• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

23 ವಯಸ್ಸಿನ ಪಾಕಿಸ್ತಾನದ ಅತ್ಯಾಚಾರಿ, ಸರಣಿ ಹಂತಕನಿಗೆ ಗಲ್ಲು ಶಿಕ್ಷೆ

|

ಲಾಹೋರ್, ಅಕ್ಟೋಬರ್ 17: ಪಾಕಿಸ್ತಾನಿ ಸರಣಿ ಹಂತಕನೊಬ್ಬನನ್ನು ಬುಧವಾರ ಲಾಹೋರ್ ನ ಜೈಲಿನಲ್ಲಿ ನೇಣಿಗೇರಿಸಲಾಗಿದೆ. ಆತನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂಬ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತು. ಈ ರೀತಿ ಮನವಿ ಮಾಡಿದ್ದು ಆತನಿಂದ ಅತ್ಯಾಚಾರಕ್ಕೆ ಈಡಾದ ಏಳು ವರ್ಷದ ಬಾಲಕಿಯ ತಂದೆ.

ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಶಿಕ್ಷೆಯಾಗಿದ್ದವನ ಹೆಸರು ಇಮ್ರಾನ್ ಅಲಿ. ಲಾಹೋರ್ ನಿಂದ ಐವತ್ತು ಕಿ.ಮೀ. ದೂರದ ಕಸೂರ್ ನಗರದಲ್ಲಿ ಈ ವರ್ಷದ ಆರಂಭದಲ್ಲಿ ಆತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ. ಬುಧವಾರ ಬೆಳಗ್ಗೆ ಲಾಹೋರ್ ನ ಕೋಟ್ ಲಖಪತ್ ಕೇಂದ್ರ ಕಾರಾಗೃಹದಲ್ಲಿ ಇಮ್ರಾನ್ ಅಲಿಗೆ ನೇಣು ಹಾಕಲಾಯಿತು.

ಮೂರು ವರ್ಷದ ಬಾಲಕಿ ಮೇಲೆ ನೆರೆ ಮನೆಯಾತನಿಂದ ಅತ್ಯಾಚಾರ

ಮ್ಯಾಜಿಸ್ಟ್ರೇಟ್ ಅದಿಲ್ ಸರ್ವಾರ್ ಹಾಗೂ ಬಾಲಕಿಯ ತಂದೆಯ ಸಮ್ಮುಖದಲ್ಲಿ ಇಮ್ರಾನ್ ಅಲಿಗೆ ನೇಣು ಹಾಕಲಾಯಿತು. ಆ ಸಂದರ್ಭದಲ್ಲಿ ಬಾಲಕಿಯ ಸಂಬಂಧಿ ಕೂಡ ಜೈಲಿನಲ್ಲಿ ಹಾಜರಿದ್ದರು. ಅಪರಾಧಿಯ ಸೋದರ ಹಾಗೂ ಇಬ್ಬರು ಸ್ನೇಹಿತರು ಕೂಡ ಬಂದಿದ್ದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಸಾರ್ವಜನಿಕವಾಗಿ ನೇಣು ಹಾಕಬೇಕೆಂದು ಮನವಿ

ಸಾರ್ವಜನಿಕವಾಗಿ ನೇಣು ಹಾಕಬೇಕೆಂದು ಮನವಿ

ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಬೇಕು ಎಂದು ಬಾಲಕಿಯ ತಂದೆ ಮಾಡಿದ್ದ ಮನವಿಯನ್ನು ಇಬ್ಬರು ನ್ಯಾಯಮೂರ್ತಿಗಳನ್ನು ಒಳಗೊಂಡಿದ್ದ ಲಾಹೋರ್ ಹೈಕೋರ್ಟ್ ಪೀಠವು ಮಂಗಳವಾರ ತಿರಸ್ಕರಿಸಿತು. ಈ ವರ್ಷದ ಜನವರಿ ಕೊನೆಗೆ ಇಮ್ರಾನ್ ಅಲಿಯನ್ನು ಕೊಲೆ-ಅತ್ಯಾಚಾರ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು.

ಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ

ಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ

ಆ ವೇಳೆಗೆ ಬಾಲಕಿಯ ಮೇಲೆ ಅತ್ಯಾಚಾರ ನಡೆ, ಹತ್ಯೆ ಮಾಡಿ, ಕಸೂರ್ ನ ಕಸದ ತೊಟ್ಟಿಯೊಂದಕ್ಕೆ ಬಿಸಾಡಿ ಎರಡು ವಾರ ಕಳೆದಿತ್ತು. ಆ ನಂತರ ಪಾಕಿಸ್ತಾನದಾದ್ಯಂತ ಭಾರೀ ಪ್ರತಿಭಟನೆ ನಡೆದಿತ್ತು. ಇಪ್ಪತ್ಮೂರು ವರ್ಷದ ಆರೋಪಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಆಗ್ರಹಿಸಲಾಯಿತು. ಆ ವೇಳೆ ನಡೆದ ಪ್ರತಿಭಟನೆ ಸಮಯದಲ್ಲಿ ಎರಡು ಜೀವ ಹೋಗಿತ್ತು.

ಐದು ಪ್ರಕರಣಗಳಲ್ಲಿ ಕೋರ್ಟ್ ತೀರ್ಪು

ಐದು ಪ್ರಕರಣಗಳಲ್ಲಿ ಕೋರ್ಟ್ ತೀರ್ಪು

ಕಸೂರ್ ನ ನಿವಾಸಿಯಾದ ಅಲಿ ಮೇಲೆ ಈ ರೀತಿ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಒಂಬತ್ತು ಪ್ರಕರಣಗಳಿವೆ. ಐದು ಪ್ರಕರಣಗಳಲ್ಲಿ ಕೋರ್ಟ್ ತೀರ್ಪು ನೀಡಿತು. ಅಲಿ ಪರವಾಗಿ ವಾದ ಮಾಡಿದ್ದ ವಕೀಲರು ಕೂಡ ಆತನನ್ನು ಜೈಲಿನಲ್ಲಿ ನೇಣು ಹಾಕುವುದನ್ನು ನೇರ ಪ್ರಸಾರ ಮಾಡಲು ಅವಕಾಶ ನೀಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದರು. ಆದರೆ ಮನವಿ ತಿರಸ್ಕೃತವಾಯಿತು.

ಕೋಟ್ ಲಖಪತ್ ಜೈಲಿನ ಸುತ್ತ ಭಾರೀ ಕಾವಲು

ಕೋಟ್ ಲಖಪತ್ ಜೈಲಿನ ಸುತ್ತ ಭಾರೀ ಕಾವಲು

ಅಲಿಗೆ ಶಿಕ್ಷೆ ಜಾರಿ ಆಗುವ ಸಂದರ್ಭದಲ್ಲಿ ಕೋಟ್ ಲಖಪತ್ ಜೈಲಿನ ಸುತ್ತ ಭಾರೀ ಕಾವಲು ಹಾಕಲಾಗಿತ್ತು. ನೇಣು ಹಾಕುವುದರ ದೃಶ್ಯಗಳ ನೇರ ಪ್ರಸಾರಕ್ಕೆ ಅಧಿಕಾರಿಗಳು ಒಪ್ಪಬೇಕಿತ್ತು. ನನ್ನ ಮಗಳು ಬದುಕಿದ್ದರೆ ಅವಳಿಗೆ ಏಳು ವರ್ಷದ ಎರಡು ತಿಂಗಳು ಆಗಿರುತ್ತಿತ್ತು. ಮಗಳ ಕೊಲೆಯ ದುಃಖದಿಂದ ನನ್ನ ಹೆಂಡತಿ ಇನ್ನೂ ಆಚೆಬಂದಿಲ್ಲ ಎಂದು ಬಾಲಕಿಯ ತಂದೆ ಮಾಧ್ಯಮದ ಮುಂದೆ ಹೇಳಿದ್ದಾರೆ. ಅಲಿಯನ್ನು ಕೋರ್ಟ್ ನಲ್ಲಿ ಗಲ್ಲಿಗೇರಿಸಿದ ನಂತರ, ಶವವನ್ನು ಕಸೂರ್ ಗೆ ತೆಗೆದುಕೊಂಡು ಹೋಗುವ ವೇಳೆ ಆತನ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

English summary
A Pakistani serial killer was executed at a prison in Lahore on Wednesday after a court dismissed a petition for his public hanging filed by the father of a seven-year-old girl, who was raped and murdered by the convict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X