15 ದಿನದಲ್ಲಿ ಭಾರತದ ಶತ್ರು ಪಾಪಿ ಪಾಕಿಸ್ತಾನ ಹಣೆಬರಹ ನಿರ್ಧಾರ!
ಪಾಕಿಸ್ತಾನದ ಚುನಾವಣೆ ಮಹಾಯುದ್ಧದ ರೀತಿ ಕಗ್ಗಂಟಾಗಿದೆ. ಕೇವಲ ಒಂದು ಚುನಾವಣೆ ನಡೆಸಲು ಕೂಡ ತಾಕತ್ ಇಲ್ಲದ ಈ ದೇಶದಲ್ಲಿ ಇದೀಗ, ಸಾರ್ವತ್ರಿಕ ಚುನಾವಣೆಯ ವೇಳೆ ಭಾರಿ ದೊಡ್ಡ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಆರೋಪದ ಬಳಿಕ ಪಾಕಿಸ್ತಾನದ ಮಾನ, ಪ್ರಪಂಚದ ಮೂಲೆ ಮೂಲೆಯಲ್ಲೂ ಹರಾಜು ಆಗಿದೆ. ಹೀಗೆ ಬೀದಿ ಬದಿಯಲ್ಲಿ ಹೋದ ಮಾನ ಉಳಿಸಿಕೊಳ್ಳಲು ಪಾಕ್ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.
ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಪಾಕ್ ಅಧಿಕಾರಿಯೊಬ್ಬರ ಆರೋಪದ ಬಗ್ಗೆ ತನಿಖೆ ನಡೆಸಲು ಪಾಕಿಸ್ತಾನ ಚುನಾವಣಾ ಆಯೋಗ ಉನ್ನತ ಮಟ್ಟದ ಸಮಿತಿ ರಚಿಸಿದೆ. ಪಾಕಿಸ್ತಾನದ ಚುನಾವಣೆಯಲ್ಲಿ ದೊಡ್ಡ ಅಕ್ರಮ ನಡೆದಿದೆ ಎಂಬ ಆರೋಪವನ್ನ ಇತ್ತೀಚೆಗೆ ಪಾಕ್ ಚುನಾವಣೆ ಅಧಿಕಾರಿ ಒಬ್ಬರು ಮಾಡಿದ್ದರು. ಈ ಆರೋಪದ ನಂತರ ಪಾಕಿಸ್ತಾನದ ಪ್ರಜಾಪ್ರಭುತ್ವ ಬಗ್ಗೆ, ಪಾಕ್‌ನ ಚುನಾವಣಾ ವ್ಯವಸ್ಥೆ ಬಗ್ಗೆ ದೊಡ್ಡ ಅನುಮಾನ ಮೂಡಿದೆ. ಹೀಗಾಗಿ ಡ್ಯಾಮೇಜ್ ಸರಿ ಮಾಡಿಕೊಳ್ಳಲು ಪಾಕಿಸ್ತಾನ ಸರ್ಕಾರ, ತಿಪ್ಪೆ ಸಾರಿಸಲು ಮುಂದಾಗಿದೆ.

