಜಗತ್ತು ಸೌರಮಂಡಲದ ಅತಿದೊಡ್ಡ ಗ್ರಹದ ಮೇಲೆ ನೂರಾರು ಸಂಶೋಧನೆ ನಡೆಸುತ್ತಿದೆ. ಇದೇ ಸಮಯದಲ್ಲಿ 'ಜುನೋ' ಎಂಬ ಅದ್ಭುತ ಯೋಜನೆ ಈಗ ಮಹತ್ವದ ಮಾಹಿತಿ ಬಿಚ್ಚಿಟ್ಟಿದೆ.
ಸೌರಮಂಡಲ ಸಾವಿರಾರು ಕೋಟಿ ಜೀವಿಗಳ ಆಶ್ರಯತಾಣ, ಆದರೆ ಈವರೆಗೂ ಭೂಮಿಯಲ್ಲಿ ಮಾತ್ರ ಜೀವಿಗಳು ಕಂಡುಬಂದಿವೆ. ಹೀಗಿದ್ದಾಗ ಅನಿಲ ದೈತ್ಯ ಎಂದು ಕರೆಯಲ್ಪಡುವ ಗುರುಗ್ರಹ ಭವಿಷ್ಯದ ನಕ್ಷತ್ರ ಎಂದು ಬಿಂಬಿಸಲಾಗುತ್ತಿದೆ, ಏಕೆಂದರೆ ಸೂರ್ಯ ರೂಪುಗೊಂಡ ರೀತಿಯೇ ಗುರುಗ್ರಹದಲ್ಲಿ ಕೂಡ ಪ್ರಕ್ರಿಯೆಗಳು ನಡೆಯುತ್ತಿವೆ ಎಂಬುದು ವಿಜ್ಞಾನಿಗಳ ವಿವರಣೆ. ಹೀಗಿದ್ದಾಗ ದಿಢೀರ್ ಈ ಗ್ರಹದ ಗಾತ್ರದ ಬಗ್ಗೆ ಮಹತ್ವದ ಮಾಹಿತಿ ಬಿಚ್ಚಿಟ್ಟಿರುವ ನಾಸಾ ಕಳಿಸಿದ್ದ ನೌಕೆ 'ಜುನೋ', ಮನುಷ್ಯರು ಈವರೆಗೂ ಅಂದುಕೊಂಡಿದ್ದು ತಪ್ಪು ಎಂದು ತಿಳಿಸಿದೆ.

ಗುರುಗ್ರಹ ಗಾತ್ರದ ಬಗ್ಗೆ ಅದ್ಭುತ ಮಾಹಿತಿ
ಅನಿಲ ಗ್ರಹಗಳು ಅಥವಾ ಗ್ಯಾಸ್ ಜೈಂಟ್ ಎಂದು ಕರೆಯಲಾಗುವ ಗ್ರಹಗಳು ತುಂಬಾ ವಿಸ್ಮಯಕಾರಿ, ಏಕೆಂದರೆ ಈ ಗ್ರಹಗಳು ಭವಿಷ್ಯದಲ್ಲಿ ನಕ್ಷತ್ರವಾಗಿ ಕೂಡ ಬದಲಾಗುವ ಶಕ್ತಿ ಹೊಂದಿರುತ್ತವೆ. ಅದೇ ರೀತಿ ಗುರುಗ್ರಹ ಕೂಡ ಗ್ಯಾಸ್ ಜೈಂಟ್ ಆಗಿದ್ದು, ಗಾತ್ರದಲ್ಲಿ ತುಂಬಾ ದೊಡ್ಡದಾಗಿದೆ ಎಂಬ ಊಹೆ & ಅಂದಾಜು ನಡೆದಿತ್ತು. ಹೀಗಿದ್ದಾಗ ಗುರುಗ್ರಹದ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಲು ನಾಸಾ ಸಂಸ್ಥೆ ಉಡಾಯಿಸಿದ್ದ 'ಜುನೋ' ನೌಕೆ ಮನುಷ್ಯರು ಈವರೆಗೂ ಮಾಡಿದ್ದ ಅಂದಾಜು ತಪ್ಪು ಎಂದು ಹೇಳಿದೆ. ಅಲ್ಲದೇ ಗುರುಗ್ರಹ ಅಂದುಕೊಂಡ ಗಾತ್ರಕ್ಕಿಂತಲೂ ಚಿಕ್ಕದಾಗಿದೆ ಎಂಬ ಮಾಹಿತಿ ನೀಡಿದೆ.
