ಹೆಣ್ಮಕ್ಕಳಿಗೆ ಶಿಕ್ಷಣ ನೀಡದಿರುವುದು ಅಫ್ಘಾನ್ ಸಂಸ್ಕೃತಿಯ ಭಾಗ:ಇಮ್ರಾನ್
ಇಸ್ಲಾಮಾಬಾದ್, ಡಿಸೆಂಬರ್ 23: ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡದಿರುವುದು ಕೂಡ ಅಫ್ಘಾನ್ ಸಂಸ್ಕೃತಿಯ ಒಂದು ಭಾಗ ಎಂದು ಪಾಕಿಸ್ತಾನ ಮುಖ್ಯಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ. ತಮ್ಮ ಭಾಷಣದಲ್ಲಿ ಅವರು ತಾಲಿಬಾನ್ ಅನ್ನು ಸಮರ್ಥಿಸಿಕೊಳ್ಳುತ್ತಾ ಹೆಣ್ಣುಮಕ್ಕಳಿಗೆ ಶಿಕ್ಷಣ ಒದಗಿಸದಿರುವುದು ಆಫ್ಘನ್ ಸಂಸ್ಕೃತಿಯ ಭಾಗ ಎಂದಿದ್ದರು ಇಮ್ರಾನ್.
ಮಾನವ ಹಕ್ಕುಗಳ ಸಂಘಟನೆ ಪ್ರಕಾರ 2021 ಅಫ್ಘಾನಿಸ್ತಾನ ಮಹಿಳೆಯರ ಪಾಲಿಗೆ ಕೆಟ್ಟ ವರ್ಷ. ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬರುವುದರೊಂದಿಗೆ ಮಹಿಳೆಯರಿಗೆ ದೇಶದಲ್ಲಿದ್ದ ಅಷ್ಟಿಷ್ಟು ಹಕ್ಕುಗಳು, ಸ್ವಾತಂತ್ರ್ಯ ಕಳೆದುಹೋಗಿತ್ತು.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿದ್ದು, ಜಾಗತಿಕ ಮಟ್ಟದಲ್ಲಿ ಟ್ರಾಲಿಂಗ್ ಗೆ ಒಳಗಾಗಿದ್ದಾರೆ. ಇಸ್ಲಾಮಿಕ್ ಸಹಕಾರ ಸಂಘ ಆಯೋಜಿಸಿದ್ದ ಶೃಂಗಸಭೆಯಲ್ಲಿ ಮಾತನಾಡುವ ವೇಳೆ ಇಮ್ರಾನ್ ಖಾನ್ ಈ ವಿವಾದಿತ ಹೇಳಿಕೆ ನೀಡಿದ್ದರು.

ಮಹಿಳೆಯರ ಶಿಕ್ಷಣದ ವಿಷಯದಲ್ಲಿ ಕಠಿಣ ನಿಲುವುಗಳನ್ನು ಹೊಂದಿರುವ ತಾಲಿಬಾನ್ ಉಗ್ರರು, ಮಹಿಳೆಯರ ಉನ್ನತ ಶಿಕ್ಷಣಕ್ಕೆ ಷರತ್ತಿನ ಅನುಮತಿ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ತಾಲಿಬಾನ್ ಸರ್ಕಾರ, ಮುಂದಿನ ದಿನಗಳಲ್ಲೂ ದೇಶದ ಮಹಿಳೆಯರು ಸ್ನಾತಕೋತ್ತರ ಪದವಿ ಸೇರಿ ವಿವಿಗಳಲ್ಲಿ ಉನ್ನತ ಶಿಕ್ಷಣ ಪಡೆಯಬಹುದು. ಆದರೆ ತರಗತಿ ಕೊಠಡಿಗಳು ಯುವತಿ ಮತ್ತು ಯುವಕರಿಗೆ ಪ್ರತ್ಯೇಕವಾಗಿರುತ್ತವೆ. ಜೊತೆಗೆ ಇಸ್ಲಾಮಿಕ್ ವಸ್ತ್ರ ಸಂಹಿತೆ ಕಡ್ಡಾಯ ಎಂದು ತಾಲಿಬಾನ್ ಸರ್ಕಾರ ಸ್ಪಷ್ಟಪಡಿಸಿದೆ.
