ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Peshawar Blast: ಮಸೀದಿಗೆ ಪ್ರವೇಶಿಸಲು ಆತ್ಮಾಹುತಿ ದಾಳಿಕೋರ ಮಾಡಿದ್ದ ಬಿಗ್ ಪ್ಲ್ಯಾನ್

ಪಾಕಿಸ್ತಾನದ ಪೇಶಾವರ ಮಸೀದಿಯಲ್ಲಿ ಆತ್ಮಾಹುತಿ ದಾಳಿ ಮಾಡಿದ ವ್ಯಕ್ತಿಯನ್ನು ಪೊಲೀಸರು ಗುರುತಿಸಿದ್ದಾರೆ. ದಾಳಿಕೋರನೊಂದಿಗೆ ವ್ಯವಸ್ಥಿತ ಗುಂಪು ಇದೆ ಎಂದು ಪೊಲೀಸರು ಕಂಡುಹಿಡಿದಿದ್ದಾರೆ.

|
Google Oneindia Kannada News

ಇಸ್ಲಾಮಬಾದ್ ಫೆಬ್ರವರಿ 2: ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನದಲ್ಲಿ ಮಸೀದಿಯಲ್ಲಿ ನಡೆದ ಆತ್ಮಾಹುತಿ ದಾಳಿ ಹೊಸ ಭೀತಿಯನ್ನು ಸೃಷ್ಟಿ ಮಾಡಿದೆ. ಘಟನೆಯ ಬಗ್ಗೆ ಪರಿಶೀಲನೆಯಲ್ಲಿ ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ. ಮಸೀದಿ ಒಳ ಪ್ರವೇಶಿಸಲು ಆತ್ಮಾಹುತಿ ದಾಳಿಕೋರ ಮಾಸ್ಟರ್ ಪ್ಲ್ಯಾನ್ ಮಾಡಿದ್ದ ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಪಾಕಿಸ್ತಾನದ ಪೊಲೀಸ್ ಪ್ರಧಾನ ಕಚೇರಿಯ ಮಸೀದಿಯೊಳಗೆ 101 ಜನರನ್ನು ಕೊಂದ ಆತ್ಮಾಹುತಿ ಬಾಂಬರ್ ದಾಳಿ ನಡೆಸುವಾಗ ಸಮವಸ್ತ್ರ ಮತ್ತು ಹೆಲ್ಮೆಟ್ ಧರಿಸಿದ್ದರು ಎಂದು ಪೊಲೀಸ್ ಮುಖ್ಯಸ್ಥರು ಗುರುವಾರ ತಿಳಿಸಿದ್ದಾರೆ.

ಸೋಮವಾರದಂದು (ಜನವರಿ 30) ವಾಯುವ್ಯ ನಗರದ ಪೇಶಾವರದ ಮಸೀದಿಯಲ್ಲಿ ನೂರಾರು ಪೊಲೀಸರು ಮಧ್ಯಾಹ್ನದ ಪ್ರಾರ್ಥನೆಗೆ ಹಾಜರಾಗುತ್ತಿದ್ದಾಗ ಈ ಆತ್ಮಾಹುತಿ ದಾಳಿ ನಡೆದಿದೆ. ಸ್ಪೋಟದ ತೀವ್ರತೆಗೆ ಮಸೀದಿಯ ಗೋಡೆ ಕುಸಿದು ಹಲವಾರು ಜನ ಸಾವಿನ ಮನೆ ಸೇರಿದ್ದಾರೆ.

"ಆತ್ಮಾಹುತಿ ದಾಳಿಕೋರ ಪೊಲೀಸ್ ಸಮವಸ್ತ್ರದಲ್ಲಿದ್ದ ಕಾರಣ ಕರ್ತವ್ಯದಲ್ಲಿದ್ದ ಪೊಲೀಸರು ಆತನನ್ನು ಪರಿಶೀಲಿಸಲಿಲ್ಲ. ಇದು ಭದ್ರತಾ ಲೋಪವಾಗಿದೆ" ಎಂದು ಖೈಬರ್ ಪಖ್ತುನ್‌ಖ್ವಾ ಪ್ರಾಂತ್ಯದ ಪೊಲೀಸ್ ಪಡೆಯ ಮುಖ್ಯಸ್ಥ ಮೊವಾಝಮ್ ಜಾಹ್ ಅನ್ಸಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೊಲೀಸ್ ಸಮವಸ್ತ್ರದಲ್ಲಿದ್ದ ಆತ್ಮಾಹುತಿ ದಾಳಿಕೋರ

