Pakistan Parliament: ಪಾಕಿಸ್ತಾನ ಸಂಸತ್‌ ವಿಸರ್ಜನೆಗೆ ಮುಹೂರ್ತ!

ಇಸ್ಲಾಮಾಬಾದ್‌: ಅಂತೂ ಇಂತೂ ಪಾಕಿಸ್ತಾನದ ಸಂಸತ್‌ ವಿಸರ್ಜನೆಗೆ ಮುಹೂರ್ತ ಫಿಕ್ಸ್ ಆಗಿದೆ. ಪಾಕಿಸ್ತಾನ ಸಂಸತ್‌ ವಿಸರ್ಜನೆ ಮಾಡುತ್ತಿರುವುದಾಗಿ ಖುದ್ದು ಪಾಕ್ ಪ್ರಧಾನಿಯೇ ಮಾಹಿತಿ ನೀಡಿದ್ದಾರೆ. ಹಾಗಾದರೆ ದಿಢೀರ್ ಈ ನಿರ್ಧಾರ ಯಾಕೆ? ಹಾಗಾದರೆ ಪಾಕಿಸ್ತಾನ ಸಂಸತ್‌ ವಿಸರ್ಜನೆ ದಿನಾಂಕ ಯಾವಾಗ? ಅದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ಹೌದು, ಆಗಸ್ಟ್‌ 9ರಂದು ಸಂಸತ್‌ ವಿಸರ್ಜನೆ ಮಾಡುವುದಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಮಾಹಿತಿ ನೀಡಿದ್ದಾರೆ. ಮಹತ್ವದ ಸಂಗತಿ ಏನೆಂದರೆ ಸಂಸತ್ತಿನ ಕೆಳಮನೆಯ ಅವಧಿ ಮುಕ್ತಾಯಕ್ಕೆ ಇನ್ನೂ 3 ವರ್ಷ ಬಾಕಿ ಇದೆ, ಆದರೂ ವಿಸರ್ಜನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ವಿಸರ್ಜನೆ ಮಾಡಿದ 90 ದಿನಗಳ ಒಳಗೆ ಚುನಾವಣೆ ನಡೆಯುವ ನಿರೀಕ್ಷೆಯೂ ಇದೆ. ಪಾಕ್ ಪ್ರಧಾನಿ ನಿವಾಸದಲ್ಲಿ ಮಿತ್ರಪಕ್ಷಗಳಿಗಾಗಿ ಆಯೋಜಿಸಿದ್ದ ಭೋಜನ ಕೂಟದಲ್ಲಿ, ಪಾಕ್ ಪ್ರಧಾನಿ ಶೆಹಬಾಜ್‌ ಈ ಘೋಷಣೆಯನ್ನ ಮಾಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ.

Pakistan National Assembly to be dissolved on next week

ಇಮ್ರಾನ್ ಖಾನ್ ಪಕ್ಷಕ್ಕೆ ಅಗ್ನಿಪರೀಕ್ಷೆ!

ಪಾಕಿಸ್ತಾನ ಈಗಾಗಲೇ ಹೊತ್ತಿ ಉರಿಯುತ್ತಿದೆ. ಅದರಲ್ಲೂ ಇಮ್ರಾನ್ ಬಂಧನದ ಬಳಿಕ ಈ ತಿಕ್ಕಾಟ ಮುಗಿಲು ಮುಟ್ಟಿತ್ತು. ಈಗ ಸಂಸತ್‌ ವಿಸರ್ಜನೆ ಮಾಡುವ ತೀರ್ಮಾನ ಕೈಗೊಂಡು ಚುನಾವಣೆಗೆ ಸಿದ್ಧತೆ ನಡೆಸಲಾಗಿದೆ. ಸಂಸತ್‌ ವಿಸರ್ಜನೆ ಮಾಡುವ ಬಗ್ಗೆ ಪ್ರಧಾನಿ ಶೆಹಬಾಜ್‌ ಅಧ್ಯಕ್ಷ ಆರೀಫ್ ಅಲವಿಗೆ ಆಗಸ್ಟ್‌ 9ಕ್ಕೆ ಅಧಿಸೂಚನೆ ಕಳುಹಿಸುವ ಸಾಧ್ಯತೆ ಇದೆ. ಪಾಕಿಸ್ತಾನದ ಸಂವಿಧಾನದ ಪ್ರಕಾರ ಪ್ರಧಾನಿ ಕಳುಹಿಸಿದ ಅಧಿಸೂಚನೆಗೆ ರಾಷ್ಟ್ರಪತಿ ಮುದ್ರೆ ಬಿದ್ದ ಕೂಡಲೇ ಸಂಸತ್‌ ವಿಸರ್ಜನೆಯಾಗಲಿದೆ. ಹೀಗಾಗಿ ಇಮ್ರಾನ್ ಪಕ್ಷ ಗೆಲುವಿಗಾಗಿ ಬೆವರು ಹರಿಸಬೇಕಿದೆ. ಆದರೆ ಆಡಳಿತ ಪಕ್ಷದ ನಾಯಕರು ಇಮ್ರಾನ್ ಖಾನ್ ಪಕ್ಷ ಕಟ್ಟಿಹಾಕಲು ಈಗಾಗಲೇ ತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ.

