ಪಾಕಿಸ್ತಾನಕ್ಕೆ ಹೋಗುವವರೇ ಇಲ್ಲ, ಪ್ರವಾಸಕ್ಕೆ ಈ ದೇಶಗಳೇ ಸೂಪರ್
ಇಸ್ತಮಾಬಾದ್, ಜನವರಿ.08: ವಿಶ್ವದಲ್ಲಿ ಪ್ರವಾಸಕ್ಕೆ ಹೇಳಿ ಮಾಡಿಸಿದ ದೇಶಗಳು ಯಾವುವು ಎಂಬುದರ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ ನೆರೆಯ ರಾಷ್ಟ್ರ ಪಾಕಿಸ್ತಾನ ಮತ್ತೊಮ್ಮೆ ಪಾತಾಳಕ್ಕೆ ಕುಸಿದಿದೆ. ಪಾಕಿಸ್ತಾನ್ ಪಾಸ್ ಪೋರ್ಟ್ ಪಡೆಯುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ.
ಅತಿ ಕಡಿಮೆ ಪಾಸ್ ಪೋರ್ಟ್ ನೀಡಿದ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ 4ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ ಈ ಪಟ್ಟಿಯಲ್ಲಿ ಪಾಕಿಸ್ತಾನ 5ನೇ ಸ್ಥಾನದಲ್ಲಿತ್ತು. ಆದರೆ, ಈ ಬಾರಿ ಮತ್ತೊಮ್ಮೆ ಹಿನ್ನಡೆ ಅನುಭವಿಸಿರುವುದಾಗಿ ಹೆನ್ಲಿ ಪಾಸ್ ಪೋರ್ಟ್ ಇಂಡೆಕ್ಟ್ ತಿಳಿಸಿದೆ.
ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವಲ್ಲಿ ಪಾಕಿಸ್ತಾನ ಸೋತಿದೆ. 2019ರಲ್ಲಿ ಪಾಕಿಸ್ತಾನದ ಪಾಸ್ ಪೋರ್ಟ್ ಪಡೆದವರ ಸಂಖ್ಯೆಯನ್ನು ಪರಿಗಣಿಸಿದಾಗ ಆ ದೇಶವು 104ನೇ ಸ್ಥಾನಕ್ಕೆ ಕುಸಿದಿದೆ ಎಂದು ಜಿಯೋ ಸುದ್ದಿ ಸಂಸ್ಥೆಯು ವರದಿ ಮಾಡಿದೆ.

ಪ್ರವಾಸಿಗರನ್ನು ಸೆಳೆಯುವಲ್ಲಿ ಸೋತ ದೇಶಗಳ ಪಟ್ಟಿ:
ಪ್ರವಾಸಿಗರನ್ನು ತನ್ನತ್ತ ಸೆಳೆಯುವ ರಾಷ್ಟ್ರಗಳ ಪಟ್ಟಿಯನ್ನು ಹೆನ್ಲಿ ಪಾಸ್ ಪೋರ್ಟ್ ಇಂಡೆಕ್ಟ್ ಬಿಡುಗಡೆ ಮಾಡಿದೆ. ಇದರಲ್ಲಿ ಪಾಕಿಸ್ತಾನಕ್ಕೆ ಅತಿ ಕಡಿಮೆ ಪ್ರವಾಸಿಗರನ್ನು ಸೆಳೆದ ದೇಶ ಎಂದು ಗುರುತಿಸಿಕೊಂಡಿದೆ. ಸಿರಿಯಾ, ಇರಾಕ್, ಅಫ್ಘಾನಿಸ್ತಾನ್, ಕ್ರಮವಾಗಿ ಅಗ್ರಕ್ರಮಾಂಕದಲ್ಲಿ ಗುರುತಿಸಿಕೊಂಡಿವೆ. ಇನ್ನು, ಪಾಕಿಸ್ತಾನದ ಜೊತೆ ಸೋಮಾಲಿಯಾ ಕೂಡಾ ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿದೆ.
ವಿಶ್ವದ ಪ್ರವಾಸಿಗರನ್ನು ಸೆಳೆದ ದೇಶಗಳ ಪಟ್ಟಿ:
ವಿಶ್ವದಲ್ಲೇ ಅತಿಹೆಚ್ಚು ಪ್ರವಾಸಿಗರನ್ನು ಸೆಳೆಯುವ ಮೂಲಕ ಜಪಾನ್ ಅಗ್ರಸ್ಥಾನದಲ್ಲಿದೆ. ಸಿಂಗಾಪುರ್ ಎರಡನೇ ಸ್ಥಾನದಲ್ಲಿದ್ದರೆ, ಜರ್ಮನಿ ಹಾಗೂ ಉತ್ತರ ಕೊರಿಯಾ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿವೆ. ಯುರೋಪಿಯನ್ ರಾಷ್ಟ್ರಗಳು ಕೂಡಾ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿವೆ. ಫಿನ್ ಲ್ಯಾಂಡ್ ಹಾಗೂ ಸ್ಪೇನ್ ರಾಷ್ಟ್ರಗಳು ನಾಲ್ಕನೇ ಸ್ಥಾನದಲ್ಲಿದ್ದರೆ, ಡೆನ್ಮಾರ್ಕ್ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಆರನೇ ಸ್ಥಾನದಲ್ಲಿ ಸ್ವಿಡನ್ ಹಾಗೂ ಫ್ರಾನ್ಸ್ ರಾಷ್ಟ್ರಗಳಿವೆ.
8ನೇ ಸ್ಥಾನದಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕ:
ಅತಿಹೆಚ್ಚು ಪ್ರವಾಸಿಗರನ್ನು ಸೆಳೆದ ರಾಷ್ಟ್ರಗಳ ಪೈಕಿ ವಿಶ್ವದ ದೊಡ್ಡಣ್ಣ ಅಮೆರಿಕ 8ನೇ ಸ್ಥಾನದಲ್ಲಿದೆ. ಇಂಗ್ಲೆಂಡ್, ನಾರ್ವೆ, ಗ್ರೀನ್, ಬೆಲ್ಜಿಯಂ ರಾಷ್ಟ್ರಗಳು ಕೂಡಾ 8ನೇ ಸ್ಥಾನವನ್ನು ಪಡೆದುಕೊಂಡಿವೆ. 9ನೇ ಸ್ಥಾನದಲ್ಲಿ ಕೆನಡಾ ಇದ್ದರೆ, ಯುನೆಡೆಟ್ ಅರಬ್ ರಾಷ್ಟ್ರಗಳು 18ನೇ ಸ್ಥಾನದಲ್ಲಿ ಗುರುತಿಸಿಕೊಂಡಿವೆ.












Click it and Unblock the Notifications