• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೆಹರೂಗೆ ದಂತವೈದ್ಯರಾಗಿದ್ದವರ ಮಗ ಅರಿಫ್ ಅಲ್ವಿ ಪಾಕ್ ರಾಷ್ಟ್ರಾಧ್ಯಕ್ಷ

|

ಪಾಕಿಸ್ತಾನಕ್ಕೆ ರಾಷ್ಟ್ರಾಧ್ಯಕ್ಷರಾಗಿ ಹೊಸದಾಗಿ ಆಯ್ಕೆಯಾಗಿರುವ ಡಾ.ಅರಿಫ್ ಅಲ್ವಿ ಅವರು ಭಾರತದ ಜತೆಗೆ ತಮಗಿರುವ ನಂಟಿನ ಬಗ್ಗೆ ಹೇಳಿಕೊಂಡಿದ್ದಾರೆ. ತೆಹ್ರೀಕ್-ಇ-ಇನ್ಸಾಫ್ ಪಕ್ಷದ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ಅಲ್ವಿ ಅವರ ಪುಟ್ಟ ಆತ್ಮಕಥನದ ಪ್ರಕಾರ, ಭಾರತದ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರಿಗೆ ಅಲ್ವಿಯ ತಂದೆ ದಂತವೈದ್ಯರಾಗಿದ್ದರು.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗೆ ನಿಕಟವರ್ತಿಯಾದ ಅರಿಫ್ ಅಲ್ವಿ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ನ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಮಂಗಳವಾರದಂದು ಹೊಸ ರಾಷ್ಟ್ರಾಧ್ಯಕ್ಷರಾಗಿ ಅರಿಫ್ ಅಲ್ವಿ ಆಯ್ಕೆಯಾಗಿದ್ದಾರೆ.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿ ಐತಾಜ್ ಎಹ್ಸಾನ್ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ಎನ್ ನ ಮೌಲಾನಾ ಫಜಲ್ ಉರ್ ರೆಹಮಾನ್ ರನ್ನು ಸೋಲಿಸಿದ 69 ವರ್ಷದ ಮಾಜಿ ದಂತವೈದ್ಯ ಅರಿಫ್ ಅಲ್ವಿ ಅವರು 13ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜಿನ್ನಾ ಕನಸಿನ ಪಾಕಿಸ್ತಾನ ಕಟ್ಟುವ ಮಾತನಾಡಿದ ಇಮ್ರಾನ್, ಹಾಗಿದ್ರೆ ಅದೇನು?

ನೆಹರೂ ಅವರ ದಂತವೈದ್ಯರ ಮಗ ಅಂತಷ್ಟೇ ಅಲ್ಲ, ದೇಶ ವಿಭಜನೆ ನಂತರ ಭಾರತದಿಂದ ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ರಾಷ್ಟ್ರಾಧ್ಯಕ್ಷರಾದ ಮತ್ತೊಬ್ಬ ವ್ಯಕ್ತಿ ಅಲ್ವಿ. ಅಲ್ವಿ ಪೂರ್ವಿಕರಾದ ಮಮ್ನೂನ್ ಹುಸೇನ್ ಕುಟುಂಬ ಆಗ್ರಾದಿಂದ ವಲಸೆ ಹೋಗಿತ್ತು. ಪಾಕ್ ಅಧ್ಯಕ್ಷರಾಗಿದ್ದ ಪರ್ವೇಜ್ ಮುಷರಫ್ ರ ಪೋಷಕರು ದೆಹಲಿಯಿಂದ ಪಾಕಿಸ್ತಾನಕ್ಕೆ ವಲಸೆ ಹೋದವರು.

ದೇಶ ವಿಭಜನೆಗೂ ಮುನ್ನ ನೆಹರೂಗೆ ದಂತವೈದ್ಯರಾಗಿದ್ದರು

ದೇಶ ವಿಭಜನೆಗೂ ಮುನ್ನ ನೆಹರೂಗೆ ದಂತವೈದ್ಯರಾಗಿದ್ದರು

ಅಲ್ವಿ ಅವರ ತಂದೆ ಡಾ.ಹಬೀಬ್ ಉರ್ ರೆಹಮಾನ್ ಇಲಾಹಿ ಅಲ್ವಿ ದೇಶ ವಿಭಜನೆಗೂ ಮುನ್ನ ನೆಹರೂ ಅವರಿಗೆ ದಂತವೈದ್ಯರಾಗಿದ್ದರು. ಈಗಿನ ರಾಷ್ಟ್ರಾಧ್ಯಕ್ಷರ ಪೂರ್ಣ ಹೆಸರು ಡಾ. ಅರಿಫ್ ಉರ್ ರೆಹಮಾನ್ ಅಲ್ವಿ. ಹುಟ್ಟಿದ್ದು 1947ರಲ್ಲಿ, ಪಾಕಿಸ್ತಾನದ ಕರಾಚಿಯಲ್ಲಿ. ದೇಶ ವಿಭಜನೆ ನಂತರ ಅವರ ತಂದೆ ಅಲ್ಲೇ ವಾಸ್ತವ್ಯ ಹೂಡಿದರು, ಕರಾಚಿಯ ಸದ್ದರ್ ನಲ್ಲಿ ವೃತ್ತಿ ಮುಂದುವರಿಸಿದರು. ತಂದೆಯಂತೆಯೇ ಅರಿಫ್ ಅಲ್ವಿ ಕೂಡ ದಂತವೈದ್ಯರಾದರು. ಅರಿಫ್ ರ ತಂದೆಗೂಹಾಗೂ ಮಹ್ಮದ್ ಅಲಿ ಜಿನ್ನಾ ಕುಟುಂಬಕ್ಕೆ ಸಹ ನಂಟಿತ್ತು. ಜಿನ್ನಾ ಅವರ ಸೋದರಿ ಶಿರಿನ್ ಬಾಯಿ ಜಿನ್ನಾ ಆರಂಭಿಸಿದ ಟ್ರಸ್ಟ್ ನಲ್ಲಿ ಅವರು ಸದಸ್ಯರಾಗಿದ್ದರು. ಆ ಟ್ರಸ್ಟ್ ಸಲುವಾಗಿ ಆಕೆ ಕರಾಚಿಯಲ್ಲಿದ್ದ ಮೊಹತ್ತಾ ಪ್ಯಾಲೇಸ್ ಸೇರಿದಂತೆ ತಮ್ಮ ಎಲ್ಲ ಆಸ್ತಿಯನ್ನು ಕೊಡುಗೆಯಾಗಿ ನೀಡಿದರು.