ಅಧ್ಯಕ್ಷರು ಸಹಿ ಹಾಕದಿದ್ದರೆ ಏನು ಕಥೆ?

ಪಾಕಿಸ್ತಾನದ ಸಂವಿಧಾನದ ಪ್ರಕಾರ ಪ್ರಧಾನಿ ಕಳುಹಿಸಿದ ಅಧಿಸೂಚನೆಗೆ ರಾಷ್ಟ್ರಪತಿ ಮುದ್ರೆ ಬಿದ್ದ ಕೂಡಲೇ ಸಂಸತ್‌ ವಿಸರ್ಜನೆಯಾಗಲಿದೆ. ಅಕಸ್ಮಾತ್ ಅಧ್ಯಕ್ಷರು ಸಹಿ ಮಾಡದಿದ್ದರೂ, ಪ್ರಧಾನಿ ಅಧಿಸೂಚನೆ ಲಭಿಸಿದ 48 ಗಂಟೆಗಳಲ್ಲಿ ಸಂಸತ್‌ ತಾನಾಗಿಯೇ ವಿಸರ್ಜನೆಯಾಗಲಿದೆ. ಹಾಗೇ ಪಾಕ್ ಸಂವಿಧಾನದ ನಿಯಮದ ‍ಪ್ರಕಾರ, ಅಕಸ್ಮಾತ್ ಸರ್ಕಾರ ಅವಧಿ ಪೂರೈಸಿದರೆ 60 ದಿನದ ಒಳಗೆ ಚುನಾವಣೆ ನಡೆಸಬೇಕು. ಅವಧಿಗೂ ಮುನ್ನ ವಿಸರ್ಜನೆ ಮಾಡಿದರೆ 90 ದಿನ ಸಮಯ ಸಿಗಲಿದೆ. ಹೀಗಾಗಿ ಪಾಕಿಸ್ತಾನ ಚುನಾವಣೆ ಜಗತ್ತಿನ ಗಮನ ಸೆಳೆಯುವುದು ಪಕ್ಕಾ ಎನ್ನಬಹುದು. ಇದರ ಜೊತೆಗೆ ಉಗ್ರರ ದಾಳಿ ಭಯ ಕೂಡ ಆವರಿಸಿದೆ.

Pakistan National Assembly to be dissolved on next week

ಸಂಸತ್ ವಿಸರ್ಜನೆ ಹೊತ್ತಲ್ಲೇ ಸಂಚಲನ!

ಪಾಕಿಸ್ತಾನ ಆರ್ಥಿಕವಾಗಿ ದಿವಾಳಿ ಆಗಿದ್ರೂ ಪಾಕ್ ನಾಯಕರ ಗನ್, ಬಾಂಬ್‌ಗಳ ಮೇಲಿನ ಪ್ರೀತಿ ಮೇಲೆ ಕೊರತೆ ಉಂಟಾಗಿಲ್ಲ. ಹೀಗಾಗಿ ಸಂವಹನ & ಭದ್ರತೆಗೆ ಸಂಬಂಧಿಸಿದ ಸಿಐಎಸ್‌-ಎಂಒಎ ಒಪ್ಪಂದಕ್ಕೆ ಸಹಿ ಹಾಕಲು ಪಾಕಿಸ್ತಾನ ಸಚಿವ ಸಂಪುಟ ಅನುಮೋದಿಸಿದೆ. ಇನ್ನೂ ಈ ಕ್ರಮದಿಂದ ಪಾಕಿಸ್ತಾನ ಮತ್ತು ಅಮೆರಿಕ ನಡುವೆ ಸೇನಾ ಪರಿಕರಗಳ ಖರೀದಿಗೆ ಸಹಾಯ ಆಗಲಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹೀಗೆ ಸಂಸತ್ ವಿಸರ್ಜನೆಯ ಕೊನೇ ಹಂತದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವುದು ಸಂಚಲನ ಸೃಷ್ಟಿ ಮಾಡಿದೆ.

Pakistan National Assembly to be dissolved on next week

ಅಮೆರಿಕ & ಪಾಕಿಸ್ತಾನ ಮತ್ತೆ ದೋಸ್ತಿ?

