ಪತಿಯ ಅಕ್ರಮ ಸಂಬಂಧ ಬಯಲುಮಾಡಿದ ಗಿಣಿರಾಮ!

Posted By:
Subscribe to Oneindia Kannada

ಕುವೈತ್, ಅಕ್ಟೋಬರ್, 27: ಮನೆಯಲ್ಲಿ ಸಾಕಿಕೊಂಡಿದ್ದ ಮಾತುಕಲಿತ ಗಿಣಿಯೊಂದು ತುಂಬಿದ ಸಂಸಾರದಲ್ಲಿ ಹುಳಿ ಹಿಂಡಿದೆ. ಮನೆಯ ಯಜಮಾನನಿಂದಲೇ ಮಾತು ಕಲಿತು ಯಾಜಮಾನನ ಹೆಂಡತಿಯನ್ನೇ ಅವನಿಂದ ದೂರ ಮಾಡಿದೆ.

ಮಾತು ಕಲಿತಿದ್ದ ಈ ಗಿಣಿ ಮನೆಯ ಯಜಮಾನ ಮನೆಕೆಲಸದವಳ ಜತೆ ಚಕ್ಕಂದ ಆಡುತ್ತ ಮತನಾಡಿದ ಎಲ್ಲ ಮಾತುಗಳನ್ನು ಕೇಳಿಸಿಕೊಂಡು ಮನೆಯೊಡತಿಯ ಮುಂದೆ ಉಚ್ಛರಿಸಿದೆ. ಈ ಘಟನೆ ಕುವೈತ್ ನಲ್ಲಿ ನಡೆದಿದೆ.

ಗಿಣಿಯ ಮಾತುಗಳಿಂದ ಮನೆಕೆಲಸದವಳ ಜತೆ ಪತಿ ರಾಸಲೀಲೆ ನಡೆಸುತ್ತಿದ್ದಾನೆ ಎಂಬ ವಿಷಯ ಹೆಂಡತಿಗೆ ತಿಳಿಸಿರುವುದರಿಂದ ಆಕ್ರೋಶಗೊಂಡ ಪತ್ನಿ ಪತಿಯ ಮೇಲೆ ಕೇಸು ದಾಖಲಿಸಿದ್ದಾಳೆ.

ನನ್ನ ಗಂಡ ಮತ್ತು ಮನೆಕೆಲಸದವಳು ಮಾತನಾಡಿಕೊಳ್ಳುತ್ತಿದ್ದ ಮಾತುಗಳನ್ನು ಗಿಣಿ ನನ್ನ ಮುಂದೆ ಪದೇ ಪದೇ ಉಚ್ಛರಿಸಿದೆ ಆದ್ದರಿಂದ ಅವರ ಮೇಲೆ ನನಗೆ ಅನುಮಾನ ಮೂಡಿದೆ. ದಯವಿಟ್ಟು ಇಬ್ಬರನ್ನೂ ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಪತ್ನಿ ತಿಳಿಸಿದ್ದಾಳೆ.

ನನ್ನ ಗಂಡ ಅಕ್ರಮ ಸಂಬಂಧಗಳನ್ನು ಇಟ್ಟುಕೊಂಡಿದ್ದಾನೆ ಎಂಬ ಅನುಮಾನ ನನ್ನಲ್ಲಿ ಹಲವು ದಿನಗಳಿಂದ ಇತ್ತು. ಈಗ ಗಿಣಿ ಮೂಲಕ ಹೊರಬಂದಿದೆ. ಎಂದು ಇಲ್ಲಿನ ಹವಾಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಕುವೈತ್ ಕಾನುನಿನ ಪ್ರಕಾ ಅಕ್ರಮ ಸಂಬಂಧಗಳನ್ನು ಹೊಂದುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

ಆದರೆ ಪೊಲೀಸರು ಮಾತ್ರ " ಗಿಣಿಯ ಹೇಳಿಕೆಗಳನ್ನೇ ಆಧಾರವಾಗಿಟ್ಟುಕೊಂಡು ಕೇಸು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ. ಬಹುಶಃ ಅದು ಟಿವಿಯಲ್ಲಿನ ಪಾತ್ರಗಳ ರಾಸಲೀಲೆಗಳ ಸಂಭಾಷಣೆ ಕೇಳಿಸಿಕೊಂಡು ಕೂಡ ಮಾತನಾಡಿರಬಹುದು" ಎಂದು ಹೇಳಿದ್ದಾರೆ.

ಈ ಘಟನೆಯನ್ನು ಸ್ಥಳೀಯ ಪತ್ರಿಕೆ 'ಅರಬ್ ಟೈಮ್ಸ್' ವರದಿ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A parrot landed its owner in hot water after accidentally exposing a husband’s affair with the housekeeper – in front of his wife.
Please Wait while comments are loading...