• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

24 ಗಂಟೆಗಳಲ್ಲೇ ಕೊರೊನಾ ವೈರಸ್ ನಿಂದ ಸಾವಿರಾರು ಮಂದಿ ಸಾವು

|

ವಾಶಿಂಗ್ ಟನ್, ಏಪ್ರಿಲ್.05: ಕೊರೊನಾ ವೈರಸ್ ಮಹಾಮಾರಿಯ ರೌದ್ರ ನರ್ತನ ಮುಂದುವರಿದಿದೆ. ಡೆಡ್ಲಿ ವೈರಸ್ ಹಾವಳಿಗೆ ಅಮೆರಿಕಾ ಮತ್ತು ಫ್ರಾನ್ಸ್ ರಾಷ್ಟ್ರಗಳು ತತ್ತರಿಸಿ ಹೋಗಿವೆ. ಕಳೆದ 24 ಗಂಟೆಗಳಲ್ಲಿ ಎರಡು ರಾಷ್ಟ್ರಗಳಲ್ಲಿ ಸಾವಿರಾರು ಮಂದಿ ಈ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ.

ಕೊರೊನಾ ವೈರಸ್ ಕಾಟಕ್ಕೆ ಅಮೆರಿಕಾ ಅಕ್ಷರಶಃ ನಲುಗಿ ಹೋಗಿದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 3,11,357ಕ್ಕೆ ತಲುಪಿದೆ. ಒಂದೇ ದಿನ 34,196ಕ್ಕೂ ಅಧಿಕ ಮಂದಿಗೆ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ತಿಳಿದು ಬಂದಿದೆ.

ತನ್ನದೇ ಪ್ರಜೆಗಳ ಮೇಲೆ ಮುನಿಸಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಇನ್ನು, ಕಳೆದ 24 ಗಂಟೆಗಳಲ್ಲೇ ಯುನೈಟೆಡ್ ಸ್ಟೇಟ್ಸ್ ನಲ್ಲಿ 1,048 ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆಯು 8,452ಕ್ಕೆ ಏರಿಕೆಯಾಗಿದೆ. ಇದುವರೆಗೂ 14,825 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಫ್ರಾನ್ಸ್ ನಲ್ಲೂ ಸಾವಿರಾರು ಮಂದಿ ಸಾವು:

ಅಮೆರಿಕಾವಷ್ಟೇ ಅಲ್ಲ, ಫ್ರಾನ್ಸ್ ನಲ್ಲೂ ಕೂಡಾ ಕೊರೊನಾ ವೈರಸ್ ಹಾವಳಿ ಮಿತಿ ಮೀರಿದೆ. ಕಳೆದ 24 ಗಂಟೆಗಳಲ್ಲಿ 1,053ಕ್ಕೂ ಅಧಿಕ ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ. ಇದರಿಂದ ಸಾವಿನ ಸಂಖ್ಯೆ 7,748ಕ್ಕೆ ಏರಿಕೆಯಾಗಿದೆ. 7,788 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 89,953ಕ್ಕೆ ಏರಿಕೆಯಾಗಿದೆ. ಇದುವರೆಗೂ 15,438 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

12 ಲಕ್ಷದ ಗಡಿ ದಾಟಿತು ಸೋಂಕಿತರ ಸಂಖ್ಯೆ:

ವಿಶ್ವದಾದ್ಯಂತ ಸೋಂಕಿತರ ಸಂಖ್ಯೆಯು 12 ಲಕ್ಷದ ಗಡಿ ದಾಟಿದೆ. 12,01,473 ಜನರಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, ಕಳೆದ 24 ಗಂಟೆಗಳಲ್ಲೇ 84,811 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇನ್ನು, ಶನಿವಾರ ಒಂದೇ ದಿನ 5,517 ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 64,491ಕ್ಕೆ ಏರಿಕೆಯಾಗಿದೆ.

English summary
Past 24 Hours: More Than 1,000 People Death From Coronavirus In America And France. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X