ನೆಹರೂ ಸ್ವಂತ ಲಾಭಕ್ಕಾಗಿ ದೇಶ ಇಬ್ಭಾಗವಾಯ್ತೆಂದ ದಲೈಲಾಮ

ಲಾಹೋರ್ ನಲ್ಲಿ ಪ್ರತಿಭಟನೆ ವೇಳೆ ಗುಂಡೇಟು ಬಿದ್ದಿತ್ತು

ಲಾಹೋರ್ ನಲ್ಲಿ ಪ್ರತಿಭಟನೆ ವೇಳೆ ಗುಂಡೇಟು ಬಿದ್ದಿತ್ತು

ಅರಿಫ್ ಅಲ್ವಿ ಅವರ ರಾಜಕೀಯ ಜೀವನ ಐದು ದಶಕದ ಹಿಂದೆ ವಿದ್ಯಾರ್ಥಿ ಆಗಿದ್ದ ದಿನಗಳಿಂದಲೇ ಆರಂಭವಾಯಿತು. ಜಮಾತ್-ಇ-ಇಸ್ಲಾಮಿ ವಿದ್ಯಾರ್ಥಿ ಘಟಕದ ಭಾಗವಾಗಿದ್ದ ಅವರು, ಸೇನಾಧಿಕಾರಿ ಅಯೂಬ್ ಖಾನ್ ಆಡಳಿತದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಲಾಹೋರ್ ನಲ್ಲಿ ನಡೆದ ಪ್ರತಿಭಟನೆ ವೇಳೆ ಅವರಿಗೆ ಗುಂಡೇಟು ಸಹ ಬಿದ್ದಿತ್ತು ಎಂದು ಪಕ್ಷದ ವೆಬ್ ಸೈಟ್ ನಲ್ಲಿ ಹೇಳಲಾಗಿದೆ.

ತೆಹ್ರೀಕ್-ಇ-ಇನ್ಸಾಫ್ ಗೆ ಸೇರ್ಪಡೆ

ತೆಹ್ರೀಕ್-ಇ-ಇನ್ಸಾಫ್ ಗೆ ಸೇರ್ಪಡೆ

1979ರಲ್ಲಿ ಜಮಾತ್-ಇ-ಇಸ್ಲಾಮಿಯಿಂದ ಚುನಾವಣೆಗೆ ನಿಂತು, ಸೋತರು. ಇದರಿಂದ ರಾಜಕಾರಣದ ಬಗ್ಗೆಯೇ ಭ್ರಮನಿರಸನರಾದರು. 1996ರಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಸೇರ್ಪಡೆಯಾದರು. ಆ ಪಕ್ಷದ ಸಂವಿಧಾನ ರಚನೆಯಲ್ಲೂ ನೆರವಾದರು. ಆ ಪಕ್ಷದಿಂದ 1997ರಲ್ಲಿ ಚುನಾವಣೆಗೆ ಸ್ಪರ್ಧಿಸಿ, ಸೋತರು.

ನಾಲ್ವರು ಮಕ್ಕಳ ತಂದೆ ಅರಿಫ್ ಅಲ್ವಿ

ನಾಲ್ವರು ಮಕ್ಕಳ ತಂದೆ ಅರಿಫ್ ಅಲ್ವಿ

2006ರಿಂದ 2013ರವರೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. 2013ರಲ್ಲಿ ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಗೆ ಆಯ್ಕೆಯಾದರು. ಇದೀಗ 2018ರ ಜುಲೈನಲ್ಲಿ ಆರಿಫ್ ಅಲ್ವಿ ಮರು ಆಯ್ಕೆಯಾದರು. ಅಲ್ವಿ ಅವರಿಗೆ ಪತ್ನಿ ಸಮೀನ್ ಹಾಗೂ ನಾಲ್ವರು ಮಕ್ಕಳಿದ್ದಾರೆ.

ಇಂದಿರಾಗಿತ್ತೆ ನೆಹರೂ ಸೆಕ್ರೆಟರಿ ಜೊತೆ ಸೀಕ್ರೆಟ್ ಸಂಬಂಧ?

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pakistan's newly elected President Dr Arif Alvi shares an interesting connection with India as his father was a dentist to India's first prime minister Jawaharlal Nehru, according to the short biography of the President on the website of his Pakistan Tehreek-i-Insaf party.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more