'ಜುನೋ' ನೌಕೆಯ ಹೊಸ ಸಾಧನೆ
ಬಾಹ್ಯಾಕಾಶ ವಿಜ್ಞಾನಿಗಳು ಈವರೆಗೆ 1970ರ ದಶಕದ ವಾಯೇಜರ್ & ಪಯೋನೀರ್ ನೌಕೆಗಳ ಆಧಾರದಿ ಸಂಗ್ರಹಿಸಿದ್ದ ರೇಡಿಯೋ ಸಂಕೇತ ಬಳಸಿ ಗುರುಗ್ರಹ ಎಷ್ಟು ದೊಡ್ಡದಾಗಿದೆ ಎಂಬುದನ್ನು ಅಂದಾಜು ಮಾಡಿದ್ದರು. ಆದರೆ ಇದೀಗ 'ಜುನೋ' ನೌಕೆ ಗುರುಗ್ರಹ ಗಾತ್ರದ ಬಗ್ಗೆ ಪಕ್ಕಾ ಮಾಹಿತಿ ನೀಡಿದ್ದು, ಗುರುಗ್ರಹದ ಪರಿಭ್ರಮಣೆ ಸಮೇತ ಹಲವು ಅದ್ಭುತ ಸಂಗತಿಗಳು ಹೊರಬಿದ್ದಿವೆ. ಈ ಪೈಕಿ ಗುರುಗ್ರಹದ ಸಮಭಾಜಕ ವೃತ್ತದ ತ್ರಿಜ್ಯ ಸುಮಾರು 71,488 ಕಿಲೋ ಮೀಟರ್ ಅಂತರದಲ್ಲಿ ಇದ್ದು, ಧ್ರುವೀಯ ತ್ರಿಜ್ಯ ಸುಮಾರು 66,842 ಕಿಲೋ ಮೀಟರ್ ಆಗಿದೆ ಎಂಬುದು ವಿಜ್ಞಾನಿಗಳಿಗೆ ಕನ್ಫರ್ಮ್ ಆಗಿದೆ. ಹೀಗಾಗಿ, ನಾಸಾ ಸಂಸ್ಥೆಯ 'ಜುನೋ' ನೌಕೆ ಗುರುಗ್ರಹ ಸುತ್ತಾ ಪ್ರದಕ್ಷಿಣೆ ಹಾಕಿ ಹೊಸ ಮಾಹಿತಿ ಕಂಡುಹಿಡಿದು ಭೂಮಿಗೆ ಅದನ್ನು ರವಾನಿಸಿದೆ. ಅಲ್ಲದೆ ಮನುಷ್ಯರು ಈವರೆಗೂ ಅಂದಾಜು ಮಾಡಿದ್ದಕ್ಕಿಂತ ಅನಿಲ ದೈತ್ಯ ಗುರುಗ್ರಹ ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿದೆ ಎಂಬುದು ಪಕ್ಕಾ ಆಗಿದೆ.
ವಜ್ರದ ಮಳೆ ಕೂಡ ಬೀಳುತ್ತಾ?
ಗುರುಗ್ರಹ ಮಾತ್ರವಲ್ಲ, ನಮ್ಮ ಸೌರಮಂಡಲ ಒಟ್ಟು 4 ಅನಿಲ ದೈತ್ಯಗಳಿಗೆ ಅಂದರೆ ಗ್ಯಾಸ್ ಜೈಂಟ್ ಎಂದು ಕರೆಯಲಾಗುವ ಬೃಹತ್ ಅನಿಲ ಗೋಲಗಳಿಗೆ ಜಾಗ ನೀಡಿದೆ. ಗುರು, ಶನಿ, ಯುರೇನಿಸ್ ಮತ್ತು ನೆಪ್ಚೂನ್ ಸೌರಮಂಡಲದ ಅನಿಲ ಗ್ರಹಗಳು. ಈ ಎಲ್ಲಾ ಗ್ರಹಗಳ ಸುತ್ತ ಉಂಗುರ ವ್ಯವಸ್ಥೆ ಇರುತ್ತದೆ & ಇತರೆ ಗ್ರಹಗಳಿಗೆ ಹೋಲಿಕೆ ಮಾಡಿಕೊಂಡರೆ ಇಲ್ಲಿನ ಗುರುತ್ವಾಕರ್ಷಣೆ ಸೇರಿದಂತೆ ಹಲವು ವಿಚಾರಗಳು ಬದಲಾಗುತ್ತವೆ. ಕೆಲವು ಅನಿಲ ಗ್ರಹಗಳಲ್ಲಿ ವಜ್ರದ ಮಳೆ ಕೂಡ ಬೀಳುತ್ತದೆ ಎಂದು ವಿಜ್ಞಾನಿಗಳು, ಬಾಹ್ಯಾಕಾಶ ಸಂಶೋಧಕರು ಕಂಡುಹಿಡಿದಿದ್ದಾರೆ. ಆದರೆ ಗುರುಗ್ರಹದ ಮೇಲೆ ಈವರೆಗೂ ವಜ್ರದ ಮಳೆ ಬೀಳುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿಲ್ಲ.












Click it and Unblock the Notifications