ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ಗೆ ಸಿಧು ಭೇಟಿ : ಧನ್ಯವಾದ ಸಲ್ಲಿಸಿದ ಪ್ರಧಾನಿ ಇಮ್ರಾನ್ ಖಾನ್

By Gururaj
|
Google Oneindia Kannada News

ಕರಾಚಿ, ಆಗಸ್ಟ್ 21 : ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸಮಾರಂಭಕ್ಕೆ ನವಜೋತ್ ಸಿಂಗ್ ಸಿಧು ಹೋಗಿದ್ದು ವಿವಾದಕ್ಕೆ ಕಾರಣವಾಗಿದೆ. ಆದರೆ, ಇಮ್ರಾನ್ ಖಾನ್ ಸಿಧು ಆಗಮನವನ್ನು ಸ್ವಾಗತಿಸಿದ್ದಾರೆ.

ಸಿಧು ತಲೆಗೆ 5 ಲಕ್ಷ ರೂ. ಎಂದ ಬಜರಂಗ ದಳ ಮುಖಂಡ ಸಿಧು ತಲೆಗೆ 5 ಲಕ್ಷ ರೂ. ಎಂದ ಬಜರಂಗ ದಳ ಮುಖಂಡ

ಮಾಜಿ ಕ್ರಿಕೆಟಿಗ ಮತ್ತು ಪಂಜಾಬ್ ಸರ್ಕಾರದ ಸಚಿವ ನವಜೋತ್ ಸಿಂಗ್ ಸಿಧು ಇಮ್ರಾನ್ ಖಾನ್ ಪ್ರಮಾಣ ವಚನ ಸಮಾರಂಭಕ್ಕೆ ಹೋಗಿದ್ದರು. ಇಮ್ರಾನ್ ಖಾನ್ ಅವರ ಆಹ್ವಾನದ ಮೇರೆಗೆ ಅವರು ಪಾಕಿಸ್ತಾನಕ್ಕೆ ತೆರಳಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಇಮ್ರಾನ್ ಖಾನ್ ಪ್ರಮಾಣ ವಚನದಲ್ಲಿ ಸಿದ್ದು: ಭಾರತದ ಸ್ವಾಭಿಮಾನಕ್ಕಾದ ಧಕ್ಕೆ?ಇಮ್ರಾನ್ ಖಾನ್ ಪ್ರಮಾಣ ವಚನದಲ್ಲಿ ಸಿದ್ದು: ಭಾರತದ ಸ್ವಾಭಿಮಾನಕ್ಕಾದ ಧಕ್ಕೆ?

ನವಜೋತ್ ಸಿಂಗ್ ಸಿಧು ಪಾಕಿಸ್ತಾನ ಭೇಟಿ ಬಗ್ಗೆ ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ. ಆದರೆ, ಇಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನವಜೋತ್ ಸಿಂಗ್ ಸಿಧು ಆಗಮನವನ್ನು ಸ್ವಾಗತಿಸಿದ್ದಾರೆ ಮತ್ತು ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Pakistan PM Imran Khan thanked Navjot Singh Sidhu

'ಸಿಧು ಆಗಮನಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಅವರು ಶಾಂತಿಯ ದೂತರು, ಅವರಿಗೆ ಪಾಕಿಸ್ತಾನದ ಜನರು ಬಹಳ ಪ್ರೀತಿ ತೋರಿಸಿದ್ದಾರೆ. ಅವರನ್ನು ವಿರೋಧಿಸುತ್ತಿರುವವರು ಶಾಂತಿಯನ್ನು ಬಯಸುವವರಲ್ಲ. ಶಾಂತಿ, ಸಹಭಾಳ್ವೆಯಿಂದಾಗಿ ಮಾತ್ರ ಅಭಿವೃದ್ಧಿ ಸಾಧ್ಯ' ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ.

ಕ್ರಿಕೆಟ್, ರಾಜಕೀಯ, ವಿವಾಹ ವಿಚ್ಛೇದನ : ವಿಕ್ಷಿಪ್ತವ್ಯಕ್ತಿ ಇಮ್ರಾನ್ ಖಾನ್ಕ್ರಿಕೆಟ್, ರಾಜಕೀಯ, ವಿವಾಹ ವಿಚ್ಛೇದನ : ವಿಕ್ಷಿಪ್ತವ್ಯಕ್ತಿ ಇಮ್ರಾನ್ ಖಾನ್

'ಭಾರತ ಮತ್ತು ಪಾಕಿಸ್ತಾನ ಮುಂದಿನ ದಿನಗಳಲ್ಲಿ ಕಾಶ್ಮೀರದಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದುವರೆಯಬೇಕು' ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

English summary
I want to thank Navjot Singh Sidhu for coming to Pakistan for my oath taking. He was an ambassador of peace. Those in India who targeted him are doing a great disservice to peace in the subcontinent said Pakistan PM Imran Khan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X