ಗೂಬೆಯಂತೆ ಕತ್ತು ಹಿಂದಕ್ಕೆ ತಿರುಗಿಸಬಲ್ಲ ಈ ಬಾಲಕ

Posted By:
Subscribe to Oneindia Kannada

ನವೆಂಬರ್ 11, ಕರಾಚಿ : ಈ ಹುಡುಗ ತನ್ನ ಕತ್ತನ್ನು ಅಕ್ಷರಶಃ ಗೂಬೆಯಂತೆ ಕತ್ತನ್ನು ಹಿಂದಕ್ಕೆ ತಿರುಗಿಸಿಬಿಡಬಲ್ಲ. ಸಾಮಾನ್ಯರಿಗೆ ಕತ್ತನ್ನು ತಮ್ಮ ಭುಜ ದಾಟಿಸುವಷ್ಟರಲ್ಲೆ ಕತ್ತು ಹಿಡಿದುಕೊಂಡು ಬಿಡುತ್ತದೆ ಆದರೆ ಪಾಕಿಸ್ತಾನದ ಈ ಹುಡುಗ ಬರೋಬ್ಬರಿ 180 ಡಿಗ್ರಿ ಕೋನಕ್ಕೆ ಕತ್ತು ತಿರುಗಿಸಿ ತನ್ನ ಹಿಂದೆ ನಡೆಯುತ್ತಿರುವುದನ್ನು ಸುಲಭವಾಗಿ ನೋಡಿಬಿಡಬಲ್ಲ.

ಪಾಕಿಸ್ತಾನದ ಕರಾಚಿಯವನಾದ ಮಹಮ್ಮದ್ ಸಮೀರ್ ಈ ಅದ್ಬುತ ಪ್ರತಿಭೆ ಹೊಂದಿದ ಬಾಲಕ. ಈತ ಕೇವಲ ಕತ್ತನ್ನಷ್ಟೆ ಅಲ್ಲ ಕೈ ಕಾಲು ಎಲ್ಲವನ್ನೂ ಇಷ್ಟೇ ಸಲಿಸಾಗಿ ತಿರುಗಿಸಬಲ್ಲ. ಎರಡೂ ಕೈ ಒಂದಕ್ಕೊಂದು ಹಿಡಿದುಕೊಂಡು ಅದರಲ್ಲಿಯೇ ಸ್ಕಿಪ್ಪಿಂಗ್ ಆಡಿ ಬಿಡಬಲ್ಲ ಈ ಬಾಲಕ.

Pakistani boy boy can turn his head upto 180 degre

ಪ್ರಸ್ತುತ "ಡೇಂಜರಸ್' ಎಂಬುವ ಡಾನ್ಸ್ ತಂಡದಲ್ಲಿ ಮುಖ್ಯ ಡಾನ್ಸರ್ ಆಗಿರುವ ಮಹಮ್ಮದ್ ಗೆ ಈತನ ಫ್ಲೆಕ್ಸಿಬಿಲಿಟಿ ಇಂದಲೇ ಕರಾಚಿಯಲ್ಲಿ ಸಾಕಷ್ಟು ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ.

ಸಮೀರ್ ತಂದೆ ಸಾಜಿದ್ ಖಾನ್‌(49) ಎರಡು ಬಾರಿ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿ ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಸಮೀರ್ ಶಾಲೆ ಬಿಟ್ಟು ಹಣ ಸಂಪಾದಿಸಲು ನಿರ್ಧರಿಸಿ, ಡ್ಯಾನ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾನೆ. ಇದರಿಂದ ಬಂದ ಹಣದಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾನೆ.

14 ವರ್ಷದ ಸಮೀರ್ ತನ್ನ 7 ನೇ ವರ್ಷದಿಂದಲೇ ಹೀಗೆ ಕತ್ತು ತಿರುಗಿಸುವ ಪ್ರಯತ್ನ ಮಾಡುತ್ತಾ ಬಂದಿದ್ದನಂತೆ. ಈತನಿಗೆ ಹಾಲಿವುಡ್ ನ ಹಾರರ್ ಸಿನಿಮಾಗಳಲ್ಲಿ ನಟಿಸುವ ಆಸೆ ಕೂಡ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pakisthani boy Sameer Khan, 14, can rotate his head a complete 180 degrees to look directly behind him like an owl and can also rotate his shoulders by 180 degrees. ಗೂಬೆಯಂತೆ ಹಿಂದಕ್ಕೆ ಕತ್ತು ತಿರುಗಿಸಬಲ್ಲ ಈ ಬಾಲಕ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