Get Updates
Get notified of breaking news, exclusive insights, and must-see stories!

ವಿಶ್ವದಾಖಲೆ : 350 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಪಿಂಕ್ ಡೈಮಂಡ್ ಮಾರಾಟ

ಕ್ರಿಸ್ಟೀಸ್ ಸಂಸ್ಥೆಯು 'ಗುಲಾಬಿ ಬಣ್ಣದ ಪರಂಪರೆ'ಯ ವಜ್ರವೊಂದನ್ನು ಜಿನೀವಾದಲ್ಲಿ ಮಂಗಳವಾರ ದಾಖಲೆ ಮೊತ್ತಕ್ಕೆ ಹರಾಜು ಹಾಕಿದೆ. ಅದರ ಶುಲ್ಕವೂ ಸೇರಿ $ 50 ಮಿಲಿಯನ್ ಗೂ ಹೆಚ್ಚು ಮೊತ್ತಕ್ಕೆ ಹರಾಜು ಹಾಕಲಾಗಿದೆ. ಈ ಮೂಲಕ ಗುಲಾಬಿ ಬಣ್ಣದ ವಜ್ರವೊಂದು ತಲಾ ಕ್ಯಾರೆಟ್ ಲೆಕ್ಕದಲ್ಲಿ ವಿಶ್ವ ದಾಖಲೆ ಮೊತ್ತಕ್ಕೆ ಹರಾಜಾಗಿದೆ.

ಕ್ರಿಸ್ಟೀಸ್ ಮಾತನಾಡಿ, ಹೆಸರಾಂತ ಆಭರಣಕಾರ ಹ್ಯಾರಿ ವಿನ್ ಸ್ಟನ್ ಈ ವಜ್ರ ಖರೀದಿಸಿದವರು ಎಂದು ತಿಳಿಸಲಾಗಿದೆ. ಹರಾಜು ಹಾಕಿದ ಸಂಸ್ಥೆಯು 19 ಕ್ಯಾರೆಟ್ ನ ಚೌಕಾಕಾರದ ಕತ್ತರಿಸಿದ ಈ ವಜ್ರಕ್ಕೆ 30ರಿಂದ 50 ಮಿಲಿಯನ್ ಅಮೆರಿಕನ್ ಡಾಲರ್ ಸಂಗ್ರಹ ಆಗಬಹುದು ಎಂದು ಅಂದಾಜು ಮಾಡಿತ್ತು.

ಇತರ ಶುಲ್ಕಗಳೂ ಸೇರಿದಂತೆ ಈ ಗುಲಾಬಿ ಬಣ್ಣದ ವಜ್ರವು $ 50.375 ಮಿಲಿಯನ್ ಗೆ ಹರಾಜು ಆಗಿದೆ ಎಂದು ಹೇಳಿದ್ದಾರೆ. ಒಂದು ಕಾಲಕ್ಕೆ ಈ ವಜ್ರವು ಒಪ್ಪೆನ್ ಹೈಮರ್ ವಜ್ರ ಕುಟುಂಬಕ್ಕೆ ಸೇರಿತ್ತು. ರಾಸಾಯನಿಕವಾಗಿ ಶುದ್ಧವಾಗಿರುವ ಇದರಲ್ಲಿ ಸ್ವಲ್ಪ ಮಟ್ಟಿಗೆ ನೈಟ್ರೋಜನ್ ಇದೆ ಎಂದು ಕ್ರಿಸ್ಟೀಸ್ ತಿಳಿಸಿದೆ.

Pink diamond sells for more than $50 million in Geneva, setting world record

ಕ್ರಿಸ್ಟೀಸ್ ನ ಅಂತರರಾಷ್ಟ್ರೀಯ ಜ್ಯುವೆಲ್ಲರಿ ಮುಖ್ಯಸ್ಥ ರಾಹುಲ್ ಕಡಕಿಯಾ ಮಾತನಾಡಿ, ಸಂಸ್ಥೆಯ 251 ವರ್ಷಗಳ ಇತಿಹಾಸದಲ್ಲಿ 10 ಕ್ಯಾರೆಟ್ ಗಿಂತ ಹೆಚ್ಚಿನ ತೂಕದ ಈ ಬಣ್ಣದ ನಾಲ್ಕು ವಜ್ರಗಳನ್ನು ಮಾತ್ರ ಹರಾಜು ಹಾಕಲಾಗಿದೆ ಎಂದು ಹೇಳಿದ್ದಾರೆ.

'ಗುಲಾಬಿ ಬಣ್ಣದ ಪರಂಪರೆಯ' ಈ ವಜ್ರ ದಾಖಲೆ ಬೆಲೆಯಾದ $ 50 ಮಿಲಿಯನ್ ಗೆ ಮಾರಾಟವಾಗಿದೆ. ಅಂದರೆ ಪ್ರತಿ ಕ್ಯಾರೆಟ್ ಗೆ $ 2.6 ಮಿಲಿಯನ್ ನ ವಿಶ್ವ ದಾಖಲೆ ಮೊತ್ತ ಸಿಕ್ಕಂತಾಯಿತು. ಈ ಹಿಂದಿನ ದಾಖಲೆ ಇರುವುದು ಪ್ರತಿ ಕ್ಯಾರೆಟ್ ಗೆ $ 2.1 ಮಿಲಿಯನ್. ಆದರೆ ವಜ್ರವು 50 ಕ್ಯಾರೆಟ್ ಗಿಂತ ಹೆಚ್ಚಿತ್ತು ಎಂದು ಮಾಹಿತಿ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+