ಪೊಲೀಸ್ ಸಮವಸ್ತ್ರದಲ್ಲಿದ್ದ ಆತ್ಮಾಹುತಿ ದಾಳಿಕೋರ

ಘಟನಾ ಸ್ಥಳದಲ್ಲಿ ಪತ್ತೆಯಾದ ಸಿಸಿಟಿವಿ ಚಿತ್ರಗಳೊಂದಿಗೆ ಬಾಂಬರ್ ಯಾರು ಎಂಬ ಬಗ್ಗೆ ಪೊಲೀಸರಿಗೆ ಕಲ್ಪನೆ ಇದೆ. ಬಾಂಬರ್ ದಾಳಿಯನ್ನು ಏಕಾಂಗಿಯಾಗಿ ಯೋಜಿಸಿರಲಿಲ್ಲ. ದಾಳಿಕೋರನ ಹಿಂದೆ ಸಂಪೂರ್ಣ ಜಾಲವಿದೆ ಎಂದು ಅನ್ಸಾರಿ ವಿವರಿಸಿದರು. ಗುಪ್ತಚರ ಮತ್ತು ಭಯೋತ್ಪಾದನಾ ನಿಗ್ರಹ ಬ್ಯೂರೋಗಳನ್ನು ಹೊಂದಿರುವ ಮತ್ತು ಪ್ರಾದೇಶಿಕ ಸಚಿವಾಲಯದ ಪಕ್ಕದಲ್ಲಿರುವ ನಗರದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಇಂತಹ ಲೋಪ ಹೇಗೆ ಸಂಭವಿಸಿದೆ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಘಟನೆ ಬಳಿಕ ಹಲವರ ಬಂಧನ

ಘಟನೆ ಬಳಿಕ ಹಲವರ ಬಂಧನ

ಇದು ಹಲವಾರು ವರ್ಷಗಳ ಬಳಿಕ ನಡೆದ ಪಾಕಿಸ್ತಾನದ ಮಾರಣಾಂತಿಕ ದಾಳಿಯಾಗಿದೆ. 2021 ರಲ್ಲಿ ಕಾಬೂಲ್‌ನಲ್ಲಿ ಅಫ್ಘಾನ್ ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಈ ಪ್ರದೇಶದಲ್ಲಿ ನಡೆದ ಹಿಂಸಾಚಾರಕ್ಕಿಂತಲೂ ಇದು ಅತ್ಯಂತ ಕೆಟ್ಟದಾಗಿದೆ.

ದಾಳಿಯನ್ನು ಸಂಘಟಿಸಲು ಕಾಂಪೌಂಡ್‌ನೊಳಗಿನ ಜನರು ಸಹಾಯ ಮಾಡಿದ ಸಾಧ್ಯತೆಯ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸ್ಫೋಟಕ ವಸ್ತುವು ಹೇಗೆ ಪ್ರವೇಶಿಸಿತು ಮತ್ತು ದಾಳಿಯಲ್ಲಿ ಯಾವುದೇ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆಯೇ ಎಂದು ತಿಳೀಯಲು ಪೊಲೀಸ್ ಲೈನ್ (ಪ್ರಧಾನ ಕಛೇರಿ) ಯಿಂದ ಜನರನ್ನು ಬಂಧಿಸಲಾಗಿದೆ.

ಆತ್ಮಾಹುತಿ ದಾಳಿಯ ಹೊಣೆ ಹೊತ್ತ ಟಿಟಿಪಿ

ಆತ್ಮಾಹುತಿ ದಾಳಿಯ ಹೊಣೆ ಹೊತ್ತ ಟಿಟಿಪಿ

ಘಟನೆಗೆ ಸಂಬಂಧಿಸಿದಂತೆ ಅಫ್ಘಾನಿಸ್ತಾನದ ಗಡಿಯಲ್ಲಿರುವ ಹತ್ತಿರದ ಹಿಂದಿನ ಬುಡಕಟ್ಟು ಪ್ರದೇಶಗಳ ಕೆಲವರು ಸೇರಿದಂತೆ ಕನಿಷ್ಠ 23 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪೂಜಾ ಸ್ಥಳಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ಹೇಳುವ ಮೂಲಕ TTP ಪೇಶಾವರ ಮಸೀದಿ ಸ್ಫೋಟದಿಂದ ದೂರ ಸರಿದಿದೆ. ದಾಳಿಯ ನಂತರ ಖೈಬರ್ ಪಖ್ತುಂಖ್ವಾದ ಉಸ್ತುವಾರಿ ಮುಖ್ಯಮಂತ್ರಿ ಮುಹಮ್ಮದ್ ಅಜಮ್ ಖಾನ್ ಮಂಗಳವಾರ ಪ್ರಾಂತ್ಯದಲ್ಲಿ ಶೋಕಾಚರಣೆಯ ದಿನವನ್ನು ಘೋಷಿಸಿದರು.