2 ವಾರದ ಹಿಂದೆ ಸಂಸತ್ ಚುನಾವಣೆ
ಪಾಕಿಸ್ತಾನದಲ್ಲಿ 2 ವಾರದ ಹಿಂದೆ ಸಂಸತ್ ಚುನಾವಣೆ ನಡೆದಿತ್ತು. ಪಾಕಿಸ್ತಾನದಲ್ಲಿ ಯಾರಿಗೂ ಬಹುಮತ ಸಿಕ್ಕಿಲ್ಲ. ಹೀಗಾಗಿ ಅತಂತ್ರ ಪರಿಸ್ಥಿತಿ ಈಗ ಸೃಷ್ಟಿಯಾಗಿದ್ದು. ಹೀಗಿದ್ದಾಗ ಅಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಹೊರತು ಸರ್ಕಾರ ರಚನೆ ಮಾಡಲು ಇಮ್ರಾನ್ ಶತ್ರುಗಳೆಲ್ಲಾ ಪ್ಲ್ಯಾನ್ ಮಾಡಿದ್ದಾರೆ. ಇದೇ ಸಮಯದಲ್ಲಿ ಪಾಕಿಸ್ತಾನ ಚುನಾವಣಾ ಆಯೋಗ ಮುಖ್ಯ ಆಯುಕ್ತರು & ಮುಖ್ಯ ನ್ಯಾಯಮೂರ್ತಿ ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮಕ್ಕೆ ಬೆಂಬಲ ನೀಡಿದ್ದರು. ಪಾಕಿಸ್ತಾನ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಪಾಕಿಸ್ತಾನ ಅಧಿಕಾರಿ ಆರೋಪ ಮಾಡಿದ್ದರು. ಈಗ ತನಿಖೆಗೆ ಖಡಕ್ ಆದೇಶ ನೀಡಿದೆ ಪಾಕ್‌ನ ಹಂಗಾಮಿ ಸರ್ಕಾರ.
ಆರೋಪ ಮಾಡಿದ್ದು ಯಾರು ಗೊತ್ತೆ?
ರಾವಲ್ಪಿಂಡಿ ಮಾಜಿ ಆಯುಕ್ತ ಲಿಯಾಖತ್ ಅಲಿ ಛತ್ತಾ ಅಕ್ರಮ ನಡೆದ ಆರೋಪ ಮಾಡಿದ್ದರು. ಇದೀಗ ಈ ಬಗ್ಗೆ ಗಂಭೀರ ತನಿಖೆಗೆ ಪಾಕಿಸ್ತಾನ ಚುನಾವಣೆ ಆಯೋಗ ಮುಂದಾಗಿದೆ. ಈ ಜಂಟಿ ತನಿಖಾ ತಂಡದಲ್ಲಿ (ಜೆಐಟಿ) ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‌ಐ) ಜತೆಗೆ ಇಂಟೆಲಿಜೆನ್ಸ್ ಬ್ಯೂರೊ (ಐಬಿ), ರಾಷ್ಟ್ರೀಯ ದತ್ತಾಂಶ ಮತ್ತು ನೋಂದಣಿ ಪ್ರಾಧಿಕಾರ (ಎನ್‌ಎಡಿಆರ್‌ಎ), ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ(ಪಿಟಿಎ) ಸೇರಿಸಲಾಗಿದೆ. ಇನ್ನು ಈ ಸಮಿತಿ ಈಗ 15 ದಿನದ ಒಳಗೆ ವರದಿ ಸಲ್ಲಿಸಬೇಕೆಂದು ಪಾಕಿಸ್ತಾನದ ಉಸ್ತುವಾರಿ ಸರ್ಕಾರ ಖಡಕ್ ಸೂಚನೆಯ ಕೂಡ ಕೊಟ್ಟಿದೆ.

ಟ್ವಿಟ್ಟರ್ ಬ್ಯಾನ್ ಮಾಡಿದ ಪಾಕಿಸ್ತಾನ
ಇಷ್ಟೆಲ್ಲದರ ನಡುವೆ ಪಾಕಿಸ್ತಾನ ಪರಿಸ್ಥಿತಿ ನಿಭಾಯಿಸುವುದು ಅಲ್ಲಿನ ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿದೆ. ಪಾಕಿಸ್ತಾನದಲ್ಲಿ ಇದೀಗ ಸಾಮಾಜಿಕ ಜಾಲತಾಣದ ವೇದಿಕೆ 'ಎಕ್ಸ್' ಅಂದರೆ ಈ ಹಿಂದಿನ ಟ್ವಿಟ್ಟರ್ ಅನ್ನ ಬ್ಯಾನ್ ಮಾಡಲಾಗಿದೆ. ಹೀಗೆ ಬ್ಯಾನ್ ಮಾಡಿದ ನಂತರವೂ, ಪರಿಸ್ಥಿತಿ ಹಿಡಿತಕ್ಕೆ ಬಂದಿಲ್ಲ. ಹೀಗಾಗಿ ಈಗಲೂ ಬಳಕೆದಾರರಿಗೆ ಪಾಕಿಸ್ತಾನದಲ್ಲಿ ಟ್ವಿಟ್ಟರ್ ಓಪನ್ ಆಗ್ತಾ ಇಲ್ಲ. ಇದರ ಜೊತೆಗೆ ಅನೇಕ ಪ್ರದೇಶದಲ್ಲಿ ಇಂಟರ್‌ನೆಟ್ ಕೂಡ ಸಿಗುತ್ತಿಲ್ಲ.












Click it and Unblock the Notifications