• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ನೇರ ನಗದು ಕಾರ್ಯಕ್ರಮದ ಮಾಹಿತಿ ಭಾರತದೊಂದಿಗೆ ಹಂಚಿಕೊಳ್ಳಲು ಸಿದ್ಧ'

|

ನವದೆಹಲಿ, ಜೂನ್ 11:ಲಾಕ್‌ಡೌನ್ ಸಂದರ್ಭದಲ್ಲಿ ದೇಶದ ಜನರಿಗೆ ನೆರವಾಗಲು ಪಾಕಿಸ್ತಾನ ಅಳವಡಿಸಿಕೊಂಡಿರುವ ನೇರ ನಗದು ಕಾರ್ಯಕ್ರಮದ ಕುರಿತು ಭಾರತದೊಂದಿಗೆ ಮಾಹಿತಿ ಹಂಚಿಕೊಳ್ಳಲು ಪಾಕಿಸ್ತಾನ ಸಿದ್ಧವಿದೆ ಎಂದು ಹೇಳಿದೆ.

ಲಾಕ್‌ಡೌನ್ ಘೋಷಣೆಯಾದ ಬಳಿಕ ಭಾರತದಲ್ಲಿ ಬಾಧಿತರಿಗೆ ನೆರವು ನೀಡುವ ಯೋಜನೆ ಘೋಷಿಸಿತ್ತು. ಅದನ್ನು ಫಲಾನುಭವಿಗಳಿಗೆ ತಲುಪಿಸಲು ಭಾರತ ಸರ್ಕಾದ ಜೊತೆ ಪಾಕಿಸ್ತಾನದಲ್ಲಿ ಅಳವಡಿಸಿಕೊಂಡಿರುವ ನೇರ ನಗದು ಕಾರ್ಯಕ್ರಮದ ಕುರಿತು ವಿವರಗಳನ್ನು ಹಂಚಿಕೊಳ್ಳಲು ಸಿದ್ಧ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದರು.

ಪಾಕಿಸ್ತಾನದಲ್ಲಿ ಜಾರಿಗೆ ತರಲಾಗಿರುವ ನೇರ ನಗದು ಹಣ ಕಾರ್ಯಕ್ರಮವನ್ನು ಶ್ಲಾಘಿಸಿಕೊಂಡಿರುವ ಪ್ರಧಾನಿ, ಇದೇ ಯೋಜನೆಯ ಗುಟ್ಟನ್ನು ತಿಳಿಸುವುದಾಗಿ ಹೇಳಿದ್ದಾರೆ.

ಪಾಕ್ ಮಾಜಿ ಪ್ರಧಾನಿಗೆ ಕೊರೊನಾ, ಒಟ್ಟು ಕೊವಿಡ್‌ಗೆ ಬಲಿಯಾದವರೆಷ್ಟು?

ಪಾಕಿಸ್ತಾನವು ಇನ್ನೊಂದೆಡೆ ಕೊರೊನಾ ವೈರಸ್ ನಿಯಂತ್ರಿಸಲು ಆಗದೆ ತನ್ನ ದೇಶದಲ್ಲಿ ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಬೇರೆ ದೇಶದವರ ಬಳಿ ಹಣಕ್ಕಾಗಿ ಅಂಗಲಾಚುತ್ತಿದೆ.

ಪಾಕಿಸ್ತಾನದ ಸೇನಾ ಜನರಲ್ ಸರ್ಕಾರದ ಮೇಲೆ ಹಿಡಿತ ಸಾಧಿಸಲು ತಯಾರಿ ನಡೆಸಿರುವ ಕಾರಣದಿಂದ ಖುರ್ಚಿಯನ್ನು ಭದ್ರಪಡಿಸಿಕೊಳ್ಳಲು ಒದ್ದಾಡುತ್ತಾ, ಕೊರೊನಾ ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಎಂದು ಭಾರತಕ್ಕೆ ಸಲಹೆ ಕೊಡುವ ಮೂಲಕ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.

ವರದಿಯ ಪ್ರಕಾರ, ಪಾಕಿಸ್ತಾನ ಪ್ರಧಾನಿ ಸಚಿವಾಲಯವು ಪ್ರಸ್ತುತ ಇಸ್ಲಾಮಾಬಾದ್ ವಿದ್ಯುತ್ ಸರಬರಾಜು ಕಂಪನಿ 41 ಲಕ್ಷ ರೂ ಬಿಲ್ ಕಟ್ಟಬೇಕು. ಆದರೆ ಈ ವಿಚಾರವಾಗಿ ಹಲವಾರು ಬಾರಿ ನೋಟಿಸ್‍ಗಳನ್ನು ಕಳುಹಿಸಿದ್ದರೂ ಸಹ ಸಚಿವಾಲಯವು ಬಾಕಿ ಪಾವತಿಸಲು ವಿಫಲವಾಗಿತ್ತು. ಪಾಕಿಸ್ತಾನವೇ ಆರ್ಥಿಕವಾಗಿ ಕುಗ್ಗಿರುವಾಗ ಭಾರತಕ್ಕೆ ಹೇಗೆ ಸಲಹೆ ನೀಡುತ್ತದೆ ಎಂದು ಸಾಕಷ್ಟು ಮಂದಿ ಪ್ರಶ್ನೆ ಮಾಡಿದ್ದಾರೆ.