ಹೊಸ ಶಿಕ್ಷಣ ನೀತಿ ಬಗ್ಗೆ ಮಾತನಾಡಿದ ನೂತನ ಶಿಕ್ಷಣ ಸಚಿವ ಅಬ್ದುಲ್ ಹಕ್ಕಾನಿ, 'ತಾಲಿಬಾನ್ 20 ವರ್ಷಗಳ ಹಿಂದಕ್ಕೆ ಹೋಗಲು ಇಷ್ಟಪಡಲ್ಲ. ಹಾಗಾಗಿ ಮಹಿಳೆಯರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪುರುಷ ಮತ್ತು ಮಹಿಳೆಯರ ಸಹ ಶಿಕ್ಷಣಕ್ಕೆ ಅವಕಾಶ ನೀಡುವುದಿಲ್ಲ.
1990ರ ದಶಕದಲ್ಲಿ ಅಫ್ಘನ್‌ನಲ್ಲಿ ಆಳ್ವಿಕೆ ನಡೆಸಿದ್ದ ತಾಲಿಬಾನ್ ಮಹಿಳೆಯರಿಗೆ ಶಿಕ್ಷಣವನ್ನು ನಿರಾಕರಿಸಿತ್ತು ಮತ್ತು ಸಾರ್ವಜನಿಕ ಜೀವನದಿಂದಲೂ ಹೊರಗಿಟ್ಟಿತ್ತು.
ಮಹಿಳೆಯರು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ನಡೆಸಲು ತಾಲಿಬಾನ್ ಅವಕಾಶ ನೀಡಿದೆ.
ಆದರೆ, ಹೊಸ ನಿಯಮಗಳ ಅಡಿಯಲ್ಲಿ ಯುವಕ ಮತ್ತು ಯುವತಿಯರು ಒಟ್ಟಿಗೆ ಕಲಿಕೆಯಲ್ಲಿ ಭಾಗಿಯಾಗಲು ಅವಕಾಶ ಇರುವುದಿಲ್ಲ ಎಂದು ತಾಲಿಬಾನ್ ಹಂಗಾಮಿ ಉನ್ನತ ಶಿಕ್ಷಣ ಸಚಿವ ಹೇಳಿದ್ದಾರೆ.
ತಾಲಿಬಾನ್ ಆಡಳಿತ 90ರ ದಶಕದಲ್ಲಿ ಹುಡುಗಿಯರು ಮತ್ತು ಮಹಿಳೆಯರು ಶಿಕ್ಷಣ ಪಡೆಯುವುದನ್ನು ನಿಷೇಧಿಸಿತ್ತು, ಆಗಸ್ಟ್ 15 ರಂದು ಮತ್ತೆ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಗಳು ಭಿನ್ನ ಆಡಳಿತ ನೀಡುವ ಭರವಸೆ ನೀಡಿದ್ದರು.
ಶರಿಯಾ ಕಾನೂನಿನ ಅನ್ವಯ ಅಫ್ಘಾನಿಸ್ತಾನದ ಜನತೆ ಉನ್ನತ ಶಿಕ್ಷಣ ಪಡೆಯುವುದನ್ನು ಮುಂದುವರೆಸಬಹುದಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಕಲಿಯುವ ವಾತಾವರಣ ಸೃಷ್ಟಿಸಲಾಗುತ್ತದೆ ಎಂದು ತಾಲಿಬಾನ್ ಹಂಗಾಮಿ ಉನ್ನತ ಶಿಕ್ಷಣ ಸಚಿವ ಅಬ್ದುಲ್ ಬಖಿ ಹಖಾನಿ ತಿಳಿಸಿದರು.












Click it and Unblock the Notifications