ಪಾಕಿಸ್ತಾನಕ್ಕೆ ದಿಢೀರ್ ಅಮೆರಿಕದ ಮೇಲೆ ಇಷ್ಟೊಂದು ಒಲವು ಮೂಡಲು ಕಾರಣ ಬೇರೆ ಇದೆ. ಆದ್ರೆ ಇಲ್ಲಿ ಮುಖ್ಯವಾಗಿ ಮಿಲಿಟರಿ ಒಪ್ಪಂದಗಳಿಗೆ ಒತ್ತು ನೀಡುತ್ತಿರುವ ಚರ್ಚೆಯು ಶುರುವಾಗಿದೆ. ಅಷ್ಟಕ್ಕೂ ಪಾಕಿಸ್ತಾನ ಮತ್ತು ಅಮೆರಿಕ ನಡುವೆ 2005ರಲ್ಲಿ ಒಪ್ಪಂದವಾಗಿ, ಅಮೆರಿಕ ಸೇನಾ ಪರಿಕರಗಳ ಮಾರಾಟ ಮಾಡಲು ದಾರಿ ಸುಲಭವಾಗಿತ್ತು. ಆದರೆ ಒಪ್ಪಂದ 2020ರಲ್ಲಿ ಮುಗಿದಿದ್ದ ಕಾರಣ ಇದೀಗ ಮತ್ತೆ ಒಪ್ಪಂದ ಮಾಡಿಕೊಳ್ಳಲು ಪಾಕ್ ಸರ್ಕಾರವು ಮುಂದಾಗಿದೆ. ಹೊಸ ಒಪ್ಪಂದದ ಅನುಸಾರ ಅಮೆರಿಕ ಸೇನಾ ಪರಿಕರಗಳ ಹಾರ್ಡ್‌ವೇರ್‌ನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಬಹುದು ಎನ್ನಲಾಗುತ್ತಿದೆ.

ಅನ್ನ ಇಲ್ಲದಿದ್ದರೂ ಶಸ್ತ್ರಾಸ್ತ್ರ ಬೇಕಾ?

ಕೈಗೆ ಸಿಗದ ಹಣದುಬ್ಬರ & ಜೊತೆಯಲ್ಲೇ ಹಣಕಾಸಿನ ಅಸಮತೋಲನ. ಇದೆಲ್ಲವೂ ಸಾಲದು ಎಂಬಂತೆ ಮೈತುಂಬಾ ಸಾಲ ಮಾಡಿಕೊಂಡಿರುವ ಪಾಕಿಸ್ತಾನ ನರಳುತ್ತಿದೆ. ಈಗಾಗಲೇ ಹಲವು ಸರ್ಕಾರಿ ಆಸ್ತಿಗಳನ್ನ ಕೂಡ ಪಾಕಿಸ್ತಾನ ಮಾರಾಟ ಮಾಡಿದೆ. ತುರ್ತು ನಿಧಿ ಸಂಗ್ರಹಿಸಲು ಹೊಸ ಕಾನೂನು ಜಾರಿ ತಂದಿರುವ ಪಾಕ್ ರಾಜಕಾರಣಿಗಳು ದೇಶವನ್ನ ಮಾರುತ್ತಿದ್ದಾರೆಂಬ ಆರೋಪ ಇದೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಚೀನಾ ನೆರವಿನ ಹಸ್ತ ಚಾಚುತ್ತಿದೆ. ಆದರೂ ಸ್ಥಿತಿ ಸರಿ ಹೋಗುತ್ತಿಲ್ಲ, ಇಷ್ಟೆಲ್ಲಾ ಸಮಸ್ಯೆ ಇದ್ದರೂ ಪಾಕಿಸ್ತಾನ ಮಾತ್ರ ತನ್ನ ಯುದ್ಧದಾಹ ಬಿಡುತ್ತಿಲ್ಲ. ಇದೀಗ ಸಂಸತ್ ವಿಸರ್ಜನೆ ಮಾಡಿ ಚುನಾವಣೆಗೆ ಸಜ್ಜಾಗುತ್ತಿದೆ ಪಾಕಿಸ್ತಾನ.

Pakistan National Assembly to be dissolved on next week

ಪಾಕ್‌ನಲ್ಲಿ ಅರಾಜಕೀಯ ತಾಂಡವ ಆಡುವ ಸಮಯದಲ್ಲೇ ಸಂಸತ್ ವಿಸರ್ಜನೆಯಂತಹ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಅದರಲ್ಲೂ ಮೊನ್ನೆ ಮೊನ್ನೆಯಷ್ಟೇ ಉಗ್ರರು ಪಾಕಿಸ್ತಾನದ ಜನರ ರಕ್ತ ಹರಿಸಿದ್ದಾರೆ. ಹೀಗಾಗಿ ಚುನಾವಣೆ ಘೋಷಣೆಯಾದರೆ ಪರಿಸ್ಥಿತಿ ಮತ್ತೆ ಕೈಮೀರಿ ಹೋಗುವ ಆತಂಕ ಕೂಡ ಆವರಿಸಿದೆ. ಇದು ಪಾಕಿಸ್ತಾನದ ಸಾಮಾನ್ಯ ಜನರು ನೆಮ್ಮದಿಗೆ ಪದೇ ಪದೆ ಕೊಳ್ಳಿ ಇಡುತ್ತಿರುವುದು ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+