ಜಸ್ಟ್ 436 ಕೆ.ಜಿ. ತೂಕ ಅಷ್ಟೇ! ಪಾಕಿಸ್ತಾನದ ‘ಹಲ್ಕ್’ ಬಗ್ಗೆ ನಿಮಗೆಷ್ಟು ಗೊತ್ತು?
ಆತನ ತೂಕ ಬರೋಬ್ಬರಿ 436 ಕೆ.ಜಿ, ಇನ್ನು ಆತ ಎದುರಿಗೆ ನಿಂತರೆ ಬಂಡೆಯೇ ನಿಂತಂತೆ. ಅಂದಹಾಗೆ ನಾವು ಹೇಳ್ತಿರೋದು ಪಾಕಿಸ್ತಾನದ ಹಲ್ಕ್ ಬಗ್ಗೆ. ಅರ್ಬಾಬ್ ಖಿಝೆರ್ ಹಾಯತ್ ಹೆಸರಿನ ಈ ವ್ಯಕ್ತಿ ಖಾನ್ ಬಾಬಾ ಎಂಬ ಹೆಸರಿನಿಂದ ಫೇಮಸ್. ಸೋಷಿಯಲ್ ಮೀಡಿಯಾದಲ್ಲಿ ಈತನ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅಷ್ಟಕ್ಕೂ ಈತ ಯಾರು? ಈತ ಇಷ್ಟೊಂದು ದಪ್ಪಗಾಗಲು ಕಾರಣ ಏನು ಅನ್ನೋದೆ ಕುತೂಹಲ ಕೆರಳಿಸುವ ವಿಚಾರ. ಪಾಕಿಸ್ತಾನದ ಖೈಬರ್ ಪ್ರಾಂತ್ಯದ ಅರ್ಬಾಬ್ ಖಿಝೆರ್ ಹಾಯತ್ ಅಲಿಯಾಸ್ ಖಾನ್ ಬಾಬಾ 18ನೇ ವಯಸ್ಸಿನಲ್ಲಿ ಇದ್ದಾಗ ವಿಪರೀತವಾಗಿ ದೇಹದ ತೂಕ ಹೆಚ್ಚುತ್ತಾ ಹೋಗಿತ್ತು. ಇದೇ ರೀತಿ ದೇಹದ ತೂಕ ಹೆಚ್ಚುತ್ತಾ ಹೆಚ್ಚುತ್ತಾ ಖಾನ್ ಬಾಬಾ ಬರೋಬ್ಬರಿ 436 ಕೆ.ಜಿ.ಗೆ ತಲುಪಿದ್ದಾನೆ. ಆದರೆ ಈ ರೀತಿ ಅತಿಯಾದ ತೂಕ ಇದ್ದರೂ ಖಾನ್ ಬಾಬಾಗೆ ಯಾವುದೇ ಸಮಸ್ಯೆ ಆಗುತ್ತಿಲ್ಲವಂತೆ. ಬದಲಾಗಿ ಇದು ತನ್ನ ತಾಕತ್ತು ಅಂತಾ ಎದೆಯುಬ್ಬಿಸುತ್ತಾನೆ ಖಾನ್ ಬಾಬಾ.
ದಿನಕ್ಕೆ 4 ಕೋಳಿ, 36 ಮೊಟ್ಟೆ!
ಖಾನ್ ಬಾಬಾ ದೇಹದ ತೂಕವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಪ್ರತಿದಿನ ಬರೋಬ್ಬರಿ 10 ಸಾವಿರ ಕ್ಯಾಲೋರಿ ಆಹಾರ ಸೇವಿಸುತ್ತಾನೆ. ಪ್ರತಿದಿನವೂ 4 ಕೋಳಿ, 36 ಮೊಟ್ಟೆ ಸೇರಿದಂತೆ 5 ಲೀಟರ್ ಹಾಲು ಕುಡಿಯುತ್ತಾನೆ. ಹಾಗೇ ವ್ಯಾಯಾಮದಲ್ಲೂ ಖಾನ್ ಬಾಬಾ ಕಟ್ಟುನಿಟ್ಟು. ಇಷ್ಟು ಆಹಾರ ಸೇವಿಸಿದರೂ ಖಾನ್ ಬಾಬಾ ಅದನ್ನ ಅರಗಿಸಿಕೊಳ್ಳಲು ಶಕ್ತನಾಗಿದ್ದಾನೆ. ಈಗಾಗಲೇ 500 ಕೆ.ಜಿ. ಸಮೀಪವಿರುವ ಖಾನ್ ಬಾಬಾ ತೂಕ, ಇನ್ನೇನು ಮತ್ತೊಂದು ದಾಖಲೆ ನಿರ್ಮಿಸುವ ಸನಿಹದಲ್ಲಿದೆ. ಹೊಸ ದಾಖಲೆಗಾಗಿ ಖಾನ್ ಬಾಬಾ ಸಜ್ಜಾಗಿದ್ದಾನೆ.