 ಹಣಕಾಸು ವರ್ಷದಲ್ಲಿ ಪಾಕಿಸ್ತಾನದ ಆರ್ಥಿಕತೆ ರೆಡ್‌ಝೋನ್‌ಗೆ

ಹಣಕಾಸು ವರ್ಷದಲ್ಲಿ ಪಾಕಿಸ್ತಾನದ ಆರ್ಥಿಕತೆ ರೆಡ್‌ಝೋನ್‌ಗೆ

ಈಗಾಗಲೇ ರಾಪಿಡ್ ಫೈನಾನ್ಸಿಂಗ್ ಇನ್ಸ್ಟ್ರುಮೆಂಟ್ ಅಡಿಯಲ್ಲಿ ಪಾಕಿಸ್ತಾನಕ್ಕೆ 381.386 ಬಿಲಿಯನ್ ಡಾಲರ್ ಹಣವನ್ನು ನೀಡಲು 2020ರ ಏಪ್ರಿಲ್‌ನಲ್ಲಿ ಐಎಂಎಫ್ ಅನುಮೋದನೆ ನೀಡಿದೆ. ವಿಶ್ವ ಬ್ಯಾಂಕ್ ವರದಿಯ ಪ್ರಕಾರ ಈ ಹಣಕಾಸು ವರ್ಷದಲ್ಲಿ ಪಾಕಿಸ್ತಾನ ಆರ್ಥಿಕತೆಯ ರೆಡ್‌ಝೋನ್‌ಗೆ ತಲುಪುವ ಸಾಧ್ಯತೆ ಇದೆ. ಮುಂದಿನ ವರ್ಷವೂ ಚೇತರಿಗೆ ಕಾಣುವ ಸಾಧ್ಯತೆಗಳಿಲ್ಲ.

 ನೇರ ನಗದು ವರ್ಗಾವಣೆ

ನೇರ ನಗದು ವರ್ಗಾವಣೆ

ಪಾಕಿಸ್ತಾನದಲ್ಲಿ ಜಾರಿಗೊಳಿಸಲಾಗಿರುವ ನೇರ ನಗದು ವರ್ಗಾವಣೆ ಕಾರ್ಯಕ್ರಮವನ್ನು ಇಮ್ರಾನ್ ಖಾನ್ ಸ್ವತಃ ಕೊಂಡಾಡಿದ್ದಾರೆ. ಇದೇ ಯೋಜನೆಯಡಿ ಭಾರತಕ್ಕೆ ಸಹಾಯ ಮಾಡುವುದಾಗಿ ಹೇಳಿಕೊಂಡು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.

 ಭಾರತೀಯ ಕುಟುಂಬಗಳ ಮಾಸಿಕ ಆದಾಯ ಇಳಿಕೆ

ಭಾರತೀಯ ಕುಟುಂಬಗಳ ಮಾಸಿಕ ಆದಾಯ ಇಳಿಕೆ

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಮೇ 12 ರಂದು ಪ್ರಕಟ ಮಾಡಿರುವ ವರದಿಯನ್ನು ಈಗ ಉಲ್ಲೇಖಿಸಿರುವ ಇಮ್ರಾನ್ ಖಾನ್, ಶೇ.84ರಷ್ಟು ಭಾರತೀಯ ಕುಟುಂಬದವರ ಮಾಸಿಕ ಆದಾಯ ಲಾಕ್‌ಡೌನ್‌ನಿಂದ ಇಳಿಕೆಯಾಗುತ್ತಿದೆ. ಶೇ.34ರಷ್ಟು ಕುಟುಂಬಗಳು ನಗದು ಸಹಾಯವಿಲ್ಲದೆ ಆಹಾರವಿಲ್ಲದೆ ಬದುಕಲು ಸಾಧ್ಯವಾಗುತ್ತಿಲ್ಲ ಇಂತಹ ಕುಟುಂಬಗಳಿಗೆ ನಾವು ಸಹಾಯ ಮಾಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನಕ್ಕೆ ಭಾರತ ತಿರುಗೇಟು

ಪಾಕಿಸ್ತಾನಕ್ಕೆ ಭಾರತ ತಿರುಗೇಟು

ಭಾರತದ ಆರ್ಥಿಕ ಉತ್ತೇಜನ ಪ್ಯಾಕೇಜ್ ಒಂದು ವರ್ಷದ ಪಾಕಿಸ್ತಾನದ ಜಿಡಿಪಿಗಿಂತ ಹೆಚ್ಚಿದೆ ಎಂದು ಅವರು ನೆನಪಿಟ್ಟುಕೊಳ್ಳುವುದು ಉತ್ತಮ. ಕಳೆದ ತಿಂಗಳು ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಉತ್ತೇಜನಾ ಪ್ಯಾಕೇಜ್ ಘೋಷಿಸಿದ್ದರು. ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಈಡಾಗಿರುವ ಹಾಗೂ ಆರ್ಥಿಕತೆಗೆ ನೆರವಾಗಲಿ ಎಂದು ಈ ಘೋಷಣೆ ಮಾಡಲಾಗಿದೆ. ಮೊತ್ತವು ವಲಸೆ ಕಾರ್ಮಿಕರು, ಬಡವರು ಸೇರಿದಂತೆ ಯಾವ ಕ್ಷೇತ್ರಕ್ಕೆ ಎಷ್ಟು ಎಂದು ಆ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದರು.

English summary
Hailing Pakistan's 'successful' cash transfer program, Pakistan Prime Minister Imran Khan, on Thursday, offered to help India in mimicking his direct cash transfer, based on a report claiming that '84% Indian households suffered monthly income decrease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X