ಪಾಕಿಸ್ತಾನಿ ತಾಲಿಬಾನ್ ಎಂದು ಕರೆಯಲ್ಪಡುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಆತ್ಮಾಹುತಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಇದು ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಕೊಲ್ಲಲ್ಪಟ್ಟ ಟಿಟಿಪಿ ಕಮಾಂಡರ್ ಉಮರ್ ಖಾಲಿದ್ ಖುರಾಸಾನಿ ಅವರ ಪ್ರತೀಕಾರದ ದಾಳಿಯ ಭಾಗವಾಗಿದೆ ಎಂದು ತಿಳಿದು ಬಂದಿದೆ. ಯುಎಸ್ ಮತ್ತು ನ್ಯಾಟೋ ಪಡೆಗಳು ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಂಡ ನಂತರ ಮತ್ತು ತಾಲಿಬಾನ್ ಕಾಬೂಲ್‌ಗೆ ನುಗ್ಗಿದ ನಂತರ ಭಯೋತ್ಪಾದಕರು ಧೈರ್ಯಶಾಲಿಯಾಗಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಆತ್ಮಾಹುತಿ ಬಾಂಬರ್‌ನ ತುಂಡಾದ ತಲೆ ಪತ್ತೆ!

ಆತ್ಮಾಹುತಿ ಬಾಂಬರ್‌ನ ತುಂಡಾದ ತಲೆ ಪತ್ತೆ!

ಬುಧವಾರ ಪಾಕಿಸ್ತಾನದ ಮಸೀದಿ ಸ್ಫೋಟದ ಸ್ಥಳದಲ್ಲಿ ಆತ್ಮಹತ್ಯಾ ಬಾಂಬರ್‌ನ ತುಂಡಾದ ತಲೆ ಪತ್ತೆಯಾಗಿದೆ. ಪೇಶಾವರ ನಗರದಲ್ಲಿ ಸೋಮವಾರ ಮಧ್ಯಾಹ್ನ ಪ್ರಾರ್ಥನೆಯ ವೇಳೆ ಆತ್ಮಾಹುತಿ ಬಾಂಬರ್ ಸ್ಪೋಟಕವನ್ನು ಸ್ಪೋಟಿಸಿದ್ದನು. ಶಂಕಿತ ಉಗ್ರನ ತಲೆಯನ್ನು ರಕ್ಷಣಾ ಅಧಿಕಾರಿಗಳು ಬುಧವಾರ ವಶಪಡಿಸಿಕೊಂಡಿದ್ದಾರೆ.

ಬಾಂಬ್ ಸ್ಫೋಟದಿಂದ ಸಾವಿನ ಸಂಖ್ಯೆ 101ಕ್ಕೆ ಏರಿಕೆಯಾಗಿದೆ. ಇದರಿಂದ ಹಲವಾರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಪೋಟದ ತೀವ್ರತೆಗೆ ದೇಹಗಳು ಛಿದ್ರಗೊಂಡಿದ್ದು ಅವಶೇಷಗಳಲ್ಲಿ ಹೂತುಹೋಗಿದ್ದವು. ಸೋಮವಾರ (ಜನವರಿ 30) ಮಧ್ಯಾಹ್ನ 1.40ರ ಸುಮಾರಿಗೆ ಹೆಚ್ಚು ಜನ ಪೊಲೀಸರು, ಸೇನೆ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳನ್ನು ಒಳಗೊಂಡಂತೆ ಭಕ್ತರು ಜುಹ್ರ್ (ಮಧ್ಯಾಹ್ನ) ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಪ್ರಬಲ ಸ್ಫೋಟ ಸಂಭವಿಸಿದೆ.

English summary
Suicide bomber who killed 101 people inside a mosque at Pakistan's police headquarters was wearing a uniform and helmet when he carried out the attack, police chiefs said Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X