ಬಾಬಾಗೆ ಫೈಟರ್ ಆಗುವಾಸೆ!
ಡಬ್ಲ್ಯೂಡಬ್ಲ್ಯೂಇ ಸೇರಬೇಕೆಂಬ ಆಸೆ ಹೊಂದಿರುವ ಖಾನ್ ಬಾಬಾ ಅದಕ್ಕಾಗಿ ಸುಮಾರು ವರ್ಷಗಳಿಂದ ತಯಾರಿ ನಡೆಸುತ್ತಿದ್ದಾನೆ. ಇದಕ್ಕೂ ಮೊದಲು ವೇಯ್ಟ್ ಲಿಫ್ಟಿಂಗ್‌ನಲ್ಲಿ ಖಾನ್ ಬಾಬಾ ತನ್ನ ತಾಕತ್ತು ಪ್ರದರ್ಶನ ಮಾಡಿದ್ದಾನೆ. ಆದರೆ ತನಗೆ ಸ್ಥಳೀಯ ಸರ್ಕಾರದಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ ಎಂಬ ಅಳಲು ಖಾನ್ ಬಾಬಾಗೆ ಕಾಡುತ್ತಿದೆ. ಇಷ್ಟಾದರೂ ಛಲ ಬಿಡದೆ ತನ್ನ ಪ್ರಯತ್ನ ಮುಂದುವರಿಸಿದ್ದಾನೆ ಖಾನ್ ಬಾಬಾ. ಮುಂಬರುವ ದಿನದಲ್ಲಿ ಡಬ್ಲ್ಯೂಡಬ್ಲ್ಯೂಇ ಸ್ಟಾರ್ ಆಗುವ ಕನಸು ಈ ಖಾನ್ ಬಾಬಾನದ್ದು.
Recommended Video
ಹೊರಗೆ ಹೋಗೋದೆ ಕಷ್ಟ!
ತೂಕ ಇದ್ದರೆ ಸಾಲುವುದಿಲ್ಲ, ಅದರಿಂದ ಎದುರಿಸಬೇಕಾದ ಸಮಸ್ಯೆಗಳು ಸಾವಿರ. ಇದೇ ರೀತಿ ಖಾನ್ ಬಾಬಾ ಹತ್ತಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾನೆ. ತನ್ನ ದೇಹದ ಗಾತ್ರಕ್ಕೆ ತಕ್ಕ ವಾಹನ ಸಿಗದೆ ಖಾನ್ ಬಾಬಾ ಹೊರ ಹೋಗಲು ಪರದಾಡುತ್ತಾನಂತೆ. ಹೋದರೂ ಸರಿಯಾಗಿ ಕೂರಲು ಆಗಲ್ಲ, ಓಡಾಡಲು ಕಷ್ಟ ಕಷ್ಟ. ಹೀಗಾಗಿ ತನಗೆ ಸರ್ಕಾರ ಸಹಾಯ ಮಾಡಬೇಕು, ತನ್ನ ಸಾಧನೆಗೆ ಬೆಂಬಲ ನೀಡಬೇಕು ಅಂತಿದ್ದಾನೆ ಖಾನ್ ಬಾಬಾ. ಪಾಕ್ ಸರ್ಕಾರಕ್ಕೆ ಖಾನ್ ಬಾಬಾ ಸಾಧನೆ ಕಾಣುತ್ತಿಲ್ಲವೇನೋ. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಈತನಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.












Click it and Unblock the Notifications